“ಆಶಾಕಿರಣ”
ದೊಡ್ಡ ಪ್ರಪಂಚ
ಪುಟ್ಟ ಗುಡಿಸಲು
ಮುಗ್ಧ ಹುಡುಗಿಯ
ಆಗಾಧ ಭಾವದಾಗಸ,
ಮಿರಮಿರ ಮಿನುಗುವ
ಕನಸಿನ ಮನಸು
ಮುಳ್ಳುಗಳ ನಡುವೆಯು
ಮಂದಾರದ ಸೊಗಸು,
ಹೂಗಳು ಅರಳುತ್ತಿದ್ದವು
ದಳಕ್ಕೆ ಮುಳ್ಳುಗಳು
ತಾಕಿ ರಕ್ತ ತೊಟ್ಟಿಕ್ಕುತ್ತಿತ್ತು
ಪುಟ್ಟ ಹುಡುಗಿಯದು
ದೊಡ್ಡ ಹೃದಯ
ರಕ್ತ ಬಿದ್ದಲ್ಲೆಲ್ಲಾ
ಮತ್ತೊಂದು ಮತ್ತೊಂದು ಮೊಗ್ಗು
ನಾ ನಗುವೆ
ನಾ ಬಾಳುವೆ
ಎಂದು ಅರಳಿತು
–ವಿದ್ಯಾ ವೆಂಕಟೇಶ. ಮೈಸೂರು
Nice
ಹೂವು ಹೆಣ್ಣು ಹೋಲಿಕೆ ಮಾಡಿ ಬರೆದಿರುವ ಕವನ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಸೋದರಿ ವಿದ್ಯಾ
ವಂದನೆಗಳು ಅಕ್ಕಾ
Very nice Vidya keep writing
Super….
Nice.
ಹೆಣ್ಣುಮಕ್ಕಳ ಆತ್ಮಸ್ಥೈರ್ಯ ಎಂದಿಗೂ ಕುಂದದು ಎನ್ನುವ ಸಂದೇಶದೊಂದಿಗೆ ಮೂಡಿಬಂದ ಸೊಗಸಾದ ಕವನ…ಧನ್ಯವಾದಗಳು.