ಹೂಗವಿತೆಗಳು-ಗುಚ್ಛ 6

Share Button

1
ನೀನು ಹೋದ ಮೇಲೆ
ಈ ಗಿಡದ ಹೂವುಗಳು
ಸುಮ್ಮನೆ ಅರಳಿ ಉದುರುತ್ತಿವೆ

2
ಎಷ್ಟೊಂದು ಹೂವುಗಳ
ಬಣ್ಣ ಮೆತ್ತಿಕೊಂಡಿದೆ
ಈ ಚಿಟ್ಟೆಯ ರೆಕ್ಕೆಗಳಿಗೆ

3

ಹೂವುಗಳಿಗೆ ಬಣ್ಣಗಳ
ಬಳಿದವರು ಯಾರಿರಬಹುದು?
ಇದು ನನ್ನ ಪ್ರಶ್ನೆ
ಉತ್ತರದೊಂದಿಗೆ
ದೇವರು ಮಾಯವಾಗಿದ್ದಾನೆ!

4
ಗಾಳಿಯೊಂದಿಗೆ ಹೊರಟಿದ್ದ
ಹೂವಿನ ಘಮವನ್ನು
ಮನಸಿಗೆ ತುಂಬಿಕೊಂಡಿದ್ದೇನೆ
ನಿನ್ನ ನೆನಪಿನ ಜೊತೆ
ಅದೂ ಇರಲಿ

5
ಹೂಮಾಲೆ ಕಟ್ಟುವ
ಕೈಗಳಿಗೆ
ಸಾವಿರ ಹೂಗಳ
ಸಾವಿರ ಸೂತಕ

ನವೀನ್ ಮಧುಗಿರಿ

4 Responses

  1. ನಯನ ಬಜಕೂಡ್ಲು says:

    ಚಂದದ ಹನಿಗಳು

  2. ಮುದಕೊಡುವ ..ಹೂವಿನ.. ಹನಿಗವನಗಳು… ಧನ್ಯವಾದಗಳು ಸಾರ್

  3. ಶಂಕರಿ ಶರ್ಮ says:

    ಚಂದದ ಹೂಗಳಿಗಾಗಿ ಸುಂದರ ಕಿರುಕವನಗಳು

  4. Padmini Hegde says:

    ಹೊಸ ಗ್ರಹಿಕೆಯ ಚುಟುಕುಗಳು!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: