ಸಮಯದ ಗೊಂಬೆಗಳು….
ಅವನ ನಿಯಮದಂತೆ ಆಡುವ
ನೋವು ನುಂಗಿ, ನಗುತಾಡುತ
ಜೀವನ ನಾಟಕ ಅಭಿನಯಿಸುವ
ನಾವು ಸಮಯದ ಗೊಂಬೆಗಳು.
ನಿನ್ನೆಯ ಅನುಭವ ಪಾಠವ
ನಾಳೆಯ ಪರೀಕ್ಷೆಗಾಗಿ ಓದುತ
ಇಂದೇ ತಯಾರಿ ನಡೆಸುವ
ನಾವು ಸಮಯದ ಗೊಂಬೆಗಳು.
ಇರುವುದೆಲ್ಲವನು ಬಿಟ್ಟು
ಇರದುದರೆಡೆಯ ಹುಡುಕುತ
ಇರುವವರೆಗೂ ಬದುಕುವ
ನಾವು ಸಮಯದ ಗೊಂಬೆಗಳು.
ಹೊಟ್ಟೆಬಟ್ಟೆಗಾಗಿ ನಾನಾ ವೇಷ ತೊಟ್ಟು
ಹುಟ್ಟೂರ ಬಿಟ್ಟು ಊರೂರು ಅಲೆದು
ಕಷ್ಟ ಕಾರ್ಪಣ್ಯಗಳಲ್ಲಿ ಬದುಕುತ್ತಿರುವ
ನಾವು ಸಮಯದ ಗೊಂಬೆಗಳು.
ತಾಯ್ತಂದೆ, ಬಂಧು ಮಿತ್ರರು
ಮನೆ ಮಡದಿ ಮಕ್ಕಳಿಗಾಗಿ
ಬಾಳೆಲ್ಲ ಹೆಣಗಾಡಿ ಹೋಗುವ
ನಾವು ಸಮಯದ ಗೊಂಬೆಗಳು.
–ಶಿವಮೂರ್ತಿ.ಹೆಚ್, ದಾವಣಗೆರೆ.
ನಮ್ಮಂತಹ ನೂರಾರು ಜನ ಕವಿ ಮಿತ್ರರಿಗೆ ಸದಾ ಪ್ರೋತ್ಸಾಹಿಸುವ ಸಂಪಾದಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಹೌದು… ನಾವೆಲ್ಲರೂ ಸಮಯದ ಗೊಂಬೆ ಗಳೇ…ಅರ್ಥ ಪೂರ್ಣ ವಾದ ಕವನ…ಧನ್ಯವಾದಗಳು ಸಾರ್
ಧನ್ಯವಾದಗಳು ಮೇಡಂ
ಚಂದದ ಕವನ. ಬಹಳ ಚೆನ್ನಾಗಿ ಹೇಳಿದ್ರಿ ಸರ್, ಹೌದು ನಾವು ವಿಧಿ ಆಡಿಸುವ ಸಮಯದ ಗೊಂಬೆಗಳೇ.
ಧನ್ಯವಾದಗಳು ಮೇಡಂ
ನಿಜ…ನಾವು ಸಮಯದ ಗೊಂಬೆಗಳು!! ಬಹಳ ಅರ್ಥಪೂರ್ಣ ಕವನ.
ಧನ್ಯವಾದಗಳು ಸರ್