ಹಳೆಯ ವಸ್ತುವಿಗೆ ಹೊಸ ರೂಪ

Share Button


ಕಸದಿಂದ ರಸ ಎನ್ನುವ ಮಾತುಜನ ಜನಿತ. ಇದು ಮನೆಯ ಅಲಂಕಾರಕ್ಕೂ ಅನ್ವಯವಾಗುತ್ತದೆ. ಬೇಡವೆಂದು ಬಿಸಾಡುವ ವಸ್ತುಗಳಿಗೆ ಹೊಸ ರೂಪು ನೀಡಿ ಮನೆಯ ಅಂದ ಹೆಚ್ಚಿಸಲು ಸಾಧ್ಯವಿದೆ. ಇದಕ್ಕೆ ಒಂದಷ್ಟು ಕ್ರಿಯಾಶೀಲತೆ ಮತ್ತು ತಾಳ್ಮೆ ಇದ್ದರೆ ಸಾಕು. ಮನೆಯಲ್ಲಿರುವ ಹಳೆಯ ವಸ್ತುಗಳನ್ನು ವ್ಯರ್ಥವೆಂದು ಬಿಸಾಡುವವರು ಸಾಕಷ್ಟು ಜನರಿದ್ದಾರೆ. ಇವುಗಳಲ್ಲಿ ಬಹುತೇಕ ತ್ಯಾಜ್ಯ ವಸ್ತುಗಳಿಗೆ ಹೊಸ ರೂಪ ನೀಡಲು ಸಾದ್ಯವಿದೆ. ಇವುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಮಾರ್ಪಡಿಸಿ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ  ಪುಷ್ಪಇವರೇ ಸಾಕ್ಷಿ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಸ್ವಸಹಾಯ ಸಂಘಗಳ ಮಳಿಗೆಯಲ್ಲಿ ಹಳೆಯ ಉಡುಪುಗಳಿಂದ ಮ್ಯಾಟ್‌ ತಯಾರಿಸುವ ದೃಶ್ಯ ಜನರ ಗಮನ ಸೆಳೆಯುತ್ತಿದೆ. ಧರ್ಮಸ್ಥಳ ಗ್ರಾಮದ ದೊಂಡೋಲೆಯ ನಾರ್ಯ ಎಂಬಲ್ಲಿನ ಪುಷ್ಪ ಬಿಡುವಿನ ಸಮಯದಲ್ಲಿ ತನ್ನ ತಾಯಿ  ಕಲಿಸಿದ ವಿದ್ಯೆಯನ್ನು ಕರಗತ ಮಾಡಿಕೊಂಡು ವ್ಯರ್ಥಪೂರ್ಣವಾದ ವಸ್ತುಗಳನ್ನು ಅರ್ಥಪೂರ್ಣವಾಗಿಸಿ ದಿನಬಳಕೆಗೆ ಉಪಯೋಗಿಸುವಂತೆ ಮಾರ್ಪಾಡು ಮಾಡುತ್ತಿದ್ದಾರೆ.

ಇವರು ಸುಮಾರು ಐದು ವರ್ಷಗಳಿಂದ ಈ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಇದನ್ನು ಕೈಯಲ್ಲೇ ಸಿದ್ಧಪಡಿಸುತ್ತಿದ್ದು, ಇವುಗಳಲ್ಲಿ ತ್ರಿಭುಜಾಕಾರ, ನಕ್ಷತ್ರಾಕಾರ, ಚೌಕಾಕಾರ, ವೃತ್ತಾಕಾರ ಇನ್ನುಇತರ ಶೈಲಿಯ ಮಾದರಿಗಳಿವೆ.ಅವರ ಮನೆಯಲ್ಲಿ ತಯಾರಿಸಿದ ಮ್ಯಾಟ್‌ಗಳನ್ನು ಸೂಕ್ತವಾದ ಬೆಲೆಗೆ ಮಾರಾಟ ಮಾಡುತ್ತಾರೆ. ಇದಲ್ಲದೇ ತಮ್ಮ ಬಿಡುವಿನ ವೇಳೆಯಲ್ಲಿ ಆಸಕ್ತಿಯುಳ್ಳವರಿಗೆ ಮಾರ್ಗದರ್ಶನ ನೀಡುತ್ತಾರೆ.

ಇದರ ವಿಶೇಷತೆಯೇನೆಂದರೆ ಕಡಿಮೆ ಬೆಲೆಗೆ ಸಿಗುವುದಲ್ಲದೇ ತುಂಬಾ ವರ್ಷಗಳ ಕಾಲ ಬಾಳಿಕೆ ಬರುವ ಗುಣಮಟ್ಟವುಳ್ಳ ಗೃಹೋಪಯೋಗಿ ವಸ್ತುವಾಗಿದ್ದು ಯಾವುದೇ ರೀತಿಯ ಬಟ್ಟೆಗಳಿಂದ ಬೇಕಾದ ಶೈಲಿ, ಆಕಾರದಲ್ಲಿ ತಯಾರಿಸಬಹುದು. ಹೀಗೆ ಎಷ್ಟೋ ಬಳಕೆಯಾಗದ ವಸ್ತುಗಳು ನಮ್ಮ ಸುತ್ತ-ಮುತ್ತಲಿನಲ್ಲೇ ಇರುತ್ತವೆ. ಅಂತಹುವುಗಳನ್ನೇ ಬಳಸಿ ಹೇಗೆ ಉಪಯುಕ್ತಗೊಳಿಸಬೇಕು ಎಂಬುದನ್ನು ಪುಷ್ಪ ಅವರ ಕೌಶಲ್ಯ ನಿರೂಪಿಸುತ್ತದೆ.

ವರದಿ – ಚಿತ್ರಗಳು: ಶ್ವೇತಾ. ಮುಂಡ್ರುಪ್ಪಾಡಿ

2 Responses

  1. ನಯನ ಬಜಕೂಡ್ಲು says:

    ಕಸದಿಂದ ರಸ ಮಾತು ಇಲ್ಲಿ ಸೂಕ್ತ , ಹವ್ಯಾಸದ ಜೊತೆಗೆ ಜೀವನೋಪಾಯದ ದಾರಿಯೂ ಆಯಿತು . ನೈಸ್

  2. Shankari Sharma says:

    ಸಮಯದ ಸದುಪಯೋಗದ ಜೊತೆಗೆ ಜೀವನೋಪಾಯಕ್ಕಾಗಿ ಮಾಡುವ ಇಂತಹ ಕೆಲಸಗಳು ಅರ್ಥಪೂರ್ಣ. ಬರಹ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: