ಹೋರಾಟ
ಮಲೆನಾಡ ಹಸಿರ
ಬೆಟ್ಟಗಳ ನಡುವೆ
ಕುಳಿತು ಬರೆಯಲಿಲ್ಲ
ಈ ಕವನಗಳ…..
ಬಯಲು ಸೀಮೆಯ
ಬರಡು ಭೂಮಿಯ ನಡುವೆಯೇ
ಎದೆಯ ನೆಲದೊಳಗೆ
ಹಸಿರು ಹಾಸಿಕೊಂಡು
ಅಡುಗೆ ಮನೆಯ ಒಗ್ಗರಣೆಗಳ
ಘಾಟಿನ ನಡುವೆ
ಮಲ್ಲಿಗೆ ಸಂಪಿಗೆಯ
ಘಮ ಘಮ ಸುವಾಸನೆಯ
ಊಹಿಸಿಕೊಂಡು
ಹೃದಯದ ನಾಳಗಳ ಕತ್ತರಿಸುವ
ಒರಟು ಮಾತುಗಳ ನಡುವೆ
ಸುರಿವ ರಕುತವ
ಶಾಯಿಯಾಗಿಸಿಕೊಂಡು
ಬದುಕಲೇಬೇಕೆಂಬ
ಚೈತನ್ಯ ಶಕ್ತಿಯ ಉಳಿಸಿಕೊಂಡು
ಸಾಧಿಸಲೇಬೇಕೆಂಬ ಸ್ಪೂರ್ತಿಯ
ಜೀವಂತವಾಗಿಸಿಕೊಂಡು
ಬರೆದವು ಈ ಕವನಗಳು
ಬರೀ ಕವನಗಳಲ್ಲ
ಹೆಣ್ಣಿನ ಅಸ್ತಿತ್ವದ
ಹೋರಾಟದ ಪ್ರತೀಕ
ಈ ಕವನಗಳು
-ವಿದ್ಯಾ ವೆಂಕಟೇಶ, ಮೈಸೂರು
ಚೆನ್ನಾಗಿದೆ
ವಂದನೆಗಳು
ಹೆಂಗೆಳೆಯರು ಇರುವ ಪರಿಸರ ಪರಿಸ್ಥಿತಿ ಯಲ್ಲಿ ಯೇ ತಮ್ಮ ಅನುಭವದ ಮೂಸೆಯಲ್ಲಿ ಅದ್ದಿ ಉಣಬಡಿಸುವ ರೀತಿ ತಾವಿದ್ದ ಲ್ಲಿಯೇ ಕಲ್ಪಿಸುವ ಕಲೆಗಾರಿಕೆಯ ಹಿಂದಿನ ಪರಿಶ್ರಮವನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ಬಗೆ ಚೆನ್ನಾಗಿ ಮೂಡಿ ಬಂದಿದೆ.. ಚಿಕ್ಕ ದರಲ್ಲಿ ದೊಡ್ಡ ಚಿಂತನೆ.. ಅಭಿನಂದನೆಗಳು ಸೋದರಿ ವಿದ್ಯಾ.
ಧನ್ಯವಾದ ಗಳು ಅಕ್ಕಾ
ಛಲವಂತಿಕೆಯನ್ನು ಹುರಿದುಂಬಿಸುವ ಉತ್ಸಾಹೀ ಕವನ.
ವಂದನೆಗಳು ಅಕ್ಕಾ
ಉಳಿವಿಗಾಗಿ ನಿರಂತರ ನಡೆಯುವ ಹೆಣ್ಣಿನ ಹೋರಾಟವನ್ನು ಭಾವಪೂರ್ಣವಾಗಿ ವ್ಯಕ್ತಪಡಿಸಿದ ಕವನ ತುಂಬಾ ಚೆನ್ನಾಗಿದೆ ವಿದ್ಯಾ ಮೇಡಂ.
ಮೆಚ್ಚುಗೆಗೆ ಧನ್ಯವಾದ ಗಳು ಮೇಡಂ
Nice kavana Vidya ide rete nima kavana munduvarsi
ತುಂಬಾ ಅರ್ಥಪೂರ್ಣ ಕವನ
Keep Up the good work
ಪ್ರೋತ್ಸಾಹ ಕ್ಕೆ ವಂದನೆ
Very nice Vidya
Very nice
ಲಯಬದ್ಧ ಭಾವಾಭಿವ್ಯಕ್ತಿ ಕವನವಾದೀತು.
ಚೆಂದದ ಕವನ.
ತುಂಬಾ ಚೆಂದದ ಸಾಲುಗಳು ಮನಸಿಗೆ ಇಂಪು ನೆಮ್ಮದಿ ಕೊಡುವ ಕವನ ತುಂಬಾ ಇಷ್ಟವಾಯಿತು