ಮಹಿಳೆ ಮತ್ತು ನವೋದ್ಯಮ

Share Button

ಲೇಖಕರ ಪರಿಚಯ:

ಡಾ.ಉದಯ ಶಂಕರ ಪುರಾಣಿಕ ಅವರು, ಕಳೆದ 34 ವರ್ಷಗಳಿಂದ ವಿಶ್ವದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ವಿವಿಧ ವೃತ್ತಿಪರ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ನವೋದ್ಯಮ ಮತ್ತು ಉದ್ಯೋಗವಕಾಶಗಳು ಕುರಿತು ಮಾರ್ಗದರ್ಶನ ನೀಡುತ್ತಿದ್ದಾರೆ. ಟಿವಿ ಮಾಧ್ಯಮ, ಎಟಿಎಂ, ಕಾಲ್ ಸೆಂಟರ್, ಸಹಕಾರಿ ಕ್ಷೇತ್ರದ ಬ್ಯಾಂಕುಗಳು, ಅಮೇಜಾನ್ ಇ-ವಾಣಿಜ್ಯ ಜಾಲತಾಣ, ಹೀಗೆ ಅನೇಕ ಕಡೆ ಕನ್ನಡ ಸೌಲಭ್ಯ ದೊರೆಯಲು ಕಳೆದ 23 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ತನ್ಮೂಲಕ ಕನ್ನಡ ಮಾಧ್ಯಮದಲ್ಲಿ ಓದಿದ ಸಾವಿರಾರು ಜನರಿಗೆ ಉದ್ಯೋಗವಕಾಶ ದೊರೆಯುವಂತೆ ಮಾಡಿದ್ದಾರೆ .

ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಇವರು ಕನ್ನಡದಲ್ಲಿ ಬರೆದಿರುವ 2600 ಲೇಖನಗಳು ಪ್ರಕಟವಾಗಿವೆ ಮತ್ತು ಒಂದು ಪುಸ್ತಕಕ್ಕೆ ಕರ್ನಾಟಕ ಸರ್ಕಾರದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ರಾಜ್ಯ ಪ್ರಶಸ್ತಿ ದೊರೆತಿದೆ.ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿ ಮತ್ತು ಗೌರವಗಳು ದೊರೆತಿವೆ.

ನವೋದ್ಯಮದ ವಿವಿಧ ಮಜಲುಗಳನ್ನೂ, ಮೈಲಿಗಲ್ಲುಗಳನ್ನೂ ತಮ್ಮ ಬರಹಗಳ ಮೂಲಕ ಸುರಹೊನ್ನೆಯಲ್ಲಿ ಪರಿಚಯಿಸಲಿರುವ  ಡಾ.ಉದಯಶಂಕರ ಪುರಾಣಿಕ ಅವರಿಗೆ ಹೃತ್ಪೂರ್ವಕ ಸ್ವಾಗತ.

– ಸಂಪಾದಕಿ.
***************************

ನವೋದ್ಯಮವನ್ನು ಮಹಿಳೆಯರು ಪ್ರಾರಂಭಿಸಬಹುದಾ? ಪ್ರಾರಂಭಿಸಿದರೂ ಯಶಸ್ವಿಯಾಗಬಹುದಾ? ಇಂತಹ ಅನುಮಾನಗಳಿಗೆ, ವಿಶ್ವಾದಂತ್ಯ ಮಹಿಳೆಯರು ಮಾಡುತ್ತಿರುವ

ಸಾಧನೆಗಳು ಉತ್ತರ ನೀಡುತ್ತಿವೆ.

  1. 2016 ರಲ್ಲಿ ಮಾಡಲಾದ ಒಂದು ಅಧ್ಯಯನದ ಪ್ರಕಾರ, ವಿ‍ಶ್ವಾದಂತ್ಯ ಸುಮಾರು 18 ಕೋಟಿ ಮಹಿಳೆಯರು ನವೋದ್ಯಮಗಳನ್ನು ನೆಡೆಸುತ್ತಿದ್ದರು. ಪ್ರತಿವರ್ಷ ನವೋದ್ಯಮಗಳನ್ನು ಪ್ರಾರಂಭಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ.
  2. ನವೋದ್ಯಮವೊಂದು 100 ಕೋಟಿ ಡಾಲರ್‌ಗಿಂತ ಹೆಚ್ಚು ವಾಣಿಜ್ಯ ಮೌಲ್ಯವನ್ನು ಹೊಂದಿದಾಗ ಅದಕ್ಕೆ ಯುನಿಕಾರ್ನ ಎಂದು ಕರೆಯಲಾಗುತ್ತದೆ. ವರ್ಷ 2019 ರಲ್ಲಿ ಮೊದಲ ಆರು ತಿಂಗಳಿನ ಅವಧಿಯಲ್ಲಿ ಮಹಿಳೆಯರು ನೆಡೆಸುವ ಹತ್ತು ನವೋದ್ಯಮಗಳು ಯುನಿಕಾರ್ನಗಳೆಂದು ಮಾನ್ಯತೆ ಪಡೆದವು.
  3. ಆರೋಗ್ಯ ಸೇವೆಗಳನ್ನು ಕುರಿತ ನವೋದ್ಯಮಗಳಲ್ಲಿ, ಪ್ರತಿ ನಾಲ್ಕು ನವೋದ್ಯಮಗಳಲ್ಲಿ, ಒಂದು ನವೋದ್ಯಮವನ್ನು ಮಹಿಳೆಯರು ಆರಂಭಿಸಿದ್ದಾರೆ.

ಕೋವಿಡ್‌-19 ರಿಂದ ವಿಶ್ವಾದಂತ್ಯ ಉಂಟಾಗುತ್ತಿರುವ ಉದ್ಯೋಗ ನಷ್ಟ, ಆರ್ಥಿಕ ಹಿಂಜರಿತ ಮೊದಲಾದ ಸಮಸ್ಯೆಗಳ ನಡುವೆ, ಹೆಚ್ಚು ಜನ ಮಹಿಳೆಯರು ನವೋದ್ಯಮಗಳನ್ನು ಸ್ಥಾಪಿಸಲು ಮುಂದಾಗುತ್ತಿರುವುದು ಸ್ವಾಗತಾರ್ಹವಾಗಿದೆ.

ಮಹಿಳೆಯರು ಪ್ರಾರಂಭಿಸಿ, ಯಶಸ್ವಿಯಾಗಿ ನೆಡೆಸುತ್ತಿರುವ ನವೋದ್ಯಮಗಳನ್ನು ಕುರಿತು ಕಿರುಪರಿಚಯ ಮಾಡಿಕೊಡುವ ಲೇಖನ ಸರಣಿಯನ್ನು “ಸುರಹೊನ್ನೆ”ಯಲ್ಲಿ ಪ್ರಾರಂಭಿಸಲಾಗುತ್ತಿದೆ. ನವೋದ್ಯಮ ಪ್ರಾರಂಭಿಸಲು ಅಸಕ್ತಿ ಹೊಂದಿರುವವರಿಗೆ ಈ ಯಶೋಗಾಥೆಗಳು ಹೆಚ್ಚು ಉತ್ಸಾಹ ನೀಡಬಹುದು ಎನ್ನುವುದು ಈ ಲೇಖನಗಳ ಉದ್ದೇಶವಾಗಿದೆ.

ನೀವು ಕೂಡಾ ಇಂತಹ ನವೋದ್ಯಮವನ್ನು ಪ್ರಾರಂಭಿಸಿ ಎಂದಾಗಲಿ, ಹೀಗೆ ನವೋದ್ಯಮ ನೆಡೆಸಿದರೆ ಮಾತ್ರ ನೀವು ಯಶಸ್ವಿಯಾಗುವಿರಿ ಎನ್ನುವ ಸಲಹೆಗಳನ್ನಾಗಲಿ ಈ ಲೇಖನಗಳಲ್ಲಿ ನೀಡುವ ಉದ್ದೇಶವಿಲ್ಲ.

-ಡಾ.ಉದಯ ಶಂಕರ ಪುರಾಣಿಕ
(ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ತಜ್ಞ ಹಾಗೂ ವಿಜ್ಞಾನ ಲೇಖಕ)

2 Responses

  1. ನಯನ ಬಜಕೂಡ್ಲು says:

    ಸರ್, ನಿಮ್ಮ ಲೇಖನವನ್ನು ಓದುವ ಕುತೂಹಲವಿದೆ.

  2. ಶಂಕರಿ ಶರ್ಮ, ಪುತ್ತೂರು says:

    ಸುರಹೊನ್ನೆಯ ಕಿರೀಟಕ್ಕೆ ಸುಂದರವಾದ ಗರಿಯೊಂದರ ಸೇರ್ಪಡೆ..ಎಲ್ಲರೂ ಕುತೂಹಲದಿಂದ ಕಾಯುತ್ತಿರುವೆವು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: