ಬದಲು
ನಮ್ಮ ಪಾಪದ ಹಾಗೆ
ಲೋಕದ ಲೆಕ್ಕವೂ
ಅದಲು ಬದಲು
ಆಟಕ್ಕೆ ಕಣವ ಕಟ್ಟುವುದು
ಈಗೀಗ ಮಳೆ ಬರುವುದೆಂದರೆ
ಆನಂದ ಸ್ಪಂದಜೀವ
ಸಂವಾದವಲ್ಲ
ಜೀವ ಜೋಪಾನದ ಜಂಜಾಟ.
ಬರಲಾರದು ಮತ್ತೆ
ಮಳೆಯ ಮುತ್ತಿಗೆ
ತೊಗಲಬಟ್ಟೆಯಲ್ಲೇ
ಹೊರಗೋಡಿ ಬೆನ್ನುಬಾಗಿಸಿ
ನಿಲ್ಲುತ್ತ ಕನಸಿದ ಕಾಲ.
ಎಷ್ಟೋ ಬಾರಿಕಣ್ಣಿಗೆ
ಎಣ್ಣೆ ಬಿಟ್ಟುಕೊಂಡೇ
ಕಾಣದಕಾರದ ಹನಿಗಾಗಿ
ಕಾಯುತ್ತ
ಕಾಲವಾದರೂ ಕರಗುವುದಿಲ್ಲ
ಮಾಯಾವಿ.
ಕೆಲವೊಮ್ಮೆ ಶಿವರಾತ್ರಿಯ
ಜಾಗರಣೆ
ತಲೆ ಎತ್ತರಕ್ಕೂ ಏರಿ ಇಲ್ಲ
ಒಳ ಕೋಣೆಯವರೆಗೂ ನುಗ್ಗಿ,
ಚತುಷ್ಪಥದ ಹೆದ್ದಾರಿಯ ಗುಂಟ
ಐಶಾರಾಮಿ ಕಾರಿನ ಮಾಲೀಕರನ್ನು
ಬಿಡದೇ ಕಾಡುತ್ತದೆ.
ಕೈಯಲ್ಲಿ ಹಿಡಿದುಕೊಂಡೇ ಜೀವಗಳು
ಚಡಪಡಿಸುತ್ತವೆ.
ಹೊತ್ತ ಗೂಡಿಗೆ ಅಂಬುನೆಡುವವನ
ಕಂಡು ಹೆತ್ತವ್ವ ಹೆಮ್ಮಾರಿಯಾದಳೇ?
-ನಾಗರೇಖಾ ಗಾಂವ್ಕರ್
ವಾಸ್ತವದ ಚಿತ್ರಣ. ಮಾಡಿದ್ದುಣ್ಣೋ ಮಹಾರಾಯ ಅನ್ನುವ ಹಾಗೆ ನಾವು ಮಾಡಿದ ಕರ್ಮಗಳೇ ಹೀಗೆ ಅತಿವೃಷ್ಟಿಯಾಗಿ ನಮ್ಮನ್ನು ಸುತ್ತುತ್ತಿವೆ . Nice one
ಧನ್ಯವಾದಗಳು.
ಪ್ರತಿಕ್ರಿಯೆಗೆ.
Life is sweet.but
We making it bitter.
Thank u
ಮಾಯಿ ಮಳೆಯನ್ನೇ ‘ಮಾರಿ’ ಮಾಡಿಕೊಂಡ ಅಭಾಗ್ಯರು ನಾವು… ನಿಮ್ಮ ಕವನ ಮಳೆಯ ಅನಾಹುತಗಳ ಚಿತ್ರಣವಾಗಿದೆ…
Thank u for ur response
ಪ್ರಕೃತಿ ವಿಕೋಪ..ಮಾನವ ನಿರ್ಮಿತ..
ಯೋಚನೆಗೆ ಹಚ್ಚುವ ಕವನ
ಧನ್ಯವಾದ