ಹೆಣ್ಣು ನೀನಾಗು ಸಂಸಾರಕೆ ಕಣ್ಣು…
ಹೆಣ್ಣು ಮನೆಯ ತೊರೆದ ಮೇಲೆ
ಮನೆಗೆ ಶಾಂತಿ ಎಲ್ಲಿದೆ //
ಸೊಸೆಯು ಧರ್ಮ ಮರೆತ ಮೇಲೆ
ಮದುವೆಗೇನು ಬೆಲೆಯಿದೆ //
ತಂದೆ ತಾಯಿ ನಮ್ಮ ಜೀವ
ನೋಡಬೇಕು ನಮ್ಮ ದೈವ
ಅವರ ಒಲುಮೆ ಸಿಕ್ಕ ಮೇಲೆ ರಾಣಿಯಲ್ಲವೇ //
ನೀತಿಯಿಂದ ಬಾಳಬೇಕು
ಮನೆಗೆ ಖುಷಿಯ ನೀಡಬೇಕು
ತಂಗಿ ತಮ್ಮ ನೊಂದುಕೊಂಡು ಅಳುವುದಿಲ್ಲವೇ //
ಕೂಸು ಇದ್ದ ಮನಕೆ ನನಗೆ
ಕಾಸು ನೀಡಿ ಬೆಳೆಸಿ ಕೊನೆಗೆ
ಜೀವ ಕಲಿಸಿ ಬೆಳಕು ಹರಿಸಿ ದಣಿದ ಮುಗ್ದರು //
ಶಕ್ತಿ ನಿಂತ ಮನೆಯ ದೀಪ
ನೋವಿನಲ್ಲಿ ಬೇಡ ಶಾಪ
ನನ್ನ ತಾಯಿ ನೋವ ಪಟ್ಟು ಜೀವ ಬಿಡುವರು //
ಎದೆಯ ಭಾರ ಮಾಡಬೇಡ
ನೋವ ನೀಡಿ ಹೋಗಬೇಡ
ಜೀವದರಸಿ ನಿನ್ನ ನಂಬಿ ಕಟ್ಟಿಕೊಂಡೆನು //
ನೂರು ಕನಸ ಹೊತ್ತ ಮನಕೆ
ಸೂರು ಕಳಚಿ ಬಿದ್ದ ಹಾಗೆ
ಹೋಗಿ ಬರಿದು ಮಾಡಬೇಡ ಮೋಸ ಮಾಡೆನು //
-ಮಧುಮತಿ ರಮೇಶ್ ಪಾಟೀಲ್
ಚೆನ್ನಾಗಿದೆ. ಹೆಣ್ಣಿನ ಕರ್ತವ್ಯಗಳೇನು, ಸಂಸಾರ ಒಬ್ಬ ಹೆಣ್ಣಿಂದ ಹೇಗೆ ಸುಂದರವಾಗಬಲ್ಲುದು ಅನ್ನುವ ಅಂಶಗಳನ್ನೊಳಗೊಂಡ ಕವನ.
ಧನ್ಯವಾದಗಳು
ಹೆಣ್ಣಿನ ಕಣ್ಣು ತೆರೆಸುವ ಸೊಗಸಾದ ಕವನ
ಧನ್ಯವಾದಗಳು ಮೇಡಂ
ಧನ್ಯವಾದಗಳು
ಧನ್ಯವಾದಗಳು
ಸೊಗಸಾದ ಕವನ