ಗೆಳತಿಯರು ಕಾಣೆಯಾಗಿದ್ದಾರೆ

Share Button

.

ಬೆಳಗೆದ್ದು ಅಮ್ಮ ಮಾಡಿಡುತ್ತಿದ್ದ ತಿಂಡಿಗೆ
ಚೂಸಿಯಾಗಿದ್ದ ಗೆಳತಿಗೆ
ಫೋನ್ ಮಾಡಿದರೆ
ಬ್ಯೂಸಿ ಎಂಬ ಕೂಗು,
.
ಡಿಗ್ರಿಯಲ್ಲಿ ಆರೇಳು ಗೋಲ್ಡ ಮೆಡಲ್‍ಗಳನ್ನು
ಕುತ್ತಿಗೆಗೆ ನೇತುಕೊಂಡು
ಫೋಸ್ ನೀಡಿದ್ದ ಗೆಳತಿಯನ್ನು
ವಿಚಾರಿಸಿದೆ,ಅವಳೂ ಬ್ಯೂಸಿ
.
ಇನ್ನೊಂದು ಗೆಳತಿಯ ಮನೆಯ
ಸಂದೂಕಿನ ಸಂದಿಯೊಳಗೆ
ಅವಿತ ಹಾಳೆಯಲ್ಲಿನ ಕವಿತೆಯ ಕೇಳಿದೆ
ನಿನ್ನ ಜನ್ಮದಾತೆ ಎಲ್ಲಿ?
.
ಆಫೀಸಿನಿಂದ ಬಂದೊಡನೆ
‘ಟೀ’ ಎಂದು ಕೂಗುತ್ತಿದ್ದ
ಗೆಳತಿಗೆ,ಆಫೀಸು ಮುಗಿದ ಮೇಲೆ
ಟಿ ಕುಡಿಯೋಣವೆಂದೆ,
ಏನಾಶ್ಚರ್ಯ?
ಅವಳಿಗೆ ಟಿ ಕುಡಿಯಲು ಸಮಯವಿಲ್ಲವಂತೆ,
.
ಅಪ್ಪನ ಮುದ್ದಿನ ಮಗಳು,
ಅಣ್ಣನ ಬೇಜವಾಬ್ದಾರಿ ತಂಗಿ,
ಹೀಗೆ ಅನೇಕ ಗೆಳತಿಯರು,
ಇಂದು ಕಾಣೆಯಾಗಿದ್ದಾರೆ,
ತಾಯಿ ಋಣವ ತೀರಿಸಿದಕೆ
ಸಂತೃಪ್ತಭಾವನೆಯ ಹುಡುಕಿಕೊಂಡಿದ್ದಾರೆ.
.
-ಬೀನಾ ಶಿವಪ್ರಸಾದ
.

2 Responses

  1. ನಯನ ಬಜಕೂಡ್ಲು says:

    ಈ ಕವಿತೆಯನ್ನು ಓದುವ ಪ್ರತಿಯೊಂದು ಹೆಣ್ಣಿಗೂ ಒಹ್, ಇದು ನನ್ನದೇ ವ್ಯಥೆ ಅನ್ನಿಸುವಂತಹ ಸಾಲುಗಳು. ನಿಜ ಬಿಡುವಿಲ್ಲದ ಧಾವಂತದ ಬದುಕಿನಲ್ಲಿ ದಿನ ದಿನವೂ ಕಳೆದು ಹೋಗುತ್ತಿದ್ದೇವೆ . ನಮ್ಮ ಆಸಕ್ತಿ , ನಮ್ಮ ಹವ್ಯಾಸಕ್ಕೆ ಸಮಯ ಹೊಂದಿಸಿಕೊಳ್ಳಲು ಅದೆಷ್ಟೊಂದು ಪಾಡು ಪಡಬೇಕು .ಎಲ್ಲಾ ಕಟ್ಟು ಪಾಡುಗಳ ತೊರೆದು ಸಾಗು ಅನ್ನುತ್ತದೆ ಮನ , ಆದರೆ ಇದು ಅಸಾಧ್ಯ , ಮತ್ತು ಸರಿಯೂ ಅಲ್ಲ , ಬದುಕಿನ ಎಲ್ಲ ಸವಾಲುಗಳ ನಾವು ಎದುರಿಸುತ್ತಲೇ ಗೆಲ್ಲಬೇಕು ನಾವು . ಚಂದದ ಕವನ

  2. Shankari Sharma says:

    ಹೌದು…ಇದು ನಮ್ಮೆಲ್ಲರ ಕವನ..ಮನ ಮುಟ್ಟುವುದರ ಜೊತೆಗೆ, ಮುಳ್ಳೊಂದು ಚುಚ್ಚಿದ ಭಾಸ! ಒಳ್ಳೆಯ ಕವನ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: