ಹನಿಗವನಗಳು

Share Button

ಒಲುಮೆಯಲಿ
ಗೆಲ್ಲುವೆವು ಎನುತ
ಓಡುವ ನದಿಗಳು ಸಾಗರದತ್ತ
ಕಳೆದುಕೊಂಡು ತನ್ನತನವ
ಕುದಿಯುತಿವೆ ಹತಾಶೆಯಲಿ
ಅಸ್ತಿತ್ವಕ್ಕಾಗಿ ಅವುಗಳ ಮೊರೆತವು
ಸಮಾನ ದುಃಖಿಗಳಿಗೆ ಅದೇ ಸಾಂತ್ವನವು

***
ತಡವಾಯಿತು ಅಡುಗೆಯೆಂದು ಸಿಡುಕುತ್ತಲೆ
ಅವನು
ಸವಿಯಲೇ ಇಲ್ಲ ಅಡುಗೆಯ ಸವಿರುಚಿಯ

***
ಸ್ಪರ್ಧೆಯಲಿ ಗೆಲುವೊಂದೇ ಲಕ್ಷ್ಯ
ಸಹಬಾಳ್ವೆಯಲಿ ಸಮಾನತೆಯ ಸೌದಾರ್ಯ

***
ಎಲ್ಲಕ್ಕೂ,
ಪ್ರಕೃತಿಗೂ
ಇದೆ ಕಾಲನ ಹಿಡಿತ
ನೆನಪು ಮಾತ್ರ ಕಾಲಾತೀತ

-ಎಂ. ಆರ್. ಅನಸೂಯ

4 Responses

  1. ನಯನ ಬಜಕೂಡ್ಲು says:

    ಚಂದದ ಹನಿಗಳು

  2. ಬಿ.ಆರ್.ನಾಗರತ್ನ says:

    ವಾವ್ ಚಿಕ್ಕ ಪದಗುಚ್ಛ ಗಳಲ್ಲಿ ಅಡಗಿದೆ ಉತ್ತಮ ಸಂದೇಶ.ಅಭಿನಂದನೆಗಳು ಮೇಡಂ.

  3. ಶಂಕರಿ ಶರ್ಮ says:

    ಸೊಗಸಾದ ಚುಟುಕುಗಳು..ಸುಂದರ ಭಾವಾಭಿವ್ಯಕ್ತಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: