ಹೃದಯದ ಮಾತು
ಮನಸ್ಸೇ ನೀನೇಕೆ ಹೀಗೆ
ಬಿಟ್ಟರೆ ಸಿಗದಂತೆ ಹರಿದೋಡುವೆ
ಎಣೆಇಲ್ಲ ಮಿತಿ ಇಲ್ಲ
ನಿನ್ನಾಲೋಚನೆಗೆ
ನಲಿನಲಿಯುವೆ ನೀ ಕೆಲವೊಮ್ಮೆ
ಮುದುರಿ ಮೂಲೆ ಸೇರುವೆ
ಮಗದೊಮ್ಮೆ
ಜೊತೆಯಲೇಕಿರಲೊಲ್ಲೆ
ನೀ ಬರಲೇಕೆ ಒಲ್ಲೆ
ನಾ ಹೋದ ಕಡೆಯಲ್ಲೆ
ಹಠಕ್ಕೆ ಬೀಳುವುದು
ನಿನಗೊಂದು ಚಟ
ನಿನ್ನೊಂದಿಗೆ ನನ್ನದು
ಮುಗಿಯದ ಹೋರಾಟ
ನನ್ನೊಡನಿರು
ನಾ ಹೇಳಿದಂತೆ ಕೇಳು
ಇದೇ ನನ್ನಾಸೆ, ಇಂಗಿತ
-ನಟೇಶ
ಮನದೊಳಗಿನ ವಿಧ ವಿಧ ಭಾವ ಅನಾವರಣಗೊಳಿಸಿದ ಪರಿ ಚೆನ್ನಾಗಿದೆ.
ಮನವೆಂಬ ಮರ್ಕಟದ ಬಗ್ಗೆ ಬರೆದಿರುವ ಕವನ ಅರ್ಥಗರ್ಭಿತವಾಗಿದೆ
ಅಲೆದಾಡುವ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ತವಕ ಚೆನ್ನಾಗಿ ಮೂಡಿಬಂದಿದೆ.. ಕವನದಲ್ಲಿ.
ಕವನದ ನಡಿಗೆ ಚೆನ್ನಾಗಿದೆ