ಮೌನ
ಮಾತು ಬೇಸರವಾಗಿದೆ ಮೌನ ಸಾಗರ ಮೊರೆದಿದೆ
ಜೀವ ಭಾವವು ನೊಂದು ಬೆಂದು ಸಾವಿನೊಲೆಮನೆ ಮುಂದಿದೆ
ಗುಪ್ತಗಂಗೆಯು ಮಲಿನಗೊಂಡಿದೆ ಕಸದ ಕೊಳೆ ಕಳೆಗಟ್ಟಿದೆ
ಒಳಗಿನೊಳಗಿನ ಉಸಿರುಕಟ್ಟಿ ಹಾಡು ಬಿರಿಯದೆ ಮುರುಟಿದೆ
ಸುದ್ದಿ ನುಂಗಿದ ಸದ್ದುಗದ್ದಲ ಮೌನ ಕಣಿವೆಗೆ ಬಡಿದಿದೆ
ಬಂಜೆಬೇನೆಗೆ ಟಿಸಿಲುಮೂಡಿದೆ ನರನರವು ಮರ್ಮರ ಮೊರೆದಿದೆ
ಯುಗಯುಗದ ಕತ್ತಲು ಹೆಪ್ಪುಗಟ್ಟಲು ಬೆಳಕಿನರಮನೆ ದಣಿದಿದೆ
ಅರುಣಕಿರಣವು ಹೊರಳಿ ಹೊರಳಿ ಬೆಳ್ಳಿಬೆಳಗದೆ ಇರುವುದೆ?
-ಡಾ.ಮಹೇಶ್ವರಿ.ಯು, ಕಾಸರಗೋಡು
Yes, ಬೆಳಕು ಖಂಡಿತ ಮೂಡುವುದು. Nice
Nice