ಕುರುಡು ಪಯಣ
ಚೈತನ್ಯ ಜಡವಾಗಿಹುದು
ಬೆಳಕಿರದ ದಾರಿಯಲಿ
ಅರಮನೆಯೆ ಸೆರೆಮನೆಯಹುದು
ಗಹ್ವರಿಯು ಬಾಯ್ಬಿಡದಿರಲಿ ||
ನಿಟ್ಟುಸಿರ ನಿಡುಸುಯ್ದು
ಕುಟುಕುವರು ಚೇಳಂತಿರಲಿ
ಕೊಳ್ಳೆ ಹೊಡೆದರು ಬಂದು
ಶಾಂತಿ ಮನ ಕದಡದಿರಲಿ ||
ಸನ್ಮನದ ಬಾಳುವೆಯೊಂದು
ಸ್ಪಷ್ಟ ನಿಲುವಾಗಿರಲಿ
ಕಷ್ಟ ಕಾರ್ಪಣ್ಯಕ್ಕಿಂದು
ಮನ ಘಾಸಿಗೊಳ್ಳದಿರಲಿ ||
ಕನಸುಗಳು ನೂರಿಹುದೆಂದು
ಹಾಡದಿರು ಚಿತೆಯುರಿಯುವಲ್ಲಿ
ಜಗವು ನೊಂದಿಹುದಿಂದು
ಹೃದಯದಲಿನಿತು ಔದಾರ್ಯವಿರಲಿ ||
ರೋಗ ರುಜಿನಗಳಿಂದು
ನಂಬಿಕೆಯು ಕಾಯುತ್ತಿರಲಿ
ವಂಚನೆಗಳ ಜಾಲಕ್ಕೆಂದು ಬಲಿಯಾಗದಿರಲಿ ||
ಕುರುಡು ಪಯಣಕು ಒಂದು
ದಿಕ್ಸೂಚಿ ಹುಡುಕುತಲಿರಲಿ
ಹೊಡೆತಗಳಿಗೆ ಬದುಕೆಂದು ಸೋಲದಂತಿರಲಿ ||
-ಪ್ರಮೀಳಾ ಚುಳ್ಳಿಕ್ಕಾನ.
ನಿಂತ ನೀರಿನಂತೆ ಇವತ್ತು ಎಲ್ಲರ ಬದುಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭರವಸೆ ಮರೆಯಾಗದಂತೆ ಕಾಯ್ದುಕೊಳ್ಳುವ ಸಂದೇಶ ಹೊತ್ತ ಸಾಲುಗಳು.
ಬದುಕಲ್ಲಿ ಧೈರ್ಯ ಸದಾ ಜೊತೆಯಿರಬೇಕು. ಕುಹಕದ ಮಾತುಗಳಿಗೆ ನೋಯಬಾರದು. ಕಷ್ಟ ಸುಖ ಎರಡನ್ನೂ ಸಮಾನವಾಗಿ ಕಾಣಬೇಕು. ಒಳ್ಳೆಯ ಕವನ
ಚಂದದ ಕವನ