ಸಾಮಾನ್ಯರಲ್ಲಿ ಅಸಾಮಾನ್ಯ…

Share Button

ಯುನೈಟೆಡ್ ಸ್ಟೇಟ್ಸನ ಇಂಡಿಯಾನದಲ್ಲಿರುವ ಹೆನ್ರಿವಿಲೆ ನಗರದಲ್ಲಿ ಒಬ್ಬ ಬಾಲಕನಿದ್ದನು. ಇವರ ತಂದೆ ವಿಲ್ ಬಡ್೯ಡೇವಿಡ್.ತಾಯಿ ಮಾರ್ಗರೇಟ್ ಈ ಬಾಲಕನಿಗೆ ಒಬ್ಬ ತಂಗಿ ಮತ್ತು ತಮ್ಮನಿದ್ದನು. ಬಾಲಕನು ಐದು ವರ್ಷದ ಮಗುವಿದ್ದಾಗ ಇವರ ತಂದೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾನೆ. ಜೀವನ ನಡೆಸುವುದಕ್ಕಾಗಿ ತಾಯಿಯು ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾಳೆ. ಕೇವಲ ಐದು ವರ್ಷದ ಪುಟ್ಟ ಹುಡುಗನಿಗೆ ತನ್ನ ತಂಗಿ ಮತ್ತು ತಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ ಉಂಟಾಗುತ್ತದೆ.

ಈ ಬಾಲಕನಿಗೆ ಅವರ ತಾಯಿ ಚಿಕ್ಕ ವಯಸ್ಸಿನಲ್ಲಿಯೇ ಅಡುಗೆ ಮಾಡಲು ಕಲಿಸುತ್ತಾಳೆ. ಕೇವಲ ಏಳು ವರ್ಷ ವಯಸ್ಸಿನಲ್ಲಿಯೇ ಹಲವು ರೀತಿಯ ಅಡುಗೆಗಳನ್ನು ಮಾಡಲು ಕಲಿಯುತ್ತಾನೆ.ಅದರಲ್ಲೂ ಈ ಬಾಲಕನಿಗೆ ಚಿಕನ್ ಡಿಶೆಸ್ ತಯಾರಿಸಲು ಆಸಕ್ತಿ.ಹೀಗಿರುವಾಗಲೆ ಈ ಬಾಲಕನ ಅಮ್ಮ ಮಾರ್ಗರೇಟ್ ಮತ್ತೊಂದು ಮದುವೆಯಾಗುತ್ತಾಳೆ. ಮದುವೆಯನಂತರ ಇವರ ತಂದೆ ಈ ಹುಡುಗನಿಗೆ ತುಂಬಾ ದ್ವೇಷ ಮಾಡುತ್ತಿದ್ದರು. ಇದರಿಂದ ಬೇಸರಗೊಂಡ ಈ ಬಾಲಕ ಮನೆಯನ್ನು ಬಿಟ್ಟು ಹೋಗುತ್ತಾನೆ. ಆಗ ಕೇವಲ ಈ ಹುಡುಗನಿಗೆ ಹದಿನಾಲ್ಕು ವರ್ಷ ವಯಸ್ಸು. ಯಾವುದೋ ಒಂದು ಫಾರ್ಮ್ ಹೌಸ್ ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಾನೆ. ಮನೆಬಿಟ್ಟ ಕಾರಣ ಏಳನೇ ತರಗತಿಯಲ್ಲಿ ತನ್ನ ವ್ಯಾಸಂಗವನ್ನು ಕೂಡ ನಿಲ್ಲಿಸಬೇಕಾಗುತ್ತದೆ. ನಂತರ ತನ್ನ ಹದಿನಾರನೆಯ ವಯಸ್ಸಿನಲ್ಲಿ ಇಂಡಿಯಾನದ ನ್ಯೂವ ಆಲ್ಬಾನಿ ಸ್ಥಳಕ್ಕೆ ಮತ್ತೊಂದು ಕೆಲಸಕ್ಕಾಗಿ ತೆರಳುತ್ತಾನೆ. ಅಲ್ಲಿ ತಮ್ಮ ಸಂಬಂಧಿಕರಾದ ಅಂಕಲ್ ಒಬ್ಬರ ಜೊತೆ ಕೆಲಸ ಮಾಡಲು ಪ್ರಾರಂಭಿಸುತ್ತಾನೆ .

ಅವರ ಅಂಕಲ್ ಕಾರ್ ಮತ್ತು ಬಸ್ ಗಳ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದರು. ಈ ಬಾಲಕನಿಗೆ ಒಂದು ಕಂಡೆಕ್ಟರ್ ಕೆಲಸವನ್ನು ಕೊಡಿಸುತ್ತಾನೆ ಸ್ವಲ್ಪ ದಿನಗಳ ನಂತರ ರೈಲ್ವೆ ಸ್ಟೇಷನ್ ನಲ್ಲಿ ಫ್ ಯರ್ ಮ್ಯಾನ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆ ಸಮಯದಲ್ಲಿ ಈ ಹುಡುಗನಿಗೆ ಜೊಸೆಫಿನೆ ಎಂಬ ಹುಡುಗಿಯ ಜೊತೆ ಸ್ನೇಹ.ಪ್ರೀತಿ ಬೆಳೆಯುತ್ತದೆ . ಇವರಿಬ್ಬರ ಮದುವೆಯಾಗುತ್ತದೆ ಆಗ ಈ ಹುಡುಗನಿಗೆ ಕೇವಲ ಹತ್ತೊಂಬತ್ತು ವಯಸ್ಸು. ಇವರಿಬ್ಬರಿಗೆ ಒಂದು ಗಂಡು ಮಗು ಮತ್ತು ಇಬ್ಬರು ಹೆಣ್ಣುಮಕ್ಕಳು ಆಗುತ್ತವೆ . ಕೆಲವು ವರ್ಷಗಳ ಕಾಲ ಸಾಂಸಾರಿಕ ಜೀವನ ಚೆನ್ನಾಗಿ ಸಾಗುತ್ತದೆ. ಯಾವುದೋ ಒಂದು ಕಾರಣಕ್ಕಾಗಿ ರೈಲ್ವೆಯಲ್ಲಿ ತನ್ನ ಸಹ ಉದ್ಯೋಗಿಯೊಂದಿಗೆ ಗಲಾಟೆ ಮಾಡುತ್ತಾನೆ.ಈ ಕಾರಣಕ್ಕಾಗಿ ಕೆಲಸವನ್ನು ಕಳೆದುಕೊಂಡು ನಿರುದ್ಯೋಗಿಯಾದ. ನಂತರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇದರಿಂದ ಹೆಂಡತಿ ಮಕ್ಕಳು ಇವನನ್ನು ಬಿಟ್ಟು ದೂರ ಹೋಗುತ್ತಾರೆ. ಇದರಿಂದ ಬಹಳ ಬೇಸರವಾಗಿ ಬಹಳಷ್ಟು ದಿನಗಳ ಕಾಲ ನಿರುದ್ಯೋಗಿಯಾಗಿ ಕಾಲವನ್ನು ಕಳೆಯುತ್ತಾನೆ. ತನ್ನ ಹೊಟ್ಟೆಪಾಡಿಗಾಗಿ ಮತ್ತೇ ಕೆಲಸವನ್ನು ಹುಡುಕಲು ಪ್ರಾರಂಭಿಸಿದನು. ಆದರೆ ಎಲ್ಲ ಕೆಲಸಗಳಲ್ಲಿ ವಿಫಲನಾಗುತ್ತಾನೆ.

ನಂತರ ತನ್ನ ಹತ್ತಿರ ಇದ್ದಂತಹ ಸ್ವಲ್ಪ ಹಣದಿಂದ 1930 ರಲ್ಲಿ ಕೆಂಟುಕಿ ಕಾರ್ಬಿ ನ ಎಂಬ ಸ್ಥಳದಲ್ಲಿ ಒಂದು ಚಿಕ್ಕ ರೆಸ್ಟೊರೆಂಟ್ ತೆಗೆಯುತ್ತಾನೆ. ಅಲ್ಲಿ ತುಂಬಾ ರುಚಿಯಾದಂತಹ ಚಿಕನ್ ಮತ್ತು ಇನ್ನಿತರ ಆಹಾರಗಳನ್ನು ತಯಾರಿಸುತ್ತಾನೆ. ಬಂದು ಹೋಗುವವರಿಗೆ ಇವರ ಕೈ ರುಚಿ ತುಂಬಾ ಇಷ್ಟವಾಗುತ್ತದೆ.ಇದರಿಂದ ಸಂತೋಷಗೊಂಡು ಈ ರೆಸ್ಟೋರೆಂಟ್ ಇನ್ನು ಅಭಿವೃದ್ಧಿಯಾಗಬೇಕೆಂದು ಕಾರ್ನೆಲ್ ಯೂನಿವರ್ಸಿಟಿಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕಲಿಯುತ್ತಾನೆ. ಆಗ ಇವರಿಗೆ ನಲವತ್ತೇರಡು ವಯಸ್ಸು. ಇವರ ಚಿಕನ್ ಡಿಶೆಸ್ ರುಚಿಗೆ ಮರುಳಾದ ಕೆಂಟುಕಿ ಗವರ್ನರ್ ರೂವಿ ಲೆಪ್ಚುನ್ ರವರು ಇವರಿಗೆ ” ಕೆಂಟುಕಿ ಕರ್ನಲ್ “ ಎಂಬ ಬಿರುದನ್ನು ನೀಡುತ್ತಾನೆ. ನಂತರ ಕೆಂಟುಕಿಯಲ್ಲಿ ಹಲವು ಶಾಖೆಗಳನ್ನು ತೆರೆಯಬೇಕು ಎಂಬ ಮನಸ್ಸಾಗುತ್ತದೆ. ಆದರೆ ಈ ಪ್ರಯತ್ನದಲ್ಲಿ ಅವರಿಗೆ ಬಹಳ ನಷ್ಟ ವಾಗುತ್ತದೆ. ಮತ್ತೇ ನಿರಾಶೆಗೊಳಗಾಗುತ್ತಾರೆ. ಬಹಳಷ್ಟು ದಿನಗಳ ಕಾಲ ನಿರುದ್ಯೋಗಿ ಯಾಗಿ ಕಾಲವನ್ನು ಕಳೆಯುತ್ತಾರೆ.

ಆಗಲೇ ಅವರಿಗೆ ಅರವತ್ತು ವರ್ಷ ವಯಸ್ಸಾಗಿತ್ತು. ಆದರೂ ಕೂಡ ತಮ್ಮ ಪ್ರಯತ್ನ ಬಿಡಲಿಲ್ಲ. ಯಾಕೆಂದರೆ ಅವರಿಗೆ ತಮ್ಮ ಚಿಕೆನ್ ಡಿಶಸ್ ಮೇಲೆ ಬಹಳಷ್ಟು ನಂಬಿಕೆ ಇತ್ತು. ತಮ್ಮ ಚಿಕನ್ ಡಿಶೆಸ್ಗೇ ಸಂಬಂಧಿಸಿದ ಮಸಾಲೆ ಪದಾರ್ಥಗಳ ಮಾಹಿತಿಯನ್ನು ಇಟ್ಟುಕೊಂಡು ಕೆಲಸಕ್ಕಾಗಿ ಅನೇಕ ರೆಸ್ಟೋರೆಂಟ್ ಗಳನ್ನು ಸುತ್ತುತ್ತಾನೆ.ಆದರೆ ಎಲ್ಲಾ ರೆಸ್ಟೋರೆಂಟ್ ಗಳು ನಿರಾಕರಿಸುತ್ತಾರೆ. ಆದರೆ ಹಲವು ಪ್ರಯತ್ನಗಳ ನಂತರ ದೊಡ್ಡ ಗ್ರಾಹಕನನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ಅವರೇ ಪಿಠೇ ಹರ್ಮನ್ . ಇವರು ಬಹಳಷ್ಟು ರೆಸ್ಟೋರೆಂಟ್ಗಳ ಮಾಲಿಕರು ಇವರಿಗೆ. ತಮ್ಮ ಕೆಂಟುಕಿ ಫ್ರೈಡ್ ಚಿಕನ್ (KFC) ರೆಸಿಪಿ ಹೇಳುತ್ತಾರೆ. ಇಬ್ಬರ ನಡುವೆ ವ್ಯವಹಾರ ಒಪ್ಪುಗೆಯಾಗುತ್ತದೆ. ಈ ಫ್ರೈಡ್ ಚಿಕನ್ ಜನರಿಗೆ ಎಷ್ಟು ಇಷ್ಟವಾಗುತ್ತದೆ ಎಂದರೆ, ಪಿಠೇ ಹರ್ಮನ್ ರವರ ಆದಾಯ 75% ಜಾಸ್ತಿಯಾಗುತ್ತದೆ . ತಮ್ಮ ಅರವತ್ತೇರಡನೇಯ ವಯಸ್ಸಿನಲ್ಲಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮುತ್ತಾನೆ ಅವರೇ ” ಹರ್ಲ್ಯಾಂಡ ಸ್ಯಾಂಡಸ೯ Harland Sanders ” 1952 ರಲ್ಲಿ KFC ಅಂದ್ರೆ ( ಕೆಂಟುಕಿ ಫ್ರೈಡ್ ಚಿಕನ್) ಕಂಪನಿಯ ಸ್ಥಾಪಕನಾಗುತ್ತಾನೆ . ಹೀಗೆ ಹಲವಾರು ದಿನಗಳ ಕಾಲ ಉತ್ತಮ ಜೀವನವನ್ನು ನಡೆಸಿ ತಮ್ಮ ತೊಂಭತ್ತನೇ ವಯಸ್ಸಿನಲ್ಲಿ ಹಸುನಿಗುತ್ತಾರೆ. ಇವರು ಹುಟ್ಟು ಹಾಕಿದ KFC ಕಂಪನಿ ಇಂದು ಹೆಮ್ಮರವಾಗಿ ಬೆಳೆದಿದೆ‌. ಇಂದು 118 ಕ್ಕೂ ಹೆಚ್ಚು ದೇಶಗಳಲ್ಲಿ ರೆಸ್ಟೋರೆಂಟ್ ಗಳಿವೆ..

PC: Internet

ಜೀವನದುದ್ದಕ್ಕೂ ಸೋಲುಗಳನ್ನು ಕಂಡಂತಹ ವ್ಯಕ್ತಿ ತನ್ನ ಹಠವನ್ನು ಬಿಡದೇ 62 ವಯಸ್ಸಿನಲ್ಲಿ ಯಶಸ್ವಿ ಯಾಗುತ್ತಾನೆ. ಅಸಾಧ್ಯವೆಂಬುದು ಈ ಪ್ರಪಂಚದಲ್ಲಿ ಯಾವುದು ಇಲ್ಲ ಎಂಬುದಕ್ಕೆ ಸ್ಯಾಂಡಸ್೯ನ ಬದುಕು ಸಾಕ್ಷಿಯಾಗಿದೆ….

ದೇವಿಕಾ ಮ್ಯಾಕಲ್ , ಶಹಾಪುರ

5 Responses

  1. ನಯನ ಬಜಕೂಡ್ಲು says:

    Very nice

  2. ನಾಗರತ್ನ ಬಿ. ಅರ್. says:

    ಸಾಮಾನ್ಯರಲ್ಲಿ ಅಸ ಮಾನ್ಯ ಅವರು ಮಾಡುವ ಸಾಧನೆಯಲ್ಲಿ.ಹಲ್ಯಾಂಸ್ಯಾಂಡಸ್ರ..ರಪರಿಚಯ ಸಾಧನಾ ಸಾಮರ್ಥ್ಯ ದ ಬಗ್ಗೆ ಮಾಹಿತಿ ನೀಡಿರುವ ಲೇಖನ ಬಹಳ ಚೆನ್ನಾಗಿದೆ ಮಗು ಅಭಿನಂದನೆಗಳು

  3. Padma Anand says:

    ಆತ್ಮಸ್ಥೈರ್ಯವನ್ನು ಉತ್ತೇಜಿಸುವ ವ್ಯಕ್ತಿ ಚಿತ್ರಣ. ಅಭಿನಂದನೆಗಳು.

  4. . ಶಂಕರಿ ಶರ್ಮ says:

    ಸೋಲುಂಟಾದರೆ ಕಂಗೆಡದೆ ಮರಳಿ ಯತ್ನವ ಮಾಡಿ ಯಶಸ್ಸು ಗಳಿಸಿದ ಅದ್ಭುತ ವ್ಯಕ್ತಿಯೊಬ್ಬರ ಜೀವನಗಾಥೆಯು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ. ಸೊಗಸಾದ ಲೇಖನ.

  5. ವಿದ್ಯಾ says:

    ಆಶಾವಾದದ, ಉತ್ತೇಜನ ನೀಡುವ ಉತ್ತಮ ಲೇಖನ
    ,ಧನ್ಯವಾದ ಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: