ಎಚ್ಚರ ಹೆಣ್ಣೆ..!

Share Button

ನಾರಿ ನಿನಗೂ ಸಮಾನ ಹಕ್ಕಿದೆ
ಬದುಕಿನ ಆಯ್ಕೆ ಮುಕ್ತವಾಗಿದೆ
ಜಾರಿ ಬಿಳಿಸೊ ಜನರ ನಡುವೆ
ನೀನಿಡು ಎಚ್ಚರದಿ ಸಜ್ಜನದ ಹೆಜ್ಜೆ,
.
ಭಕ್ಷಣೆ ಭರದಲಿ ಈ ಜಗ ನುಗ್ಗಿದೆ
ರಕ್ಷಿಸೋ ಕೈಗಳು ಕುಕ್ಕಿ ತಿನ್ನುತ್ತಿವೆ
ಶೋಷಣೆ ಹಿಂಸೆಗಳಿಲ್ಲಿ ಸಾಮಾನ್ಯವು
ಮೆಟ್ಟು ಇದನೆಲ್ಲವ ನೀ ಅಸಾಮಾನ್ಯಳು
.
ಬಿಡುಗಡೆ ಸಿಕ್ಕಿದೆ  ನಿಲುಗಡೆಯಿಲ್ಲದೆ
ಲಘುಲಘು ಮುನ್ನಡೆ ನಿನಗಾಗದು ಹಿನ್ನೆಡೆ
ಜಗವೇ ಹೊಗಳುವ  ಧೈರ್ಯವು ನಿನ್ನದೆ
ಬಗೆಬಗೆ ಬದುಕಿದೆ ಕುಗ್ಗದೆ ನೀ ನೆಡೆ
.
ಬಂಧನದ ಬಾಳು ಇನ್ನಿಲ್ಲವಾಗಿದೆ
ಬಯಕೆಯ ಬಾಗಿಲು ತಾನೇ ತೆರೆದಿದೆ
ಬಯಸಿದ ಬದುಕು ನಿಂಗಾಗಿ ಕಾದಿದೆ
ಬಣ್ಣಿಸಲಸದಳವಾಗಲಿ ಹೆಣ್ಣೇಕೆನ್ನುವಗೆ
.
ಎಚ್ಚರ ಹೆಣ್ಣೆ! ಸ್ವಚ್ಛದಿ ಬಾಳಲು ಪೀಡರು ಬಿಡರು
ಬದುಕಲಿ ಸಿಗಲಿವೆ ಸಾವಿರ ಎಡರು ತೊಡರು
ಮೆಟ್ಟುತ್ತ ಮುನ್ನಡೆ ನೀ, ಶಕ್ತಿಯು  ಹೆಣ್ಣು
ಜಗಜಟ್ಟಿಯು ನೀ, ಮನುಕುಲದ ಕಣ್ಣು

.

-ಶಿವಾನಂದ್ ಕರೂರ್ ಮಠ್, ದಾವಣಗೆರೆ.

4 Responses

 1. Maharaja H Hadadai Nrb says:

  ಹೆಣ್ಣಿನ ಸಾಮಾಜಿಕ ಕ್ರಾಂತಿಯ ಹಕ್ಕಿಗೆ ಮನ್ನಣೆ ಸಿಗಲಿ……..Nice

 2. ನಯನ ಬಜಕೂಡ್ಲು says:

  Superb. ಹೆಣ್ಣುಮಕ್ಕಳು ಮಕ್ಕಳಲ್ಲಿ ಎಲ್ಲವನ್ನೂ ಸಾಧಿಸ ಬಲ್ಲೆ ಅನ್ನುವ ಸ್ಫೂರ್ತಿ ತುಂಬುವ ಸಾಲುಗಳು.

 3. Krishnaprabha says:

  ಇಂತಹ ಕವನಗಳು ಹೆಣ್ಮಕ್ಕಳಿಗೆ ಧೈರ್ಯ ತುಂಬುವ ಟಾನಿಕ್ ಇದ್ದಂತೆ

 4. Shankari Sharma says:

  ಸ್ಫೂರ್ತಿ ತುಂಬುವ ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: