ಮಳೆ…ಮಳೆ…ಮಳೆ
ಮಳೆಯೆಂಬುದು ಇಳೆಗೆ ಹಳೆಯ ಗೆಳೆಯನೇ ಆದರೂ
ದೂರದಲ್ಲದೊ ಬರುತ್ತಾನೆಂದು ಸುದ್ದಿ ಸಿಕ್ಕಿದರು ಸಾಕು
ಚಾಮರ ಬೀಸಿ ಧೂಳೆಬ್ಬಿಸಿ ಸಡಗರವೋ ಸಡಗರ!
ಋತುಸ್ನಾತೆಯ ಎದೆಯ ಅಂಗಳದಲ್ಲಿ ಡವಡವದ ರವ |1|
ಹೀಗೊಂದು ಕಣ್ಣು ಮುಚ್ಚಾಲೆ ಆಡಿದರೆ ಆ ಮಳೆರಾಯ
ತಾಳಬೇಕಲ್ಲವೇ ಮಕ್ಕಳೊಂದಿಗಳು ಎಷ್ಟೆಂದರೂ ಇಳೆಯಮ್ಮ
ಕಿವಿಯೆಲ್ಲ ಮಳೆರಾಯನ ವೈಹಾಳಿಯ ಅಬ್ಬರಕೆ ತೆತ್ತರೂ
ಕಣ್ಣೆಲ್ಲ ,ಒಡಲ ಮಿಡಿತಗಳೆಲ್ಲ ಮಕ್ಕಳೊಡಲ ಸಂಕಟಕೆ ಮೀಸಲು |2|
ಮಳೆರಾಯನ ಬಗೆಗೆ ನಾನೇಕೆ ದೂರಲಿ?
ಅಂತೊಬ್ಬ ದೊರೆಗೆ ಹೀಗೊಬ್ಬ ರಾಣಿಯ ನೆನಪು
ಆಗವಲ್ಲದು ಎಂದರೆ ಉಂಗುರದ ನೆಪವ ಒಡ್ಡುವರು ಯಾರು?
ನಾನಂತೂ ವಲ್ಲೆ ವಲ್ಲೆ ವಲ್ಲೆ …..-……..-…….. |3|
-ಡಾ.ಮಹೇಶ್ವರಿ. ಯು
ಚೆನ್ನಾಗಿದೆ
ಚೆನ್ನಾಗಿದೆ ನಿಮ್ಮ ಕವನ. ಧನ್ಯವಾದಗಳು
ಚೆನ್ನಾಗಿದೆ
ಸುಂದರ ಕವನ
ಸಾಂದರ್ಭಿಕ ಕವನ..ಸೊಗಸಾಗಿದೆ.
ಅರ್ಥಪೂರ್ಣ ಸಕಾಲಿಕ ಕವನ.
ಚೆನ್ನಾಗಿ ದೆ
ಮಳೆರಾಯ, ಇಳೆಯಮ್ಮನ ಸಡಗರ, ಸಂಭ್ರಮ ಸಂತಸವ ತಂದಿದೆ.
ಶಕುಂತಲೆಯ ಒಡಲ ಉರಿ ಚೆನ್ನಾಗಿ ಮೂಡಿಬಂದಿದೆ
ವಂದನೆಗಳು
ಮೆಚ್ಚುನುಡಿಗಳನ್ನಾಡಿದ ಎಲ್ಲರಿಗೂ ನನ್ನ ವಂದನೆಗಳು..