“ಪ್ರಕೃತಿಯ ಮಡಿಲು”
“ಕಡಿದೇ ಕಾಡು,
ಕಟ್ಟಬೇಕೇನೋ ಮನುಜ ಗೂಡು?,
ಕಾಡಿನ ನಡುವೆಯೂ ಒಂದು
ಮನೆಯ ಮಾಡಿ ನೋಡು”.
“ಹಸಿರಿನಿಂದಲೇ ಉಸಿರು,
ಇದನ್ನು ನೀ ಮರೆಯದಿರು,
ಹಸಿರು ಇಲ್ಲದಿರೆ ದುರ್ಭರ
ಈ ಭೂಮಿ ಮೇಲೆ ನಿನ್ನ ಪಾಡು”.
“ಅಲ್ಲೊಂದು ಪಾತರಗಿತ್ತಿ,
ಇಲ್ಲೊಂದು ಹಾರಿ ಬಂದಿಹ ಹಕ್ಕಿ ಎಲ್ಲೆಲ್ಲೋ ಸುತ್ತಿ,
ಕಣ್ಮುಚ್ಚಿ ಆಲಿಸು ಒಮ್ಮೆ
ಆ ಚಿಲಿಪಿಲಿ ಹಾಡು”.
ಬೀಸುತಿಹುದು ತಂಪು ತಂಗಾಳಿ,
ಬಂದಿಹುದು ಹೂವ ಸುಗಂಧ
ಇನ್ನೆಲ್ಲಿಂದಲೋ ತೇಲಿ,
ಸವಿ ಗೆಳೆಯ ಪ್ರಕೃತಿಯ ಮಡಿಲ ಈ ಸೊಗಡು”.
“ಧುಮ್ಮಿಕ್ಕಿ ಹರಿಯುವ ನೀರ ಝರಿ,
ಕಂಡು ಕಳೆದುಹೋಗುವುದು ಮನ ಕನಸಿನೊಳಗೆ ಜಾರಿ,
ಬೇಕೇನು ಇದನ್ನೆಲ್ಲಾ ಬಿಟ್ಟು ಹಸಿರಿಲ್ಲದ ಮರಳುಗಾಡು?”.
“ಮನವೇ ನೀನಾಗು ಎಚ್ಚರ,
ಆಗುವ ಮುನ್ನವೇ ಬಾಳು ದುಸ್ತರ,
ಚಿಗುರಲಿ ಮನದಲ್ಲಿ ಹಸಿರಿನಂತೆ ಭರವಸೆಯ ಕೊರಡು”.
–ನಯನ ಬಜಕೂಡ್ಲು
ಪ್ರಕೃತಿ ಯ ಮಡಿಲು ಕವನ ತುಂಬಾ ಸೊಗಸಾಗಿದೆ
ಧನ್ಯವಾದಗಳು ಮೇಡಂ
ನಿಜ ವನ, ಹಸಿರು, ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ
ನಮ್ಮೊಳಗಿರುವ ಸ್ವಾರ್ಥಿ ಮನುಜ ಇದನ್ನು ಅನುಸರಿಸುವನೆ.
ಸೊಗಸಾದ ಪ್ರಕೃತಿಯ ಕಳಕಳಿಯುಳ್ಳ ಕವನ
ಧನ್ಯವಾದಗಳು
ಪ್ರಕೃತಿ ಪರಿಸರ ಅದನ್ನು ರಕ್ಷಿಸುವ ಬಗೆ ಹಾಗೂ ಅದರೊಳಗೆ ನಮ್ಮ ಬದುಕು ನೆಡಸುವ ಜವಾಬ್ದಾರಿ ಯನ್ನು ಕವನದ ಮೂಲಕ ವ್ಯಕ್ತಪಡಿಸಿರುವ ರೀತಿ ಚೆನ್ನಾಗಿದೆ ಮೇಡಂ.
ಧನ್ಯವಾದಗಳು ಮೇಡಂ
ಉತ್ತಮ ಸಂದೇಶವುಳ್ಳ ಚೆಂದದ ಕವನ.
ಧನ್ಯವಾದಗಳು ಹೇಮಕ್ಕ
ಚಂದದ ಕವನ
ಸುಂದರ ಪ್ರಕೃತಿಯ ಅಗಣಿತ ವೈಭವವು ನಮ್ಮ ಕಣ್ಮುಂದೆಯೇ ಇದ್ದರೂ ಕುರುಡರಂತಾಗಿರುವ ನಮ್ಮ ಕಣ್ಣು ತೆರೆಸುವಂತಿದೆ, ಚಂದದ ಕವನ, ಪ್ರಕೃತಿಯ ಮಡಿಲು.
ಪ್ರಕೃತಿಯನ್ನು ಕಾಪಿಟ್ಟುಕೊಳ್ಳುವಲ್ಲಿ ಎಷ್ಟು ಎಚ್ಚರ ವಹಿಸಿದರೂ ಸಾಲದಾದ ಇಂದಿನ ದಿನಗಳಲ್ಲಿ ಮತ್ತೊಮ್ಮೆ ಮನುಜನನ್ನು ಎಚ್ಚರಿಸುತ್ತಾ ಪ್ರಕೃತಿಯ ಸೌಂದರ್ಯವನ್ನೂ ಮನಮುಟ್ಟುವಂತೆ ವರ್ಣಿಸಿದ್ದೀರಿ, ಅಭಿನಂದನೆಗಳು.
ಬೇಕೇನು ಇದನೆಲ್ಲಾ ಬಿಟ್ಟು ಹಸುರಿಲ್ಲದ ಮರುಳುಗಾಡು
ಆ ಸಾಲಿನಲ್ಲಿ ಎಲ್ಲಾ ಅಡಗಿದೆ,,, ಮಾರ್ಮಿಕವಾಗಿದೆ
ಮೇಡಂ ಕವನ ತುಂಬಾ ಚೆನ್ನಾಗಿದೆ