ಬೀಗದಿರು-ಬಾಗದಿರು
ಗೆದ್ದಾಗ ಎದೆಯುಬ್ಬಿಸಿ ಬೀಗದಿರು
ಸೋತಾಗ ತಲೆ ತಗ್ಗಿಸಿ
ಬಾಗದಿರು
ಗೆಲುವು ಸೋಲುಗಳು
ಜೀವನದ ಅವಿಭಾಜ್ಯ ಅಂಗ
ಗತಕಾಲದ ಕೆಟ್ಟದನು
ಮತ್ತೆಂದು ನೆನೆಯದಿರು
ಸತ್ಯದ ದಾರಿಯಲ್ಲಿ
ಎಂದೆಂದು ನಡೆಯುತಿರು
ತೊರೆಯದಿರು ಎಂದೆಂದು
ಸಜ್ಜನರ ಸಂಘ
ಮಿತ್ರ ದ್ರೋಹವನು
ಎಸಗದಿರು
ದ್ವೇಷಾಸೂಯೆಗಳ
ಬೆಳಸದಿರು
ಶುದ್ಧ ಮಾಡುತಲಿರು
ನೀ ನಿನ್ನಂತರಂಗ
ಕಷ್ಟಗಳನೆದುರಿಸುತಿರು
ಇಷ್ಟಗಳನರಸುತಿರು
ಉಪಕಾರಗಳನೆಂದು
ಮರೆಯದೆ ನೆನೆಯುತಿರು
ಗೊತ್ತಿದ್ದೂ ಸೇರದಿರು
ದುರ್ಜನರ ಸಂಘ
ಏನಾಗುವುದೋ
ಏನಾಗದಿರುವುದೋ
ಮಾನವೀಯತೆಯ
ಮರೆಯದಿರು
ಇರೋವರೆಗೂ
ಕೊನೆಯುಸಿರು
ಅದತಾನೆ ಬಯಸುತಿದೆ
ಸರ್ವ ಜನಾಂಗ
-ನಟೇಶ
ಚೆನ್ನಾಗಿದೆ
ತುಂಬಾ ಚೆನ್ನಾಗಿದೆ
ಚೆನ್ನಾಗಿ ಮೂಡಿ ಬಂದಿದೆ.
ಸರಳ ಸುಂದರ ಕವನ ಚೆನ್ನಾಗಿದೆ ಸಾರ್.
ಚಂದದ ಸಾಲುಗಳು
ಜೀವನದಲ್ಲಿಯ ಸರಿತಪ್ಪುಗಳನ್ನು ಎತ್ತಿ ತೋರಿಸಿ, ಸರಿ ದಾರಿಯಲ್ಲಿ ನಡೆಯುವ ಪರಿಯನ್ನು ಭಾವಪೂರ್ಣವಾಗಿ ಬಿಂಬಿಸಿದ ಕವನ ಸೊಗಸಾಗಿದೆ.
ಆಗಾಗ ಜೀವನದಲ್ಲಿ ನೆನಪಿಸಿಕೊಂಡು ಅಳವಡಿಸಿಕೊಳ್ಳ ಬೇಕಾದ ತತ್ವಗಳನ್ನೊಳಗೊಂಡ ಸುಂದರ ಕವಿತೆ.