ಹೂಗವಿತೆಗಳು-ಗುಚ್ಛ 7

Share Button

1
ರೈತನ ಹೊಲದಲ್ಲಿ
ಬೆಳೆದ ಹೂವಿನ
ಮಕರಂದ ಹೀರುವ
ಜೇನು ಹುಳುಗಳು
ಸುಂಕ ಕಟ್ಟುವುದಿಲ್ಲ

2
ಸಂತಸದ ರೆಕ್ಕೆ ಕಟ್ಟಿಕೊಂಡು
ಅತ್ತಿಂದಿತ್ತ ಹಾರಿದೆ ಚಿಟ್ಟೆ
ಹೂವಿಗೆ ಸುತ್ತಲೂ ರೆಕ್ಕೆ

3
ಚಳಿಯ ಮುಂಜಾವಿನಲ್ಲೂ
ದಾಸವಾಳ
ಅರಳಿಕೊಳ್ಳುತ್ತಿದೆ

4
ಭಕ್ತನೊಬ್ಬ ಕೀಳಬೇಕಿದ್ದ
ಹೂವನ್ನು
ಕೀಟವೊಂದು ತಿನ್ನುತ್ತಿದೆ
ಇದು ದೇವರ ಸೃಷ್ಟಿ

5
ಗದ್ದಲ ತುಂಬಿದ ಮಾರುಕಟ್ಟೆಯೊಳಗೆ
ಹೂವಿನ ಪರಿಮಳ
ಸದ್ದು ಮಾಡದೇ ಅಲೆಯುತ್ತಿದೆ!

6
ಹೂವ ಪ್ರೀತಿಸುವೆ,
ದುಂಬಿಯನ್ನೂ..
ನಾನೀಗ ಯಾರ ಪರ ನಿಂತು
ನ್ಯಾಯ ಹೇಳುವುದು!

ನವೀನ್ ಮಧುಗಿರಿ

4 Responses

  1. ಸೊಗಸಾದ..ಹೂ..ಕವನಗಳು… ಧನ್ಯವಾದಗಳು ಸಾರ್

  2. ನಯನ ಬಜಕೂಡ್ಲು says:

    ಸೊಗಸಾಗಿವೆ

  3. ಶಂಕರಿ ಶರ್ಮ says:

    ಸೊಗಸಾದ ಕವನ ಗುಚ್ಛ .

  4. Padmini Hegde says:

    ನಾಲ್ಕನೆಯದು, ಆರನೆಯದು ಹೆಚ್ಚು ಅರ್ಥವ್ಯಾಪ್ತಿ ಹೊಂದಿವೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: