ಈ ರಾಧೆ ಕಾಯುತಿಹಳು…

Share Button

ಕಂಡೆಯ ಕೃಷ್ಣನ ಸಖಿ
ಕಾಣದೆ ಹುಡುಕಿ ದಣಿದಿಹೆ,

ಕದಿಯುವುದು ಕರಗತವಾದ ಕೃಷ್ಣಾ
ನನ್ನ ಮನವನ್ನು ಕದ್ದು ಮಾಯವಾಗಿಹ
ಕಂಡರೆ ತಿಳಿಸುವೆಯಾ ಸಖಿ
ಈ ರಾಧೆ ಕಾಯುತಿಹಳೆಂದು,,

ಹಗಲಿನಲ್ಲಿ ಬೆಣ್ಣೆಯನ್ನು ಕದ್ದು
ಇರುಳಲ್ಲಿ ನನ್ನ ಮುತ್ತನ್ನು ಕದ್ದು
ವಿರಹದಿ ನನ್ನ ಉರಿಸುತಿಹ ಕೃಷ್ಣನಿಗೆ
ತಿಳಿಸುವೆಯಾ ಗೆಳತಿ – ಸಖಿ
ಈ ರಾಧೆ ಕಾಯುತಿಹಳೆಂದು,,,

ಭಾಮ ರುಕ್ಮಿಣಿಯರ ಒಲುಮೆಯೊಳು
ಮರೆತಿಹನೆನೋ ಮಾಧವ ನನ್ನ
ಹುಣ್ಣಿಮೆ ಬಂದಿದೆ
ಈ ರಾಧೆ ಕಾಯುತಿಹಳೆಂದು,,,
ಕೃಷ್ಣನ ಹುಡುಕಿ
ತಿಳಿಸುವೆಯಾ – ಸಖಿ

– ವಿದ್ಯಾ ವೆಂಕಟೇಶ್.  ಮೈಸೂರು

7 Responses

 1. ಬಿ.ಆರ್.ನಾಗರತ್ನ says:

  ಸರಳ ಸುಂದರ ಕವನ ಚೆನ್ನಾಗಿದೆ ಸೋದರಿ ವಿದ್ಯಾ

 2. ನಯನ ಬಜಕೂಡ್ಲು says:

  ಬ್ಯೂಟಿಫುಲ್

 3. ಶಂಕರಿ ಶರ್ಮ says:

  ರಾಧಾ ಮಾಧವರ ಪವಿತ್ರ ಪ್ರೇಮ, ಕಾಯುತ್ತಿರುವ ರಾಧೆಯ ಮನದೊಳಗಿನ ಮಾತು, ಕವನದಲ್ಲಿ ಸುಂದರವಾಗಿ ಮೂಡಿ ಬಂದಿದೆ.

 4. Padma Anand says:

  ಕೃಷ್ಣ, ರಾಧೆಯರು ಎಷ್ಟೊಂದು ರಸಿಕ ಕವಿ ಮನಸ್ಸುಗಳುಗೆ ವಸ್ತುವಾಗಿದ್ದಾರೆ? ಸುಂದರ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: