ಸಾಲು ಮರದ ತಿಮ್ಮಕ್ಕ
ಸಾಲು ಮರದ ತಿಮ್ಮಕ್ಕ
ನೀ ನೆಟ್ಟ ಮರ ಇಲ್ಲೇ !! ಪ!!
ಸಾಲು ಸಾಲು ಮರಗಳನು
ಮಕ್ಕಳಂತೆ ನೀ ಸಲುಹಿದೆ
ಮಕ್ಕಳಿಲ್ಲದಿರೆ ಏನಂತೆ
ಮರವೇ ಮಕ್ಕಳು ನಿನಗೆ !! ೧!!
ಹಾಲು ಅನ್ನ ಉಣಿಸಿಲ್ಲ
ನೀರುಣಿಸಿಯೇ ನೀ ಬೆಳೆಸಿದೆ
ಮರಗಳೆಂಬ ನಿನ್ನ ಮಕ್ಕಳು
ಜಗಕೇ ತಂಪಾದರಿಲ್ಲೇ !! ೨ !!
ಪ್ರತಿಫಲ ನೀ ಬಯಸಿಲ್ಲ
ನಿನ್ನತನವ ಮರೆತಿಲ್ಲ
ಜಗವೇ ನಿನ್ನನು ಕಂಡು
ಶರಣೆಂದಿತು ಕೈ ಮುಗಿತು. !!೩ !!
-ಉಮೇಶ ಮುಂಡಳ್ಳಿ ಭಟ್ಕಳ
ಆ ತಾಯಿ ಎಲ್ಲಾ ಕಡೆ ಗಿಡಗಳನ್ನು ನೆಟ್ಟು, ಮರ ಬೆಳೆಸುತಿದ್ದರೂ ಕೂಡ ಹಲವು ಕಡೆ ಜನಗಳಿಗೆ ಇನ್ನೂ ಜ್ಞಾನೋದಯವಾಗಿಲ್ಲ. ಇಲ್ಲಿ ನಮ್ಮ ಊರಲ್ಲಿ ನಮ್ಮ ಕಣ್ಣ ಎದುರೇ ಇದ್ದ 200 ವರ್ಷ ಹಳೆಯ ಮರವನ್ನು ಈ ಕ್ಷಣ ಕಡಿಯುತಿದ್ದಾರೆ, ಅಸಹಾಯಕರಾಗಿ ನೋಡುವುದರ ಹೊರತು ನಮ್ಮಿಂದ ಬೇರೇನೂ ಮಾಡಲಾಗುತ್ತಿಲ್ಲ. ನಿಮ್ಮ ಕವನ ಹಾಗೂ ಪ್ರಸ್ತುತ ಪರಿಸ್ಥಿತಿ ಎರಡರ ತುಲನೆಯಲ್ಲಿ ಮನ ಭಾವುಕ.
ನಿಮ್ಮ ಭಾವನೆ ಖಂಡಿತ ಅರ್ಥವಾಯಿತು. ಆದಷ್ಟು ಜನರಾದರೂ ಮುಂದಿನ ದಿನದಲ್ಲಿ ಈ ಬಗ್ಗೆ ಅರಿತು ನಡೆಯಲಿ. ಧನ್ಯವಾದಗಳು ನಿಮಗೆ
ಪ್ರತಿಫಲ ಬಯಸದ ಕಾಯಕ ಸಾಲು ಮರದ ತಿಮ್ಮಕ್ಕಂದು. ಸಹಜ ಸುಂದರ ಕವನ.
ಧನ್ಯವಾದಗಳು ಮೇಡಂ