ಅಪ್ಪನಿಗೆರಡು ಸಾಲು
ಅಪ್ಪನಲ್ಲವೆ ಅಕ್ಕರೆಯ
ತುಪ್ಪದ ಸವಿ ತೋರಿದವನು
ತನ್ನ ದುಡಿಮೆಯಲೆಮಗೆ
ಉಣಿಸಿ ಉಡಿಸಿದವನು
ಅಪ್ಪನಿಲ್ಲದ ಜೀವನ
ಉಪ್ಪಿಲ್ಲದ ಸಪ್ಪೆ ಕೂಳು
ಅಪ್ಪನಿರೆ ತಾನೇ ನಿತ್ಯ
ಸಂತಸದ ಬಾಳು
ಅಪ್ಪನಲ್ಲವೆ ತಾ ಸಿಪಾಯಿ
ಮನೆಗೆ ಕಾವಲು
ಅಪ್ಪನ ಹಣೆಯ ಬೆವರ ಸಾಲು
ಬೆಳಗುವುದೆಮ್ಮ ಬಾಳು
ಅಮ್ಮನಿಗೂ ಜೊತೆಗಾರ
ಮನೆಯ ಸಲಹೆಗಾರ
ಮನೆಯವರ ಏಳಿಗೆಯಲಿ
ಅವನ ಜೀವನ ಸಾಕಾರ
ನಿಸ್ವಾರ್ಥಿ ಹುಡುಕುವನೆಲ್ಲ
ಕಷ್ಟಕೆ ಪರಿಹಾರವನ್ನ
ಅಪ್ಪನ ದಿನದಂದು
ಅವನಿಗೊಂದು ನಮನ
-ನಟೇಶ
ಅಪ್ಪ ನಿಮಗೊಂದು ನಮನ ಸರಳ ಸುಂದರವಾಗಿ ಮೂಡಿಬಂದಿದೆ ಅಭಿನಂದನೆಗಳು ಸಾರ್
ಚೆಂದದ ಕವನ
ಹೌದು ಅಪ್ಪನ ತ್ಯಾಗ ಯಾವತ್ತೂ ಬೆಳಕಿಗೆ ಬಂದದ್ದಿಲ್ಲ. ಸೊಗಸಾಗಿದೆ
ಅಪ್ಪನಿಲ್ಲದ ಮಕ್ಕಳ ಆತ್ಮವಿಶ್ವಾಸ ಅದೆಷ್ಟು ಕುಂದುತ್ತದೆ ಎಂಬುದನ್ನು ನಾನು ಮಕ್ಕಳಲ್ಲಿ ನೋಡಿದ್ದೇನೆ.
ಒಳ್ಳೆಯ ಕವನ. “ಅಪ್ಪನ ಬೆವರ ಸಾಲು……” ಒಳ್ಳೆಯ ನಿರೂಪಣೆ.
ಅಪ್ಪನಿಗೊಂದು ನುಡಿ ನಮನ…ಚೆನ್ನಾಗಿದೆ.
ಸುಂದರ ಕವನ. ಅಪ್ಪನ ನೆನಪುಗಳೇ ಮನಸ್ಸನ್ನು ಆರ್ದಗೊಳಿಸುತ್ತದೆ.
ಅಪ್ಪನ ಚಿತ್ರವನ್ನು ಚಂದವಾಗಿ ಕಟ್ಟಿಕೊಟ್ಟಿದ್ದೀರಿ
ವಂದನೆಗಳು