ಅರಿವೆಂಬ ಹಣತೆ

Share Button

ಹಳೆಯ ತಾಮ್ರದ ಹಂಡೆ, ಕಟ್ಟಿಗೆ ಒಲೆ,
ಮರುಗುತ್ತಾ ಕೂರದಿರು ಸೇರಿತೆಂದು  ಮೂಲೆ,
ಹಬ್ಬವೆಂಬ ಸಡಗರ, ಸಂಭ್ರಮ ಆಗಮಿಸೋ ವೇಳೆ,
ಬದಲಾದ ಕಾಲದೊಡನೆ  ಸಾಗುವುದರಲ್ಲೇ
ಇಹುದು ಅರಿ ನೀ ಬದುಕಿನ ನೆಲೆ.

ಹೋಗುವುದೇ  ನಿಯಮ
ಕಾಲ ಸರಿದು ,
ಸಾಗಬೇಕಿಲ್ಲಿ ಬದಲಾವಣೆಯ ಜಗಕೆ ತನ್ನ ತಾನು ತೆರೆದು,
ಕೂರದಿರು ಸಾಧಿಸುತ್ತಾ  ಛಲ , ತನ್ನ ಹಠವ ಹಿಡಿದು,
ನಿನ್ನದೇ ಇಲ್ಲಿ ಸಂತಸ ಹಾಕಲು ಹೆಜ್ಜೆ
ಬದಲಾದ ಕಾಲಗತಿಯ  ಅರಿತು.

ನಿನ್ನೆಗಳೋ ಸುಂದರ ನೆನಪು,
ಹೊಸದರಲ್ಲೂ ಇಹುದು ನೋಡೋಂದು  ಹೊಳಪು,
ಹಳೆ ಬೇರು ಹೊಸ ಚಿಗುರೆಂಬ ಸಾಲಿನ ಕಂಪು,
ಗುರುತಿಸಿ ಸಂಭ್ರಮಿಸಿ ಹೊಂದು ಮನವೇ ಹುರುಪು.

ಇಂದು -ನಿನ್ನೆಗಳ  ನಡುವಣ,
ಸಿಲುಕಿ ಕಮರದಿರಲಿ ಜೀವನ,
ಹಚ್ಚುತ್ತಾ ಹಣತೆಯ ಜೊತೆ ಜೊತೆಗೆ
ಮನದಲ್ಲಿ ಅರಿವಿನ ಬೆಳಕನ್ನ ,
ಝಗಮಗಿಸಿ ಬೆಳಕಾಗಿಸು  ಬಾಳೆಂಬ ಹೂ ಬನ.

ಅಂಗಳದಿ ಎಳೆದ  ರಂಗೋಲಿ,
ಹಾಡಿಹುದು ಸಂತಸದ ಸುವ್ವಾಲಿ,
ತುಂಬಲಿ ಎಲ್ಲಾ ಹೃನ್ಮನಗಳಲಿ,
ನೆಮ್ಮದಿ, ನಗು, ಸಂತಸವ
ಸಾಲು ದೀಪಗಳ ದೀಪಾವಳಿ.

  –  ನಯನ ಬಜಕೂಡ್ಲು

8 Responses

  1. Hema says:

    ಕವನ ಸೊಗಸಾಗಿದೆ…ಹೌದು, ಹಂಡೆನೀರಿನ ಸ್ನಾನ ಈಗ ನಗರದ ಮನೆಗಳಲ್ಲಿ ನೆನಪು ಮಾತ್ರ..

  2. Harshitha says:

    ಬಹಳ ಅರ್ಥಪೂರ್ಣವಾದ ಕವನ ಮೇಡಮ್..

  3. ASHA nooji says:

    ಕವನಗಳ ಸಾಲು ಚೆನ್ನಾಗಿದೆ .

  4. KRISHNAPRABHA M says:

    ಹಳೆಯದನು ಮರೆಯದೆ, ಹೊಸತನಕೆ ತೆರೆದುಕೊಂಡರೆ ಬದುಕು ನಿತ್ಯ ನೂತನ….ನಯನಾರಿಂದ
    ಚಂದದ ಕವನ

  5. Vijaya S.P says:

    ಒಳ್ಳೆಯ ಚಿಂತನೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: