ಕಪ್ಪು
ಕಪ್ಪು ಕಪ್ಪು ಎಂದೇಕೆ ಬಿಕ್ಕುವೆ?
ಕಪ್ಪಗಿರುವುದೇ ತಪ್ಪೇ?
ತೆಪ್ಪಗಿರು ಕಪ್ಪು ಕೀಳಲ್ಲ
ಬಿಳುಪು ಮೇಲಲ್ಲ
ಬಣ್ಣಗಳಲ್ಲಿ ಒಡಕಿಲ್ಲ
ಯಾರಿಗೆ ಯಾವ ಬಣ್ಣ
ಪ್ರಕೃತಿ ನಿರ್ಧಾರ
ಅದಕ್ಕೆ ಹಚ್ಚಬೇಡ ಸುಣ್ಣ
ಕೃತಕ ಬಣ್ಣಕ್ಕಿಲ್ಲ ಬಾಳಿಕೆ
ಬಣ್ಣಬೆರೆತ ಮಾತಿಗಿಲ್ಲ ಏಳಿಗೆ
ಬೇಡ ರಂಗುಗಳ ಹಂಗು
ವರ್ಣ ವರ್ಣನೆ ಬರೀ ಬೆಂಡು
ಬಣ್ಣ ಕಳಚಿದ ಮೇಲೆ ಕಾಲ್ಚೆಂಡು
ಭಂಗುರದ ಮೆಚ್ಚುಗೆಗೆ ಸಲ್ಲ ಬೆರಗು
ಕಪ್ಪೋ ಬಿಳುಪೋ ಬೆಳಗುವುದೇ ಬೆಡಗು
ಸಾಧನೆಯ ಬಣ್ಣ ಪರಿಶ್ರಮ
ನೆಮ್ಮದಿಗೆ ಸಾರ್ಥಕತೆಯೇ ಬಣ್ಣ
ಸ್ವಸ್ಥ ಮನಸ್ಸಿನ ಬಣ್ಣ ನಿರ್ಮಲ
ಜೀವನದ ಈ ಲೆಕ್ಕಾಚಾರಕ್ಕೆ
ಕಪ್ಪು, ಬಿಳುಪುಗಳ ಹಂಗಿಲ್ಲ
ಬಣ್ಣ ಕಡಿಮೆಯೆಂಬ
ಬುಡುಬುಡುಕೆ ದಾಸರ
ಬಡಬಡಿಕೆಗೇಕೆ ಚಡಪಡಿಕೆ
ಬಿಡುಬಿಡು ಬಣ್ಣವೇ ಬದುಕಲ್ಲ
ಬಣ್ಣ ಕೇಳುವುದಿಲ್ಲ ಗುಣ
ಮಿಸುಕಬೇಡ, ಬಿಕ್ಕಬೇಡ
ತುಸು ನಕ್ಕುಬಿಡು
ನಗುವಿಗೆ ಬಣ್ಣ ಬಳಿಯಲಾಗದು
ಬಣ್ಣ ಬೇಡುವವರು ಬಳಿದುಕೊಳ್ಳಲಿ
ತಮ್ಮ ಕಣ್ಣಿಗೇ ಬೇಕಾದ ಬಣ್ಣ
-ಡಿ. ಯಶೋದಾ
ಅದ್ಭುತವಾಗಿದೆ.
ನಾ ಕರಿಯಳೆಂದು
ನೀ ಜರಿಯಬೇಡ
ಬಿಳಿ ಗೆಳತಿ
ಗರ್ವದಿಂದ…..
ಈ ಹಾಡು ನೆನಪಾಯ್ತು
Very nice and very true.
ಚೆನ್ನಾಗಿದೆ ಮೇಡಂ
Tumbha chennagide
ಬಣ್ಣದಿಂದ ಮನುಷ್ಯನ ಯೋಗ್ಯತೆ ಅಳೆಯುವ ಕಾಲವೂ ಒಂದಿತ್ತು ಈಗ ಮತ್ತದೇ ಕಾಲವು ಮರುಕಳಿಸುತ್ತಿದೆ ಕವನದ ಮೂಲಕ ನೀವು ಮಾರ್ಮಿಕವಾಗಿ ಹೇಳಿದ್ದೀರಿ
Very nice
ಬಣ್ಣಗಳ ಬಣ್ಣವನ್ನು ಕಳಿಚಿ ಬಿಟ್ಟಿದ್ದೇವೆ..
ಅತ್ಯುತ್ತಮ
ಕಪ್ಪಿನಲ್ಲೂ ಒಂದು ಸೊಬಗಿದೆ. ಚೆನ್ನಾಗಿದೆ ಕವನ
ಬಣ್ನ ಬಣ್ಣ
ಎಲ್ಲೆಲ್ಲೂ ಬಣ್ಣಗಳು
ಕೂದಲು, ಕೆನ್ನೆ, ಕಣ್ಣ ರೆಪ್ಪೆ,
ತುಟಿ, ಉಗುರು ಎಲ್ಲವೂ ಬಣ್ಣಮಯ
ಎಲ್ಲವೂ ಕಾಣುತ್ತೆ
ಆದರೆ
ಮನಸ್ಸಿನ ಬಣ್ಣ ?
Good wording and meanings
Är super
Chennagide
Chennagide kavana
Nice kavana
ಕವನ ಚೆನ್ನಾಗಿದೆ.