ಕೃಷ್ಣ
ಮೂಡುದಿಕ್ಕಿಗೆ ಮುಖವ ಮಾಡಿ
ಕೇಳಿಕೊಂಡೆ ಕೃಷ್ಣ ಬರಿಯ ಮೋಹವೇನೆ?
ನೆಲದ ಬುಡಕೂ ನಯನ ನೂಕಿ
ಹುಡುಕಿಹೋದೆ ಕೃಷ್ಣ ಬರಿಯ
ದೇಹವೇನೇ?
ಮರದ ನೆತ್ತಿಏರಿ ಹೋದೆ
ಮನದಏಣಿ ಹಾಕುತ
ಮಧುರ ಮನದ ಮುಗ್ಧನಾತ
ನಾನೇ ಮರಳು ಗೋಪಿಕೆ?
ಹೊನಲ ಹಾದಿ ತಡೆಯಬಹುದೇ
ರಾಧೆ ಮನದ ವೇಗವಾ
ಕಡಲ ಮೊರೆತತೂಗಬಹುದೇ?
ಕೃಷ್ಣನೊಡಲ ಮಿಡಿತವಾ?
ಅವನಿಗವಳು ಅವಳಿಗವನು
ಮನವೇ ಮಧುರ ಮಂದಿರ
ಮೀನಮೇಷ ಎಣಿಸುತಿಹುದೇ
ಮನದಘೋರಮರ್ಕಟ
ಹೇಗೆ ಮೇಘ ಸರಿಯುತಿದೆಯೋ
ಕಾಣದೆಡೆಗೆ ಚಲಿಸುತಿದೆಯೋ
ಹಾಗೇ ಬದುಕ ಸಂಭ್ರಮ
ನದಿಯ ಹೊನಲು ಮುಗಿಲ ಬಯಲು
ರಾಧಾ-ಕೃಷ್ಣ ಸಂಗಮ
– ನಾಗರೇಖಾ ಗಾಂವಕರ, ದಾಂಡೇಲಿ
ಚಿತ್ತ ಚೋರ ಕೃಷ್ಣ ನ ಕುರಿತಾದ ಒಂದೊಂದು ಭಾವವೂ ಚಂದ. Nice madam
ಸೊಗಸಾದ ರಾಧಾ ಕೃಷ್ಣರ ಮೋಹಗೀತೆ