ಅಮ್ಮ ಎಂದರೆ ಅಷ್ಟೇ ಸಾಕೆ?

Share Button

ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ತಾಳೆ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗೋದೇ ಆಗ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ!

ಯಾವುದೇ ಪದದಲ್ಲಿ ಅವಳನ್ನು ವರ್ಣಿಸುವುದಕ್ಕೆ ಹೋದರೂ, ಆಕೆಯ ಪಾತ್ರದೆದುರು ಆ ಪದವೇ ಸೋತುಬಿಡುತ್ತದೆ! ಒಂದು ಪದದಲ್ಲಿ, ಒಂದು ವಾಕ್ಯದಲ್ಲಿ, ಒಂದು ಕತೆಯಲ್ಲಿ, ಒಂದು ಹೊತ್ತಿಗೆಯಲ್ಲಿ ಹಿಡಿದಿಡಲು ಸಾಧ್ಯವಾಗದ ಮಹೋನ್ನತ ವ್ಯಕ್ತಿತ್ವ ಅಮ್ಮನದು.[ಅಕ್ಷರದಿಂದ ಅಮ್ಮಂದಿರ ವರ್ಣಿಸಲು ಸಾಧ್ಯವಿಲ್ಲ]
.
ತಾಯಿ ಎಂಬ ಶಿಲ್ಪಿಗೆ ಆಕಾರವಿಲ್ಲದ ಕಲ್ಲನ್ನೂ ಸಂಸ್ಕಾರದ ಉಳಿಪೆಟ್ಟಿನಿಂದ ಪೂಜನೀಯ ಮೂರ್ತಿಯನ್ನಾಗಿಸುವ ತಾಕತ್ತಿದೆ. ಇಂದು ಮಹೋನ್ನತವಾದದ್ದನ್ನು ಸಾಧಿಸಿದ ಶೇ.95 ರಷ್ಟು ಜನರ ಸಾಧನೆಯಲ್ಲಿ ನಿಸ್ಸಂದೇಹವಾಗಿ ಅವರಮ್ಮನ ಬೆವರಿದೆ, ಆಕೆಯ ನಿದ್ದೆಯಿಲ್ಲದ ರಾತ್ರಿಯಿದೆ, ಹಸಿದ ಹೊಟ್ಟೆಯ ತ್ಯಾಗವಿದೆ!'[ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!].  ಸ್ವಂತ ಮಗನಿಂದ ಪರಿತ್ಯಕ್ತಳಾಗಿ ವೃದ್ಧಾಶ್ರಮದ ಮೂಲೆಯೊಂದರಲ್ಲಿ ಕೂತರೂ ಅದೇ ಮಗನ ಬಾಲ್ಯವನ್ನು ನೆನಪಿಸಿಕೊಂಡು ನಸುನಗೆಬೀರುವ, ಆತನ ಭವಿಷ್ಯ ಚೆನ್ನಾಗಿರಲೆಂದು ಎರಡೂ ಕೈಯೆತ್ತಿ ಹಾರೈಸುವ ಆ ದೈವತ್ವದ ಸಾಕಾರ ಮೂರ್ತಿಯನ್ನು ಪುಟ್ಟ ಲೇಖನದಲ್ಲಿ ಕಟ್ಟಿಹಾಕೋಕೆ ಸಾಧ್ಯಾನಾ..?

ಜಗ ಮೆಚ್ಚಿದ ಸಂತನ ಕಣ್ಣಲ್ಲಿ ಅಮ್ಮ:-
ಈಗ ನಾನು ಏನಾಗಿದ್ದೀನೋ, ಅದಕ್ಕೆ ಕಾರಣ ನಮ್ಮಮ್ಮ. ನಾನು ಇನ್ನೇನೇ ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತೂ ಸಾಧ್ಯವಿಲ್ಲ ಎಂಬ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಮಾತು ತಾಯಿ ಎಂಬ ಪಾತ್ರದ ಮಹೋನ್ನತಿಯನ್ನು ಪ್ರಸ್ತುತಪಡಿಸುತ್ತದೆ..

ತಾಯಿಗಿಂತ ದೊಡ್ಡದು ಇನ್ನೇನೂ ಇಲ್ಲ:-
ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ, ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಅಂದರೆ ಇಡೀ ದೇಶದ ಖುಷಿ ತಾಯಿಯ ಮೇಲೆ ನಿಂತಿದೆ ಎಂಬ ಭಾರತದ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಾತಲ್ಲಿ ತಾಯಿಗಿಂತ ದೊಡ್ಡದು ಇನ್ನೇನು ಇಲ್ಲ ಎಂಬ ಭಾವ ವ್ಯಕ್ತವಾಗಿದೆ.
.
ನನ್ನ ತಾಯಿ ನಡೆದಾಡುವ ದೇವರು:-

ದಿ ರೆವೆನೆಂಟ್ ಚಿತ್ರದ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡ ಲಿಯೋನಾರ್ಡೋ ಡಿ ಕ್ಯಾಪ್ರಿಯೋ ತಮ್ಮೆಲ್ಲ ಸಾಧನೆಗೂ ಸ್ಫೂರ್ತಿ ತಮ್ಮಮ್ಮ ಎನ್ನುತ್ತಾರೆ. ನಮ್ಮಮ್ಮ ನನ್ನ ಬದುಕಿನ ನಡೆದಾಡುವ ದೇವರು ಎಂದು ಹೆಮ್ಮೆಯಿಂದ ಕಣ್ತುಂಬಿಸಿಕೊಂಡು ಹೇಳುವ ಅವರ ದನಿಯಲ್ಲಿ ಅಮ್ಮನ ಕುರಿತ ಅವ್ಯಕ್ತ ಪ್ರೀತಿಯ ಮಹಾಪೂರವೇ ಹರಿದಿದೆ.

ಅಮ್ಮನ ಪ್ರಾರ್ಥನೆಗಳೇ ನನ್ನ ಸ್ಫೂರ್ತಿ:-
ನನಗೆ ನಮ್ಮಮ್ಮನ ಪ್ರಾರ್ಥನೆಗಳು ಇಂದಿಗೂ ನೆನಪಿನಲ್ಲಿವೆ. ಅವು ಯಾವತ್ತೂ ನನ್ನನ್ನೇ ಅನುಸರಿಸುತ್ತಿದ್ದವು. ನನ್ನ ಜೀವನದುದ್ದಕ್ಕೂ ನನ್ನನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದು ಅಮ್ಮನ ಪ್ರಾರ್ಥನೆಗಳೇ ಎಂದು ಸದಾ ಅಮ್ಮನ್ನು, ಆಕೆಯ ತ್ಯಾಗವನ್ನು ನೆನಪಿಸಿಕೊಳ್ಳುತ್ತಿದ್ದರಂತೆ ಅಮೆರಿಕದ 16 ನೇ ಅಧ್ಯಕ್ಷ ಅಬ್ರಾಹಂ ಲಿಂಕನ್.

ಈ ಜಗತ್ತಿನಲ್ಲಿ ತಾಯಿಗೆ ಎಲ್ಲರೂ ತಲೆ ಬಾಗುತ್ತಾರೆ. ತಾಯಿಯೇ ನಿಜವಾದ ದೇವರು. ನಾವು ಎಷ್ಟೇ ದೊಡ್ಡ ವ್ಯಕ್ತಿ ಆದ್ರೂ ಕೂಡ ತಾಯಿಯ ಮುಂದೆ ಎಂದು ಸಣ್ಣ ಮಗುವೆ.

-ವಿದ್ಯಾ ಶ್ರೀ ಬಿ , ಬಳ್ಳಾರಿ
,

3 Responses

  1. Shankari Sharma says:

    ಅಗಣಿತ ಗುಣಗಳ ಖನಿ… ಎಲ್ಲರ ಅಮ್ಮ… ಮಪ ಮುಟ್ಟುವ ಸುಂದರ ಲೇಖನ

  2. Anonymous says:

    SUPER

  3. ASHA nooji says:

    SUPER

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: