ಸಂಕ್ರಾಂತಿ
ಶುಭ ಯೋಗವ
ಹೊತ್ತು ಬಂತು
ಸಂಕ್ರಾಂತಿಯು ಇಳೆಗೆ
ನವಯುಗವ ಆರಂಭಿಸುವ
ಹಬ್ಬವಾಗಿ ಕಾಣುತಿದೆ
ಭಾವವೆಂಬ ಭಕ್ತಿ ತುಂಬಿ
ಬೆಳಕನ್ನು ಹರಿಸುತಿದೆ
ಕಾಣದಂತಹ ಶಕ್ತಿಯನ್ನು
ಹುಡುಕುತ ಬರುತಿದೆ
ಭಯದ ಕರಿಯ ನೆರಳು ಸರಿದು
ಅಭಯ ಕಿರಣ ಮೂಡಲಿ
ಮನೆ ಮನೆಗಳ ಬಾಗಿಲಿಗೆ
ನಗೆ ತೋರಣ ಕಟ್ಟಲಿ
ಜಗವೆಲ್ಲಾ ನಲಿಯಲಿ
ಹಗೆಯೆಲ್ಲವೂ ಕಳೆಯಲಿ
ಒಲುಮೆಯಿಂದ ಹೊಳೆಯಲಿ
ನೆಲ ,ಜಲ , ಗಾಳಿ ,ಬೆಳಕು ಬಾನಂಗಳ
ಪ್ರೀತಿಯಿಂದಲೇ ಸಕಲ ಜೀವ ಮಂಗಳ
ಕೆಟ್ಟ ವಿಚಾರ ಕಳೆಯಲಿ
ಸ್ನೇಹ ಭಾವ ಮೂಡಲಿ
ಎಲ್ಲರಲ್ಲೂ ಸಂತಸ ತುಂಬಲಿ
ಈ ನವ ಸಂಕ್ರಾಂತಿಯಲಿ
-ಪ್ರಭಾಕರ ತಾಮ್ರಗೌರಿ , ಗೋಕರ್ಣ
ಸುಂದರವಾದ ಆಶಯ
ಧನ್ಯವಾದಗಳು ಮೇಡಂ
ಸಂಕ್ರಾಂತಿಯ ಶುಭಾಶಯ ಕವನ ಬಹಳ ಸುಂದರ
ತುಂಬಾ ಧನ್ಯವಾದಗಳು
ಸೊಗಸಾದ ಸಕಾಲಿಕ ಕವನ..ಧನ್ಯವಾದಗಳು ಮೇಡಂ.
ತುಂಬಾ ಧನ್ಯವಾದಗಳು ಶಂಕರಿ ಶರ್ಮಾ ಮೇಡಂಗೆ .