ಸಗಣಿಯಲ್ಲಿ ಅದ್ದಿದ ನಿಂಬೆಹಣ್ಣು

Share Button

ಅಕ್ಕನ ಮನೆಯ ಲೆಕ್ಕದ ಪೂಜೆ ಒಂದು ಛತ್ರದಲ್ಲಿ ನಡೆಯಲಿತ್ತು ಅದಕ್ಕಾಗಿ ಹೊರಟಿದ್ದೆ. ಜೊತೆಯಲ್ಲಿ ಪುಟ್ಟ ಮೊಮ್ಮಗನೂ ಇದ್ದ. ಅದಾಗಲೇ ತಡವಾಗಿತ್ತು. ಬೇಗ ಬೇಗ ನಡೆದುಕೊಂಡೇ ಹೋಗುತ್ತಿದ್ದಾಗ, ಒಂದೆಡೆ ಪಾದ್ರಿಯೊಬ್ಬರು ಕಂಡರು. ಭಕ್ತಗಣವೂ ಇತ್ತು.  ಭಕ್ತರು  ಹಸಿಸೆಗಣಿಯಲ್ಲಿ ಅದ್ದಿದ ನಿಂಬೆಹಣ್ಣು ಬೀಸಾಕುತ್ತಿದ್ದರು.  ಒಂದು ನಿಂಬೆಹಣ್ಣು ನನ್ನ ತಲೆಗೆಬಿತ್ತು. ವಾಸನೆ ಬೇರೆ ಸಿಟ್ಟುಗೊಂಡು ಅವರಿಗೆ ಬೈದೆ ಕ್ಷಮಿಸಿ. ಅಕಸ್ಮಾತ್ ಬಿದ್ದದ್ದು ಎಂದರು. ಈಗಾಗಲೇ ತಡ ಆಗಿದೆ. ಇದೂ ಬೇರೆ ಎಂದು ಮೊಮ್ಮಗನನ್ನೂ ಕರೆದುಕೊಂಡು ಲಗುಬಗೆಯಿಂದ ನಡೆದು ಛತ್ರ ತಲಪಿದೆ ದೊಡ್ಡಕ್ಕ ಎದುರುಗೊಂಡು, ಏನೇ ಇದು ಸೆಗಣಿ ವಾಸನೆ ಎಂದಾಗ, ಚುಟುಕಾಗಿ ವಿವರಿಸಿದೆ ಅವಳು ಬಚ್ಚಲು ದಾರಿತೋರಿದಳು.

ಸೆಗಣಿಯನ್ನು ತೊಳೆದು ಬಂದಾಗ, ಚಿಕ್ಕಮ್ಮ ಬ್ಯಾಂಡ್ಎಯ್ಡ್  ಪ್ಲಾಸ್ಟರ್ ಹಿಡಿದು ನಿನಗೆ ಕೊಡಲು ಅಕ್ಕ ಹೇಳಿದಳು ಎಂದು ಕೊಡಲು ಬಂದಳು. ನನಗೆ ಏನೂ ಆಗಿಲ್ಲ ಎಂದೆ. ಚಿಕ್ಕಮ್ಮನ ಮಗ ಅಳುವ ಮಕ್ಕಳಿಗೆಲ್ಲ ಚಾಕಲೇಟ್ ಹಂಚುತ್ತಿದ್ದ.. ಅಕ್ಕನನ್ನು ಮಾತಾಡಿಸಲು ಅತ್ತ ನಡೆದಾಗ………. …….ಎಚ್ಚರವಾಗಿಬಿಟ್ಟಿತು!

ಹಿಂದಿನ ದಿನ ರಾತ್ರಿ ಮಲಗುವಾಗಲೇ ನಾಳೆಬೆಳಗ್ಗೆ ತಡವಾಗಿ  ಏಳು ಗಂಟೆಗೇ  ಏಳುವುದು ಎಂದು ತೀರ್ಮಾನಿಸಿದ್ದೆ. ಎಂದಿನಂತೆ  ಆರೂವರೆಗೆ ಎಚ್ಚರವಾಯಿತು..ಬಿದ್ದ ಕನಸಿನ ಬಗ್ಗೆ ಯೋಚಿಸುತ್ತ, ಸಗಣಿ ನಿಂಬೆಹಣ್ಣು, ಪಾದ್ರಿ  ಎಲ್ಲಿಗೆಲ್ಲಿಯ ಸಂಬಂಧವಯ್ಯ ವಿಚಿತ್ರ ಕನಸು ಮೇಲೋಗರ ಎನ್ನುತ್ತ ಹಾಸಿಗೆಯಿಂದ ಎದ್ದೆ.

-ರುಕ್ಮಿಣಿಮಾಲಾ

8 Responses

 1. ASHA nooji says:

  ಹ್ಹ .ಹ್ಹ ಒಳ್ಳೆಯ ಕನಸು …..ಓದುವಾಗ ನನಗೆ ಒಮ್ಮೆ ಅಯ್ಯೋ ಪಾಪ ಅನ್ನಿಸೀತು

 2. Sayilakshmi S says:

  ಹಿಸುಕಿ ಹಾಳು ಮಾಡುವ ನಿಂಬೆಹಣ್ಣನ್ನು ಕಂಡರೆ ನನಗೆ ಬಹಳ ಸಂಕಟ.
  ಲೇಖನ ಚುಟುಕಾಗಿ ಚೆನ್ನಾಗಿದೆ.
  ಅಭಿನಂದನೆ

 3. ನಯನ ಬಜಕೂಡ್ಲು says:

  ಕೆಲವೊಮ್ಮೆ ಬೀಳುವ ಕನಸುಗಳು ಬಹಳ ವಿಚಿತ್ರವಾಗಿರುತ್ತವೆ

 4. Anonymous says:

  Ninne tv news ondaralli noduttha idde, segani berani (cowdung cake) obbarigobbaru erachadikolluttha iddaru.
  Anthaddenadaru nodirthi, kelirthi.

 5. ಶಂಕರಿ ಶರ್ಮ says:

  ಕನಸುಗಳೇ ಹಾಗೆ..ಅಸಂಬದ್ಧ. ಅಂತೂ ಸಕಾಲದಲ್ಲಿ ಎಚ್ಚರವಾಯ್ತಲ್ಲ! ಚಂದದ ಪುಟ್ಟ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: