ಕೆ ಎಸ್ ನ ಕವಿನೆನಪು 50: ನೆನಪುಗಳಿಗೆ ವಿದಾಯ

Share Button

ಕೆ ಎನ್ ಮಹಾಬಲ

 

(ಜುಲೈ 02,2020 ರಿಂದ ‘ಸುರಹೊನ್ನೆ’ಯಲ್ಲಿ, ನಿರಂತರವಾಗಿ ಮೂಡಿ ಬಂದು ಓದುಗರಲ್ಲಿ ನವಿರಾದ ಭಾವತರಂಗವನ್ನು ಸೃಷ್ಟಿಸಿದ ಸರಳ ಸುಂದರ ಲೇಖನ ಸರಣಿ ‘ಕೆ ಎಸ್ ನ ಕವಿನೆನಪು’. ಕನ್ನಡ ಭಾವಗೀತೆಗಳ ಲೋಕದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿರುವ ಹಿರಿಯ ಕವಿ ಶ್ರೀ ಕೆ.ಎಸ್. ನರಸಿಂಹಸ್ವಾಮಿ ಅವರ ಬಗ್ಗೆ, ತನ್ನ ನೆನಪುಗಳನ್ನು ಅತ್ಯಂತ ನೈಜವಾಗಿ, ಆಪ್ತವಾಗಿ ಬರೆದುಕೊಟ್ಟ, ಅವರ ಮಗನಾದ ಶ್ರೀ ಕೆ.ಎನ್.ಮಹಾಬಲ ಅವರಿಗೆ ನಾವು ಅಭಾರಿಯಾಗಿದ್ದೇವೆ.
ಈ ಲೇಖನ ಸರಣಿಯ ಕೊನೆಯ ಕಂತು ಇಲ್ಲಿದೆ…. ಹೇಮಮಾಲಾ)

ಈ ಲೇಖನಮಾಲಿಕೆಯ ಮೂಲಕ ಕವಿ ಕೆ ಎಸ್ ನ ಅವರನ್ನು ನನ್ನ ತಂದೆಯಾಗಿ ನೋಡಿ ಹಲವು  ನೆನಪುಗಳನ್ನು ಹಂಚಿಕೊಂಡಿದ್ದೇನೆ. ಇಲ್ಲಿ  ಕೆಎಸ್ ನ ಅವರ ಕಾವ್ಯಜೀವನದಲ್ಲಿ ಸ್ನೇಹವಲಯದವರ ,ಆಪ್ತರ,ಮಾರ್ಗದರ್ಶಕರ ಹಾಗೂ ಹಿತೈಷಿಗಳ ಪಾತ್ರ,ಅವರ ಸ್ವಭಾವ, ಪ್ರವೃತ್ತಿಗಳ ಜತೆಗೆ ಕೆಲವು ಕಹಿಪ್ರಸಂಗಗಳೂ ಪ್ರಸ್ತುತಗೊಂಡಿವೆ.ಅಲ್ಲದೆ ಕವಿಯ ಕುಟುಂಬವಲಯದ ಚಿತ್ರಣವನ್ನೂ ಯಾವುದೇ ರಾಗದ್ವೇಷಗಳಿಗೆ ಒಳಗಾಗದೆ ವಿವರಿಸಲು ಯತ್ನಿಸಿದ್ದೇನೆ. ಹಾಗೇನಾದರೂ ಅಂಥವು ಕಂಡರೆ ಅವನ್ನು ಮನ್ನಿಸಬೇಕೆಂದು ಕೋರಿಕೆ.

 

ಕವಿ ಕೆ ಎಸ್ ನ ಮತ್ತು ಶ್ರೀಮತಿ ವೆಂಕಮ್ಮ

ಈ ಲೇಖನಮಾಲೆಯುದ್ದಕ್ಕೂ ಹರಿದು ಬಂದ  ಈ ಸದಸ್ಯರ ಸವಿಸ್ಪಂದನೆಗಳಿಗೆ ಮೂಕವಿಸ್ಮಿತನಾಗಿದ್ದೇನೆ.

1.ಶಂಕರಿ ಶರ್ಮಾ, ಪುತ್ತೂರು
2.ನಯನಾ ಬಜಕೂಡ್ಲು
3.ಕೆ.ಎಂ.ವಸುಂಧರಾ
4.ಬಿ.ಆರ್ ನಾಗರತ್ನ
5.ಹೇಮಮಾಲಾ
6.ಡಾ.ಗಾಯತ್ರಿ ದೇವಿ ಸಜ್ಜನ್
7.ಪದ್ಮಾ ಆನಂದ್
8.ಉಮೇಶ್ ಪಾಟೀಲ್
9.ರವೀಂದ್ರಕುಮಾರ್ ಎಲ್ವೀ
10.ಸಾಯಿಲಕ್ಷ್ಮಿ .ಎಸ್
11.ಕೃಷ್ಣಮೂರ್ತಿ ಎಸ್.
12.ವಿಜಯಾ ಸುಬ್ರಹ್ಮಣ್ಯ
13.ಶಶಿಕಲಾ ಹೆಗಡೆ
14.ಬೆಂಶ್ರೀ ರವೀಂದ್ರ
15.ಧರ್ಮಣ್ಣ ಧನಿ
16.ಡಾ.ಸುಧಾ ರಮೇಶ್
17.ಉಮೇಶ್ ಮುಂಡಳ್ಳಿ
18.ಆಶಾ ನೂಜಿ
19.ಕೆ.ವಿಶ್ವನಾಥ
20.ಡಾ.ಮಹೇಶ್ವರಿ ಯು.
21.ಬಿ.ಕೆ.ಮೀನಾಕ್ಷಿ
22.ಪ್ರಮೋದಾ ಮೂರ್ತಿ
23.ನಾಗಶ್ರೀ ಎಸ್.
24.ಡಾ.ಕೃಷ್ಣಪ್ರಭಾ ಎಂ.
25.ಟಿ.ಎಸ್.ಶ್ರವಣಕುಮಾರಿ
26.ಲತಾ

ಇವರಲ್ಲಿ ಶಂಕರಿ ಶರ್ಮ, ನಯನಾ ಬಜಕೂಡ್ಲು ಎಲ್ಲಾ ಸಂಚಿಕೆಗಳಿಗೂ ಪ್ರತಿಕ್ರಿಯಿಸಿದ್ದಾರೆ.   ವಸುಂಧರಾ ಕೆ.ಎಂ, ಮತ್ತು ಬಿ.ಆರ್ ನಾಗರತ್ನ  ಕೂಡ ಹೆಚ್ಚಿನ ಕಂತುಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮೇಲಿನ ಪಟ್ಟಿಯಲ್ಲಿ ಯಾರಾದರೂ ಪ್ರತಿಕ್ರಿಯಿಸಿದವರ ಹೆಸರನ್ನು ಬರೆಯಲು ಬಿಟ್ಟು ಹೋಗಿದ್ದಲ್ಲಿ, ಮನ್ನಿಸಿ. ತಮ್ಮ ಹೆಸರನ್ನು ನಮೂದಿಸದೆ ಸ್ಪಂದಿಸಿದವರೂ ಹಲವರಿದ್ದಾರೆ. ಎಲ್ಲರಿಗೂ ವಂದನೆಗಳು.

ಈ ಲೇಖನದ ಮೂಲಕ ಕವಿಯ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗಿದೆಯೆಂದು ಭಾವಿಸಿದ್ದೇನೆ. ಸ್ಪಂದಿಸಿದ ಪ್ರತಿಯೊಬ್ಬರಿಗೂ ವಿನಮ್ರ ವಂದನೆಗಳು. ಹಲವರು ನೀಡಿರುವ ಸ್ವೀಕಾರಾರ್ಹ ಸಲಹೆಗಳನ್ನು ಕೃತಿಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

ಸ್ಪಂದಿಸಿದವರಲ್ಲಿ ಬಹುಪಾಲು ಓದುಗರು ಲೇಖನಮಾಲೆ ಆದಷ್ಟು ಬೇಗ ಕೃತಿರೂಪದಲ್ಲಿ ಬರಲೆಂದು ಆಶಿಸಿದ್ದಾರೆ.ಇನ್ನಷ್ಟು ಶೋಧನೆ, ತಿದ್ದುಪಡಿ ಹಾಗೂ ಮೌಲ್ಯಸೇರ್ಪಡೆಗಳು ಬಾಕಿ ಇರುವುದರಿಂದ ಕೆಲಸ ಸ್ವಲ್ಪತಡವಾದೀತು. ಆದರೆ ಮುದ್ರಿತ ಕೃತಿ  ನಿಮ್ಮ ಕೈಸೇರುವುದು ಖಂಡಿತ.

ವಿಶೇಷವಾಗಿ ಈ ಲೇಖನಮಾಲೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿ,ಪ್ರೇರಣೆ ನೀಡಿದ  ಸಂಪಾದಕಿ ಹೇಮಮಾಲಾ ಅವರಿಗೆ ಹೃತ್ಪೂರ್ವಕ ನಮನಗಳು.

“ನೊಂದ ನೋವನ್ನಷ್ಟೇ ಹಾಡಬೇಕೇನು
ಬೇಡವೇ ಯಾರಿಗೂ ಸಿರಿಮಲ್ಲಿಗೆ”

ಎಂಬ ಕೆ ಎಸ್ ನ ಅವರ ಕವನಗಳ ಆಶಯದಂತೆಯೇ ಈ ಲೇಖನಸರಣಿ ರೂಪಿತವಾಗಿದೆ ಎಂದು ನಂಬಿದ್ದೇನೆ.

ಒಬ್ಬ ಮಿತ್ರರು ನಿಮ್ಮ ತಂದೆಯವರ ಬಗ್ಗೆ ಅವರದೇ ಕವನದ ಸಾಲುಗಳ ಮೂಲಕ ಹೇಳಿ ಎಂದಾಗ ಅಂದು ,ಇಂದು ಮತ್ತು ಮುಂದೂ   ನಾನು ಸ್ಮರಿಸಿಕೊಳ್ಳುವ ಸಾಲುಗಳು:

“ಎಲ್ಲವನ್ನು ಕೊಟ್ಟಿರುವೆ;
ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
ಏಕೆ ಕಾಡಲಿ!”

ವಿದಾಯದ ವಂದನೆಗಳು.

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=32684

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು) 

10 Responses

 1. ಮಹಾಬಲ says:

  ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

 2. ಮಹೇಶ್ವರಿ ಯು says:

  ವಂದನೆಗಳು ಮತ್ತು ಧನ್ಯವಾದಗಳು ಸರ್

 3. ನಾಗರತ್ನ ಬಿ.ಆರ್ says:

  ವಾವ್ ಸೊಗಸಾದ ನಿರೂಪಣೆಯೊಂದಿಗೆ ನಿಮ್ಮ ತಂದೆ ಹಾಗೂ ಹೆಸರಾಂತ ಕವಿಯ ನೆನಪಿನ ಬುತ್ತಿಯನ್ನು ಬಿಚ್ಚಿ ಎಲ್ಲಾ ಸಾಹಿತ್ಯ ಸಹೃದಯರಿಗೆ ಉಣಬಡಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸಾರ್.ಆದಷ್ಟು ಬೇಗ ಪುಸ್ತಕ ಬರಲಿ ಎಂದು ಆಶಿಸುತ್ತೇನೆ.

 4. Hema says:

  ಅಪರೂಪದ ಲೇಖನ ಸರಣಿಯು ಬಹಳ ಸೊಗಸಾಗಿ ಮೂಡಿ ಬಂತು. ಧನ್ಯವಾದಗಳು.

 5. Padma Anand says:

  ನೆಚ್ಚಿನ ಕವಿಯ ಜೀವನಗಾಥೆಯ ನೆನಪುಗಳನ್ನು ನವಿರಾಗಿ, ಎಳೆಎಳೆಯಾಗಿ ಬಿಡಿಸಿ ಬಿಚ್ಚಿಟ್ಟ ಕವಿಸುತಗೆ ವಂದನೆಗಳಯ, ಅಭಿನಂದನೆಗಳು. ಈ ನೆನಪುಗಳು ಸಿರಿಮಲ್ಲಿಗೆಯ ದಂಡೆಯಾಗಿ ನಮ್ಮಗಳ ಮನದಲ್ಲಿ ಸದಾ ಕಂಪುಬೀರುತ್ತಾ ಇರುತ್ತದೆ. ಆದಷ್ಟು ಬೇಗ ಪುಸ್ತಕ ರೂಪದಲ್ಲಿ ಹೊರಬರಲಿ.

 6. ನಯನ ಬಜಕೂಡ್ಲು says:

  ಸರ್, ಬಹಳ ಚೆನ್ನಾಗಿ ಮೂಡಿ ಬಂತು ನಿಮ್ಮ ಲೇಖನ ಸರಣಿ. ಖ್ಯಾತ ಕವಿಯ ಜೀವನದ ಕುರಿತಾದ ಪರಿಚಯ ಆದದ್ದು ನಮ್ಮ ಅದೃಷ್ಟ.

 7. Padmini Hegde says:

  ಬೆಂಗಳೂರಿನ ರಂಗ ಶಂಕರದಲ್ಲಿ ನರಸಿಂಹಸ್ವಾಮಿಯವರನ್ನು ಕುರಿತ ನಾಟಕ ನೋಡಿದ್ದೆ. ಅದು ಅವರನ್ನು ಕವಿಯಾಗಿ ಚಿತ್ರಿಸಿತ್ತು. ನೀವು ಅವರ ಇನ್ನಷ್ಟು ಮುಖಗಳನ್ನು ಪರಿಚಯಿಸಿದ್ದೀರಿ. ಧನ್ಯವಾದಗಳು.

 8. ಶಂಕರಿ ಶರ್ಮ says:

  ಹಿರಿಯ, ಪ್ರಸಿದ್ಧ ಕವಿಗಳ ಪುತ್ರರೇ ಕವಿಗಳ ಬಗ್ಗೆ ಬರೆದ ಅತ್ಯಂತ ಅಪರೂಪದ ಲೇಖನಮಾಲೆಯೊಂದು ಮುಕ್ತಾಯ ಹಂತಕ್ಕೆ ಬಂದುದರಿಂದ, ನಿಜಕ್ಕೂ ಏನೋ ಕಳೆದುಕೊಂಡಂತೆ ಭಾಸವಾಗುತ್ತಿದೆ.
  ಸರ್, ಎಲ್ಲರ ಆಶಯದಂತೆ ಈ ಲೇಖನಮಾಲೆಯು ಆದಷ್ಟು ಬೇಗನೆ ಪುಸ್ತಕ ರೂಪದಲ್ಲಿ ಬರಲೆಂದು ನಾನೂ ಆಶಿಸುವೆನು. ಚಂದದ ನಿರೂಪಣೆಯೊಂದಿಗೆ ಸುರಹೊನ್ನೆಯನ್ನು ಶೃಂಗರಿಸಿದ ಲೇಖನ ಮಾಲೆಗಾಗಿ ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್.
  ಸ್ಪಂದಿಸಿದ ಓದುಗರನ್ನು ನೆನಪಿಸಿದ ತಮಗೆ ಇನ್ನೊಮ್ಮೆ ನಮನಗಳು.

 9. ಕಾಶೀನಾಥ್ says:

  ಸುರಹೊನ್ನೆ ಯಲ್ಲಿ ಮೂಡಿಬಂದ ಕೇ.ಎಸ್. ನ ಅವರ ಬಗ್ಗೆಯ ಲೇಖನಗಳನ್ನು ಓ ದ ಬಯಸುತ್ತೇನೆ. ಎಲ್ಲಿ ದೊರೆಯುತ್ತದೆ ದಯಮಾಡಿ ತಿಳಿಸಿ

  • Hema says:

   ಲೇಖನಗಳನ್ನು ಹುಡುಕುವ ವಿಧಾನಗಳು:
   1. ಈಗ ತಾವು ಓದಿದ ಲೇಖನದ ಕೊನೆಯಲ್ಲಿ, ಈ ಲೇಖನ ಸರಣಿಯ ಹಿಂದಿನ ಲೇಖನದ ಲಿಂಕ್ ಇದೆ .ಅದನ್ನು ಕ್ಲಿಕ್ಕಿಸಿ. ಆ ಬರಹದ ಕೊನೆಯಲ್ಲಿ – ಅದಕ್ಕಿಂತ ಹಿಂದಿನ ಲೇಖನದ ಲಿಂಕ್ ಇರುತ್ತದೆ.ಹೀಗೆ ಇಡೀ ಲೇಖನ ಸರಣಿಯನ್ನು ಓದಬಹುದು.
   2 http://www.surahonne.com .ಇ-ಪತ್ರಿಕೆಯಲ್ಲಿ ‘ಕೆ ಎಸ್ ನ ‘ ‘ಕವಿ ನೆನಪು ‘ ಅಥವಾ ಲೇಖಕರಾದ ‘ಕೆ ಎನ್ ಮಹಾಬಲ’ ಅವರ ಹೆಸರನ್ನು ಹುಡುಕಿದರೂ ಎಲ್ಲಾ ಬರಹಗಳು ಸಿಗುತ್ತವೆ.
   3.ಈ ಸರಣಿಯ ಕೊನೆಯ ಲೇಖನ ಜೂನ್ 17,2021 ರಂದು ಪ್ರಕಟವಾಗಿರುವುದರಿಂದ, ಅದರ ಹಿಂದಿನ ಗುರುವಾರಗಳ ಸಂಚಿಕೆಗಳನ್ನು ಗಮನಿಸಿದರೂ ಸಿಗುತ್ತದೆ. ಇದಕ್ಕಾಗಿ, http://www.surahonne.com ಜಾಲತಾಣದಲ್ಲಿ ಕ್ಯಾಲೆಂಡರ್ ಚಿತ್ರ ಇದೆ . ಅದರಲ್ಲಿ ತಾರೀಕು ಪ್ರಕಾರ ಹುಡುಕಬಹುದು.
   ‘ಸುರಹೊನ್ನೆ’ಯಲ್ಲಿ ಮಾಹಿತಿ ಹುಡುಕಲು. ಮೊಬೈಲ್ ಫೋನ್ ಗಿಂತ ಕಂಪ್ಯೂಟರ್ ನಲ್ಲಿ ಸುಲಭ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: