ಗೌರವ

Share Button

ಜೀವ ಭಯದಲಿ
ಭಾವ ನಡುಗಿದೆ
ನೋವು ಮೀಟಿದೆ ಮೈಮನಾ |
ಕಾವ ದೇವನು
ಯಾವ ಹೂವನೊ,
ಸಾವು ಸನಿಹವೆ ರಿಂಗಣಾ ||೧||

ಬಂಧ ಮೆರೆವುದು
ನಿಂದು ಬೆರೆತರೆ
ಬಂದು ಕಾಡದು ಬೇಗುದೀ|
ಚಂದ ಬಾಳುವೆ
ಮುಂದೆ ಬೆಳೆದೊಡೆ
ಬಂಧು ಬಂಧವು ಸನಿಹದೀ ||೨||

ಬಾರಿ ಬಾರಿಯು
ದಾರಿ ಸಿಗದೆಯೆ
ಕಾರಿರುಳಿನಾ ಕತ್ತಲೇ  |
ಚೀರಿ ಕರೆದರು
ಯಾರು ಬಾರರು
ಬೇರು ಕಳಚಿತೆ ಮಾಮರಾ ||೩||

ನೆನೆದು ಬದುಕುವ
ಜನರ ಸಾಧನೆ
ಮನದ ಭಾವವ ಮೆಚ್ಚುವಾ |
ತಿನುವ ತಿನಿಸಿನ
ಜಿನಸು ತುತ್ತನು
ಮನದಿ ನೇಹದಿ ಹಂಚುವಾ ||೪||

ಬಸಿದು ಬೆವರನು
ಕುಸಿದು ಕೂರದೆ
ಹುಸಿಯ ಭಾವವ ತೋರದೇ |
ಹಸನು ಜೀವನ
ಕುಸುಮ ಗಂಧವ
ಬೆಸೆದ ಜೀವಕೆ ಬೀರುವಾ ||೫||

ಸುರಿವ ಜೇನನು
ಮರೆತು ನೋವನು
ತೆರೆದು ಬೆಳಗುವ ಬೆಳಕನೂ|
ಹಿರಿಯ ಜೀವವ
ಮೆರೆಸಿ ಮಿರುಗುವ
ಹಿರಿಮೆ ಗೌರವ ನೀಡುವಾ ||೬||

(ಜಲ ಷಟ್ಪದಿ)

-ಪ್ರಮೀಳಾ ಚುಳ್ಳಿಕ್ಕಾನ.

    

3 Responses

  1. ಕಣಿಪುರೇಶ ಪ್ರಿಯ. says:

    ಚೆನ್ನಾಗಿದೆ….ಷಟ್ಪದಿ.

  2. ಶಂಕರಿ ಶರ್ಮ says:

    ಚಂದದ ಕವನ

  3. ನಯನ ಬಜಕೂಡ್ಲು says:

    Nice. ಪ್ರಕೃತಿ ಹಾಗೂ ಬದುಕಿನ ಪರಸ್ಪರ ತುಲನೆ. ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: