ಹೂಗವಿತೆಗಳು-ಗುಚ್ಛ 5

Share Button

1
ಚಿಟ್ಟೆಯೊಂದು ಹೂವುಗಳ ಹೊದ್ದು
ನಲಿಯುತ್ತಿದೆ
ದೊಡ್ಡ ಜಾತ್ರೆಯಲ್ಲಿ
ಹೂವಿನ ಚಿತ್ತಾರದ ಉಡುಗೆಯ
ಉತ್ಸಾಹದ ಹುಡುಗಿ

2
ಹಸಿರು ಚಿಗುರು
ಹೂವ ಕಂಪುಗಳ ನಡುವೆ
ಕುಹು ಕುಹೂ ದನಿಯಿದೆ
ಮಾವಿನ ಮರದ ಚೆಲುವ
ಕೋಗಿಲೆ ಹೊಗಳುತಿರಬಹುದೇ?!

3
ಹೂವಿನಂತಿದ್ದಳು ಹುಡುಗಿ
ಇದ್ದಕ್ಕಿದ್ದಂತೆಯೇ
ರೆಕ್ಕೆಗಳ ಕಟ್ಟಿಕೊಂಡು
ಚಿಟ್ಟೆಯಾದಳು
ಹಾರಿ ಹೋದಳು

4
ನನ್ನ ಸಾವಿನ ನಂತರ
ನೀನು ಬಂದು
ನನ್ನ ಸಮಾಧಿಯ ಮೇಲೊಂದು
ಹೂವಿಟ್ಟರು ಸಾಕು
ನನ್ನಾತ್ಮ ಸೀದಾ ಸ್ವರ್ಗಕ್ಕೆ!

5
ನೀನು ಹೋದ ಮೇಲೆ
ಈ ಗಿಡದ ಹೂವುಗಳು
ಸುಮ್ಮನೆ ಅರಳಿ ಉದುರುತ್ತಿವೆ

6
ಎಷ್ಟೊಂದು ಹೂವುಗಳ
ಬಣ್ಣ ಮೆತ್ತಿಕೊಂಡಿದೆ
ಈ ಚಿಟ್ಟೆಯ ರೆಕ್ಕೆಗಳಿಗೆ

ನವೀನ್ ಮಧುಗಿರಿ

5 Responses

 1. ನಯನ ಬಜಕೂಡ್ಲು says:

  Beautiful

 2. ಹೂಗುಚ್ಚಗಳ ಕವನ. ..ಚೆನ್ನಾಗಿ ಮೂಡಿಬಂದಿದೆ..
  ಧನ್ಯವಾದಗಳು ಸಾರ್.

 3. . ಶಂಕರಿ ಶರ್ಮ says:

  ಸೂರ್ಯಕಾಂತಿಯ ಚಂದದ ಹೂಗುಚ್ಛ

 4. Padmini Hegade says:

  2nd, 3rd, 4th and 5th one are meaningful !

 5. Padma Anand says:

  Very Nice

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: