ನೋಟು ಬಂಧಿ…ಭಾವನೆ ಬಂಧಿಯೆ???
ಬಂಧಿಯಾಯ್ತು ಒಮ್ಮೆ ನೋಟು ಐನೂರು
ತಿರುಗಿ ನೀಡಬೇಕಾಯ್ತು ಎಲ್ಲ ಬಳಕೆದಾರರು
ಹಾ ಇದಾಗಿ ಕಳೆದಿತ್ತು ವರ್ಷ ಹಲವಾರು
ನಾನೊಮ್ಮೆ ಕಪಾಟು ತೆರೆದಾಗ ಅಲ್ಲಿ ಕಂಡಿತ್ತೊಂದು ಕವರು
ಅದ ನೋಡಿ ಹರುಷದಿಂದ ಹೊಮ್ಮಿತ್ತು ಕಣ್ಣೀರು
ಒಳಗೆ ರೂಪಾಯಿ ಐನೂರು ಮೇಲೆ ಎರಡು ಹೆಸರು
ಮೊಮ್ಮಗನ ಹೆಸರಿನ ಜೊತೆ ಅಜ್ಜಿ ತಾತ ಎಂಬ ಬರಹಕ್ಕೆ ವರ್ಷವಾಗಿತ್ತು ಮೂರು
ಅವ ತೇರ್ಗಡೆ ಎಂದಾಗ ಕೊಟ್ಟ ಆ ಕಾಣಿಕೆ ನೆನಪಿನ್ನೂ ಹಸಿರು
ಸರ್ವೇಜನಸುಖಿನೋಭವಂತು ಇದ ರೂಢಿಸಿಕೊಂಡ ನನ್ನ ಪೋಷಕರು
ಆ ಕಾಣಿಕೆ ಕೊಟ್ಟ ಆ ನನ್ನ ತಂದೆ ಎಲ್ಲಿ ಜನ್ಮವೆತ್ತಿರುವರೋ ಮರು
ಕಾಪಾಡಿ ತೋರಿಸುವಾಸೆ ಮತ್ತೆ ಮರಳಿ ಬಂದಾಗ ಅವರು
ಕೃಪೆ ತೋರಿ ತೀರಿಸುವರೇ ಈ ಮಹದಾಸೆಯ ಆ ದೇವರು?
ಈ ನೋಟಿಗೆ ಸಮಾನವಾದೀತೆ? ಕೋಟಿಗಟ್ಟಲೆ ರೂಪಾಯಿ,ಡಾಲರು
ಆ ಶ್ರೀರಕ್ಷೆಯ ಐನೂರನ್ನು ಮಗುವಂತೆ ರಕ್ಷಿಸುವೆ ವರುಷವಾಗಲಿ ನೂರಾರು.
-ಲತಾಪ್ರಸಾದ್
ಕೆಲವೊಂದು ಭಾವನೆಗಳೇ ಹಾಗೆ, ಬೆಲೆ ಕಟ್ಟಲಾಗದ್ದು
ಧನ್ಯವಾದಗಳು ನಯನ ಮೇಡಂ
Very nicely written latha
ಧನ್ಯವಾದಗಳು ರೂಪ
ನೆನಪುಗಳೇ ಹಾಗೆ ಬೆಲೆಕೊಟ್ಟು ಕೊಂಡು ಕೊಳ್ಳಲಾಗದಷ್ಟು ಪ್ರೀತಿಯ ಸೆಲೆ ಕವನದ ಮೂಲಕ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ ಮೇಡಂ.
ಆಪ್ತಭಾವದ ಕವನ..ಚೆನ್ನಾಗಿದೆ
ಬಹಳ ಸೊಗಸಾದ ರಚನೆ
ಧನ್ಯವಾದಗಳು ನಾಗರತ್ನ ಮೇಡಂ,ಹೇಮ ಮೇಡಂ
U rock Latha. ಭಾವನೆಗಳಿಗೆ ಖಂಡಿತ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿನ್ನ ಕವಿತೆ ಅತ್ಯದ್ಭುತ.
ಭಾವನೆಗಳಿಗೆ ಖಂಡಿತ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿನ್ನ ಕವಿತೆ ಅತ್ಯದ್ಭುತ.
ಅಮೂಲ್ಯವಾದ ಕೊಡುಗೆಗೆ ಬೆಲೆ ಕಟ್ಟಲಾಗದು ಎಂಬುದನ್ನು ಚೆನ್ನಾಗಿ ಮೂಡಿಸಿದ್ದೀರ ಲತಾರವರೆ.
ಧನ್ಯವಾದಗಳು ಶಿಲ್ಪ , ವತ್ಸಲರವರೆ
ಅಪೂರ್ವ ಕಾಣಿಕೆ!
ಎಂದೆಂದೂ ಹಾಗೆ ಅಲ್ಲವೇ, ಕಾಣಿಕೆಗಿಂತ ಅದ ನೀಡಿದವರ ಭಾವ, ಸಂಬಂಧ ಹಾಗೂ ಸಂದರ್ಭ ಮನದ ಗೂಡಿನಲ್ಲಿ ಬೆಚ್ಚಗೆ ಕುಳಿತು ಬಿಡುತ್ತದೆ.
even i have kept a cover like this given to me by my appa
ಹೌದು….ಬೆಲೆಕಟ್ಟಲಾಗದ, ಅತ್ಯಮೂಲ್ಯವಾದ ಹಿರಿಯರಾಶೀರ್ವಾದದ ಕುರುಹುಗಳು ನಮಗೆ ಆನಂದದ ಜೊತೆಗೆ ಭರವಸೆಯನ್ನೂ ನೀಡುತ್ತವೆ…ಸುಂದರ ಭಾವನಾತ್ಮಕ ಕವನ.
ಮೆಚ್ಚುಗೆ ಸೂಚಿಸಿದ ಸರ್ವರಿಗೂ ಧನ್ಯವಾದಗಳು