ಕೋಗಿಲೆ
ಸಂಜಯನಿಗೆ ಈಗ ನಲವತ್ತು ವರ್ಷ. ತನ್ನ ಹತ್ತನೇ ವಯಸ್ಸಿನಲ್ಲಿ ಅವನು ಕೋಗಿಲೆ ಪಕ್ಷಿ ಹಾಡುತ್ತೆ ಅಂತ ಪಠ್ಯ ಪುಸ್ತಕದಲ್ಲಿ ಓದಿದ್ದ. ಅದು ಹೇಗೆ ಹಾಡುತ್ತೆ ಅಂತ ಅವನಿಗೆ ಕುತೂಹಲ. ಮನೆಯವರಿಗೆಲ್ಲ ಕೋಗಿಲೆ ಹಾಡುವುದನ್ನು ತೋರಿಸಿ ಅನ್ನುತ್ತಿದ್ದ.
ಒಮ್ಮೆ ಅಮ್ಮ ʼಕುಹೂ ಕುಹೂʼ ಎಂದು ಕೋಗಿಲೆ ಕೂಗಿದ್ದನ್ನು ಕೇಳಿ, “ನೋಡು, ಅದೇ ಕೋಗಿಲೆ ಹಾಡು” ಅಂದಿದ್ದಳು. ಅವನಿಗೆ ನಿರಾಶೆಯಾಗಿತ್ತು. ಅವನಂದುಕೊಂಡಂತೆ ಅದು ಹಾಡೆನಿಸಲಿಲ್ಲ. ಹಕ್ಕಿಯ ಕೂಗೆನಿಸಿತ್ತು.
ಈಗ ಸಂಜಯ ದೊಡ್ಡ ಹಾಡುಗಾರ. ಶಾಸ್ತ್ರೀಯ ಸಂಗೀತದಲ್ಲಿ ಹೆಸರುಮಾಡಿದವನು. ಅವನಿಗೀಗ ಒಂದೇ ಕೊರಗು. ಕೋಗಿಲೆಯ ಕಂಠ ತನಗಿನ್ನೂ ಒಲಿದಿಲ್ಲವಲ್ಲಾ ಎಂದು.
– ಅನಂತ ರಮೇಶ್ , ಬೆಂಗಳೂರು
ಚಿಕ್ಕದಾದರೂ ಅರ್ಥಪೂರ್ಣ ಸಂದೇಶವಿರುವ ಕತೆ
ಕೆಲವೇ ಸಾಲುಗಳಲ್ಲಿ ಹೆಣೆಯಲ್ಪಟ್ಟ ಕಥೆ ಚೆನ್ನಾಗಿದೆ
ಬಹಳ ಅರ್ಥಪೂರ್ಣ ಪುಟ್ಕಥೆ!