ಕವಿಗಳು
ಕವಿಗಳು ಸಾರ್ ಕವಿಗಳು
ಕಂಡದ್ದು ಕಾಣದೆಲ್ಲ ಬರೆಯುವವರು
ಬರೆಯದಿದ್ದರೆ ತಿಂದನ್ನ ಜೀರ್ಣವಾಗದವರು
ಬರೆದು ಬರೆದು ಬೇಕಿದ್ದವರಿಗೂ
ಬೇಡವಾದವರಿಗೂ ಕೇಳಿಸುವವರು
ಜನ ಆಕಳಿಸಿದರೂ ತೂಕಡಿಸಿದರೂ
ಕವಿ ಗೋಷ್ಠಿಗಳಲ್ಲಿ ಕವನ ವಾಚಿಸುವವರು
ಹೆತ್ತವರಿಗೆ ಹೆಗ್ಗಣ ಮುದ್ದಂತೆ
ಬರೆದಿದ್ದೆನ್ನೆಲ್ಲಾ ಅಮೋಘವೆಂದು
ಭಾವಿಸಿಕೊಳ್ಳುವವರು
ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು
ಹೆಮ್ಮೆಯಿಂದ ಬೀಗುವರು
ಬುದ್ಧಿಯನ್ನೆಲ್ಲಾ ಬರಹಕ್ಕೆ ಕೊಟ್ಟು
ವ್ಯವಹಾರದಲ್ಲಿ ದಡ್ಡರಾದವರು
ಪ್ರೇಮಿಗಳಿಗೆಲ್ಲಾ ಪ್ರಿಯವಾದವರು
ಸರಳ ಸಜ್ಜನಿಕೆಯ ಅಮಾಯಕರು
ಒಳ್ಳೆಯವರು ಸಾರ್
ಕವಿಗಳೆಲ್ಲಾ ಒಳ್ಳೆಯವರು
-ವಿದ್ಯಾ ವೆಂಕಟೇಶ್, ಮೈಸೂರು
ಧನ್ಯವಾದಗಳು. ಕವನ ಚೆನ್ನಾಗಿದೆ
ವಂದನೆಗಳು ಸರ್
ಕವಿತೆಯ ಮೂಲಕ ಕವಿಗಳನ್ನು ಹೊಗಳಿರುವ ನಿನಗೊಂದು ನಮನ ಸೋದರಿ ವಿದ್ಯಾ.
ವಂದನೆಗಳು ಅಕ್ಕಾ
Nice one
ಧನ್ಯವಾದಗಳು ಮೇಡಂ
ಹೌದಪ್ಪಾ ಹೆತ್ತವರಿಗೆ ಹೆಗ್ಗಣವೇ ಮುದ್ದಾದಂತೆ. ಅಂತೂ ಕವಿಗಳನ್ನು ಅಮಾಯಕರು ಎಂದಿರಲ್ಲಾ…ಸದ್ಯ!
ಹೆತ್ತವರಿಗೆ ಹೆಗ್ಗಣ…
ಅಂತೂ ಕವಯನ್ನು ಅಮಾಯಕ ಎಂದಿರಲ್ಲಾ… ಧನ್ಯವಾದ
ಚೆಂದದ ಕವನ.
ವಂದನೆಗಳು ಮೇಡಂ
ಮೆಚ್ಚುಗೆಗೆ ಧನ್ಯವಾದಗಳು ಮೇಡಂ
ವಿಡಂಬನಾತ್ಮಕ ಕವನ..ಕವಿಗಳನ್ನೇ ಪರೀಕ್ಷೆಗಿಟ್ಟಿತು!!..ಚಂದದ ಕವನ..ಕವಿಗಳೇ.
ಸಹೃದಯರ ಪ್ರೋತ್ಸಾಹ ಕ್ಕೆ ನಮನಗಳು
ಸೂಪರ್
ವಂದನೆಗಳು ಮೇಡಂ
ಚೆನ್ನಾಗಿದೆ
ಧನ್ಯವಾದಗಳು
ರವಿ ಕಾಣದ್ದನ್ನು ಕವಿ ಕಂಡಂತೆ ಎನ್ನುತ್ತಾರಲ್ಲವೇ?
ಕವಿ ತನ್ನನ್ನು ತಾನೇ ಕಂಡುಕೊಂಡ ಪರಿ ಕವಿಗಳಿಗೆಲ್ಲಾ ಖಂಡಿತಾ ಇಷ್ಟವಾಗುವಂತಿದೆ, ನನಗೂ ಕೂಡ….
ಧನ್ಯವಾದಗಳು ಅಕ್ಕಾ