ನೆನಪುಗಳೊಂದಿಗೆ
ಮೌನ ಮೆರವಣಿಗೆ ನಡೆದಿದೆ
ರಥೋತ್ಸವದಲ್ಲಿ
ರಂಗುರಂಗಿನ ಕನಸುಗಳ ಹೊತ್ತು
ನೆನಪುಗಳ ಅನಾವರಣ
ಕಹಿ ಮರೆವಿನ ಪಲಾಯನ !
ಉಳಿದು ಹೋಗಿದೆ ನೆನಪುಗಳು
ಎಂದೆಂದಿಗೂ ಕರಗದಂತೆ
” ತಿಮ್ಮಪ್ಪನ ” ಐಶ್ವರ್ಯದಂತೆ
ಬಳಸಿದಷ್ಟೊ ……
ಕರಗಿಸಿದಷ್ಟೊ ……
ಎಂದೆಂದಿಗೂ ಮುಗಿಯದಂತೆ…..
ನೆನಪಿನ ಹನಿಗಳು ಜಾರುತಿದೆ
ಬಿಸಿಬಿಸಿಯಾಗಿ ಕೆನ್ನೆಗಳ ಮೇಲೆ
ಜಾರಿದರೂ ಉಳಿಸಿ ಹೋಗಿವೆ
ನೆನಪಿನ ಚಿತ್ತಾರವನ್ನು
ನೆನಪುಗಳೇ ಹಾಗೆ
ಮರೆಯಬೇಕೆಂದರೂ ,
ಮರೆಯಲಾಗದ , ಹಳೆಯದಾದಷ್ಟೊ
ನೆನಪುಗಳು ಮತ್ತೆ ಮತ್ತೆ ಕಾಡುತ್ತವೆ
ಜೀವದೊಡನೆ ಬೆಸೆದಿರುವ
ಆತ್ಮದಂತೆ ಹೃದಯದೊಳಗೇ
ಬೆಚ್ಚಗೆ ಮುದುಡಿ ಮಲಗಿದೆ ನೆನಪುಗಳು …..
ಆದರೂ,
ನನಗೆ ಭಯ
ರೆಕ್ಕೆ ಪುಕ್ಕ ಬಲಿತೊಡನೆ
ಗೂಡುಬಿಟ್ಟು ಹಾರಿಹೋಗುವ
ಪುಟ್ಟ ಹಕ್ಕಿಯಂತಾದರೆ ……?!
-ಪ್ರಭಾಕರ ತಾಮ್ರಗೌರಿ, ಗೋಕರ್ಣ
ನೆನಪುಗಳು ಬೆಚ್ಚನೆಯ ಗೂಡಿನಲ್ಲಿದ್ದರೆ ಚೆನ್ನ ಆಗಾಗ ಮೆಲುಕು ಹಾಕಬಹುದು .. ರೆಕ್ಕೆ ಬಲಿತ ಹಕ್ಕಿಯಂತಾಗಬಾರದೆಂಬ ಅನಿಸಿಕೆ ವ್ಯಕ್ತಪಡಿಸಿರುವ ಕವನ ಚೆನ್ನಾಗಿದೆ ಅಭಿನಂದನೆಗಳು ಸಾರ್
ತುಂಬಾ ಧನ್ಯವಾದಗಳು ಮೇಡಂ
ಬ್ಯೂಟಿಫುಲ್
ಧನ್ಯವಾದಗಳು ಮೇಡಂ
ಕಟು ನೆನಪುಗಳು ಕಾಡಿದಾಗ, ಕೆನ್ನೆ ಮೇಲೆ ಕಣ್ಣೀರು ಹರಿಯದಿರುವುದೇ? ಮನದ ಭಾವನೆಗಳನ್ನು ಕವನದ ಸಾಲುಗಳಲ್ಲಿ ಬಿತ್ತಿದ ಬಗೆ ಸೊಗಸಾಗಿದೆ.
ವಾವ್ ಸೂಪರ್ ಸರ್
Nice presentation