ಸಾಕ್ಷಾತ್ಕಾರ
ಎಲ್ಲವೂ ಇದ್ದು ಎನೂ ಇಲ್ಲದ ಸಂದರ್ಭದಲಿ
ಸಾಗುತ್ತಿದೆ ನನ್ನ ವಯಸ್ಸು.
ಸಮತೋಲನ ತಪ್ಪಿರಬಹುದೆಂಬ ಶಂಕೆಯಲಿ
ಸಿಲುಕಿದೆ ನನ್ನ ಮನಸ್ಸು.
ಲೌಕಿಕ ವಿಚಾರಧಾರೆಗಳ ರಾಶಿಯಿಂದ ಮೂಡಿಸಿತ್ತು
ನನ್ನಲ್ಲಿ ತಮಸ್ಸು.
ಅದೇಕೋ ಕಾಣೆ, ಈ ದಿನಗಳಲ್ಲಿ
ಮಾತು ಮೌನದತ್ತ ವಾಲಿದೆ, ಮಿದುಳು ಸ್ಪಬ್ಧವಾಗಿದೆ.
ಕೃತಿ ಚುರುಕಾಗಿದೆ, ಹೃದಯ ಸ್ಪಂದಿಸಿದೆ.
ನನ್ನ ಅಂತರ್ಮುಖದ ಅನಾವರಣವಾಗಬೇಕಾಗಿದೆ.
ರಜಸ್ಸು ತೀಕ್ಷ್ಟವಾಗಿ, ಸಾತ್ವಿಕದ ಹಾದಿ ತೆರೆಯುತಿದೆ.
ಸಾರ್ಥಕ ಬದುಕ ಬೇರೊಂದು ತರದಿ
ಹೆಣೆಯೋಣ ಎಂದೆನಿಸಿದೆ.
ದೇಹದ ಸವಕಲು ಭಾದಿಸದಂತೆ ಮನಸು
ಸದೃಢವಾಗಲು ಸನ್ನದ್ಧವಾಗಿದೆ.
ನನ್ನ ಪರಿಚಯ ಹೀಗೇ ಆಗಬೇಕೇನೋ
ಎಂದೆನಿಸಿದೆ.
ಹಿರಿದಾಗುವುದೇನೋ ನನ್ನ ವರ್ಚಸ್ಸು ಎಂಬ
ಚಿಕ್ಕ ಆಸೆ ಗರಿಗೆದರಿದೆ.
-ಹೆಚ್ ಎಸ್ ವತ್ಸಲಾ, ಮೈಸೂರು
ಬಹಳ ಚೆನ್ನಾಗಿದೆ!
ಧನ್ಯವಾದಗಳು ಶ್ರುತಿ
ಆಶಾಭಾವನೆ ಮೂಡಿಸಿದ ಕವಿತೆ ಚೆನ್ನಾಗಿದೆ
ಧನ್ಯವಾದಗಳು, ನಾಗರತ್ನರವರೆ.
ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು, ನಾಗರತ್ನರವರೆ.
ಮಾಗಿದ ಮನದ ಮಾತುಗಳು.
ಮನದಾಳದ ಅಭಿಪ್ರಾಯಕ್ಕೆ ನನ್ನ ವಂದನೆಗಳು, ಅನಸೂಯಾರವರೆ.
ಅರ್ಥಪೂರ್ಣ ಕವನ.
ಅನಿಶ್ಚಿತತೆಯಿಂದ ಪಕ್ವತೆಯತ್ತ ಭಾವಗಳ ಪಯಣ. ಚೆನ್ನಾಗಿದೆ ಕವನ
ನಯನ, ನಿಮ್ಮ ನಿಶ್ಚಿತ ಅಭಿಪ್ರಾಯಕ್ಕೆ ನನ್ನ ನಮನ.
ಗುರಿ ಹುಡುಕಿಕೊಂಡ ಕವಯತ್ರಿ. ಚೆನ್ನಾಗಿದೆ ಕವನ.
ಮೀನಾಕ್ಷಿಯವರೆ, ನಿಮ್ಮ ಪ್ರೋತ್ಸಾಹದಾಯಕ
ಪ್ರತಿಕ್ರಿಯೆಗೆ ವಂದನೆಗಳು.
ಶರೀರದ ಮೇಲೆ ವಯಸ್ಸು ಪ್ರಭಾವ ಬೀರಿದಂತೆ, ಮನಸ್ಸು ಮಾಗಿದ ಭಾವ. ಭಾವನಾತ್ಮಕ ಕವನ, ಚೆನ್ನಾಗಿದೆ.
ನಿಮ್ಮ ಅನಿಸಿಕೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಶಂಕರಿ ಶರ್ಮರವರೆ..
ಸೂಪರ್
Thank you for your comments.
ವಿಮುಕ್ತತೆಯತ್ತ ಭಾವ ಪಯಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ
ನಿಮ್ಮ ಅಭಿಪ್ರಾಯ ನನ್ನ ಮನದಂಗಳವನ್ನ
ವಿಸ್ತರಿಸಿದೆ, ವಿದ್ಯಾರವರೆ.
ಆತ್ಮಾವಲೋಕನದ ಅಪೂರ್ವ ಸ್ಪಂದನೆ ಸೊಗಸಾಗಿ ಮೂಡಿ ಬಂದಿದೆ.
ನಿಮ್ಮ ಸ್ಪಂದನೆ ನನ್ನ ಭರವಸೆಯ ಸೂಚನೆ,
ಪದ್ಮರವರೆ.