ಅವಳ ಮೂಗುತಿಯಲ್ಲಿ ಒಂಟಿ ಇಬ್ಬನಿ
ಮೂರು ಸಾಲಿನಲ್ಲಿ ಬರೆದಿದ್ದೆಲ್ಲ ಹಾಯ್ಕುವಾಗುವುದಿಲ್ಲ. ಮತ್ತು ಪದೇಪದೇ ಬರೆದಿದ್ದನ್ನೇ ಬರೆದರೆ ಕವಿತೆಗಳಲ್ಲಿ ಯಾವ ಸೃಜನಶೀಲತೆಯೂ ಉಳಿದಿರುವುದಿಲ್ಲ. ಇರುವುದರಲ್ಲಿಯೇ ಹೊಸತನ್ನು ತರುವುದು ಇಂದಿನ ಕವಿಯ ಪಾಲಿಗಿರುವ ವರವೂ ಹೌದು, ಶಾಪವೂ ಹೌದು.
ಬರವಣಿಗೆಯ ಮಜಾ ಇರುವುದೇ ಇಲ್ಲಿ. ಎಲ್ಲರೂ ಬರೆದಿದ್ದನ್ನೇ ಬರೆಯುವುದು ಕಲೆಗಾರಿಕೆಯಲ್ಲ. ಹಿಂದಿನವರು ಬರೆದಿದ್ದನ್ನೇ ಮುಂದುವರಿಕೆಯಂತೆ ಬರೆಯುವುದರಲ್ಲಿ ಯಾವ ಸೃಜನಶೀಲತೆಯೂ ಇರುವುದಿಲ್ಲ. “ಎಳೆ ಸಂಪಿಗೆಯ ಮೂಗು ಎಂತ ಮೂಗು..” ಎಂದು ಅವಳ ನಾಸಿಕವನ್ನು ಎಳೆಯ ಸಂಪಿಗೆಗೆ ಹೋಲಿಸಿದ್ದಾರೆ. “ನಾಸಿಕವು ಸಂಪಿಗೆಯಂತೆ” ಎನ್ನುತ್ತಾ ಹೆಣ್ಣಿನ ನಾಸಿಕವನ್ನು ಸಂಪಿಗೆಗೆ ಹೋಲಿಕೆ ಮಾಡಿ ಹಾಡಿದ್ದಾರೆ. ಮತ್ತೆ ನೀವು ಸಂಪಿಗೆಯ ಕುರಿತು ಅಥವಾ ಆಕೆಯ ಮೂಗು ಮೂಗುತಿಯ ಕುರಿತು ಬರೆಯಬೇಕೆಂದಾಗ ಮತ್ತೆ ಮತ್ತೆ ನಾಸಿಕವನ್ನು ಸಂಪಿಗೆಯೆಂದು ಬರೆದರೆ ಹೇಗೆ? ಹೀಗೆ ಬರೆಯುವುದರಲ್ಲಿ ನಿಮ್ಮ ಸ್ವಂತಿಕೆ ಏನಿರುತ್ತೆ? ಈಗಾಗಲೇ ಭೂಮಿಯ ಮೇಲೆ ಇರುವುದೆಲ್ಲದರ ಕುರಿತು ಬರೆದಾಗಿದೆ. ಇರುವುದರಲ್ಲಿ ಹೊಸತನ್ನು ತರುವುದೇ ಸೃಜನಶೀಲತೆ.
ಇಲ್ಲೊಂದು ಮೂರುಸಾಲುಗಳ ಪುಟ್ಟ ಕವಿತೆಯೊಂದಿದೆ ಓದಿ. ನಾಸಿಕವನ್ನು ಸಂಪಿಗೆಗೆ ಹೋಲಿಸಿದ್ದಾಗಿದೆ. ಇನ್ನು ನಮಗೆಂದು ಉಳಿದಿರುವುದೇನು? ಅವಳ ಮೂಗನ್ನು ಸಂಪಿಗೆಗೆ ಹೋಲಿಸಿದ್ದಾರೆ. ಸರಿ, ಆದರೆ ಸಂಪಿಗೆಯನ್ನು? ಸಂಪಿಗೆಯನ್ನೇ ಅವಳ ಮೂಗೆಂದರೆ ಹೇಗಿರುತ್ತೆ? ಜೊತೆಗೆ ಒಂಟಿ ಇಬ್ಬನಿ ಅಂದಾಗ ಅವಳ ಮೂಗುತಿ ನೆನಪಾಗದೇ ಇರುತ್ತದೆಯೇ?
ಅವಳ ನಾಸಿಕದಂತಿರುವ
ಸಂಪಿಗೆಯ ಮೇಲೆ
ಒಂಟಿ ಇಬ್ಬನಿ
-ನವೀನ್ ಮಧುಗಿರಿ
ಚೆನ್ನಾಗಿದೆ. ಹೊಸ ಬಗೆಯ ಆಲೋಚನೆ ಬರಹಗಾರರ ಜೀವದ್ರವ್ಯ.
ಹೊಸತನ
ಆಲೋಚನೆ ಯಲ್ಲಿ ನವೀನ ತೆ ಇದೆ.
ಹೌದು. ಕವಿತೆ ಕವನಗಳ ಪ್ರಾಕಾರ ಗಳಲ್ಲಿ ಬದಲಾವಣೆ ಬೇಕಾಗಿದೆ. ವಿಷಯ ಒಂದೇ ಇದ್ದರೂ ಅದನ್ನು ಬೇರೆ ಬೇರೆ ಆಯಾಮಗಳಲ್ಲಿ ಬರೆಯುವುದನ್ನು, ರಚಿಸುವುದನ್ನು ಕಲಿಯಬೇಕಾಗಿದೆ. Well said
ಹೋಲಿಕೆಯ ಹೊಸರೂಪವನ್ನು ಪರಿಚಯಿಸುವ ವಿಶೇಷ ಲೇಖನ. ಧನ್ಯವಾದಗಳು.