ದೇವರು ತಣ್ಣಗಾದನೆ?

Share Button
       ಮನುಜನ ಕಡು
ಸ್ವಾರ್ಥಕ್ಕಿಂದು
ಮಂದಿರ ಮಸೀದಿ
ಚರ್ಚುಗಳೆಲ್ಲ
ಬಾಗಿಲು ಮುಚ್ಚಿವೆ
ದೇವರು ಕೂಡ ಕಂಗಾಲು
.
ಆ ಗ್ರಹ ಈ ಗ್ರಹ
ಗ್ರಹಗತಿಗಳೆಂದು
ಬೊಬ್ಬೆ ಹಾಕುವ
ಸದ್ದುಗಳು ತಣ್ಣಗಾಗಿವೆ
ಸರ್ವಸೃಷ್ಟಿ ಯಾರೆಂದು
ತಿಳಿಯದೇ ದೇವರೂ
ತಣ್ಣಗಾಗಿದ್ದಾನೆ
.
ಮಂಗಳಕ್ಕೆ ಹೋದರು
ಅಂಗಳಕ್ಕೆ ಬಾರದ
ಮಂಗಗಳಾಗಿಹ
ನಮ್ಮಗಳ ಕಂಡು
ಯಮನು ಕೂಡ
ನಾನೇಕೆ ಹೋಗಲಿ
ಅವರೇ ಬರುವುರು
ಬಲು ಬುದ್ಧಿವಂತರೆಂದು
ಅವನೂ ತಣ್ಣಗಾಗಿದ್ದಾನೆ
,
ಬಡವ ಬಲ್ಲಿದ
ಮೇಲು ಕೀಳು
ಜಾತಿಗೊಂದು ನೀತಿ
ಬರೆದುಕೊಂಡವರು
ಮಾಡಿದ ಪಾಪಗಳ
ನೆನೆಯಲು
ಭೂ ಮಡಿಲಲ್ಲಿ
ಮಲಗಲು ಇದೀಗ
ಯಶಸ್ಸು ಕಂಡಂತಿದೆ
.
ದೇವರನ್ನು ದೂರದಿಂದ
ನೋಡಿ ಹೋಗೆಂದವರೇ
ದೂರನಿಂತು ದೇವರಿಗೆ
ಕೈಮುಗಿಯುತಿಹರು
ಕಾಲಚಕ್ರ ತಿರುಗಿಸಿ
ದೇವರು ದಯೆ ತೋರದೆ
ತಣ್ಣಗಾಗಿದ್ದಾನೆ
.
ಮುಟ್ಟುವಂತಿಲ್ಲ
ನಿಲ್ಲುವಂತಿಲ್ಲ
ಕೂರುವಂತಿಲ್ಲ
ಎಲ್ಲವೂ ಗೆರೆ ಎಳೆದು
ನಡೆಯುತ್ತಿದೆ
ಪ್ರಕೃತಿಯ ಉಳಿವಿಗಾಗಿ
ಮೊದಲೇ ಗೆರೆ ಎಳೆದಿದ್ದರೆ..?
.
ಅಹಂ ಎಂಬ
ದೊಡ್ಡ ವೈರಸ್ಸು
ನಮ್ಮೊಳಗಿರುವಾಗ
ಅದು ಹೇಗೆ ಸಿಕ್ಕೀತು
ಇವೆಕ್ಕೆಲ್ಲ ಮದ್ದು
ಇದೆಲ್ಲವೂ
ಕೊನೆಯಾದರೆ
ಸಿಕ್ಕಬಹುದು ಮದ್ದು
ಇಲ್ಲವಾದರೆ ದೇವೇರು
ಆಗಾಗ ಕೊಟ್ಟು
ಸುಮ್ಮನಾಗುವನು ಗುದ್ದು.
.

ಶಿವಾನಂದ್ ಕರೂರ್ ಮಠ್ ,ದಾವಣಗೆರೆ.

3 Responses

  1. Krishnaprabha says:

    ಚೆನ್ನಾಗಿದೆ ಕವನ

  2. ನಯನ ಬಜಕೂಡ್ಲು says:

    ಸತ್ಯ. ✔️ ಮೊದಲೇ ಎಚ್ಛೆತ್ತು ಕೊಂಡಿದ್ದರೆ….

  3. Shankari Sharma says:

    ಹೌದು..ಮನುಜನ ಅಹಂ ಗೆ ಸರಿಯಾಗಿಯೇ ಬಿದ್ದಿದೆ ಗುದ್ದು. ಇನ್ನು ಎದ್ದು ಓಡಾಡಲು ದೇವರ ಪಾದವೇ ಗತಿ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: