ಪುಸ್ತಕ ಪರಿಚಯ:’ವಾಟ್ಸಾಪ್ ಕಥಾಮಾಲಿಕೆ’, ಲೇ: ಶ್ರೀಮತಿ ಬಿ.ಆರ್.ನಾಗರತ್ನ
ಶ್ರೀಮತಿ ಬಿ.ಆರ್ ನಾಗರತ್ನ ಅವರಿಗೆ ಚಂದ್ರಾವತಿಯ ಪ್ರೀತಿಪೂರ್ವಕ ನಮಸ್ಕಾರಗಳು.
ನಾನು ನೀವು ಬರೆದ ‘ಮರೆತು ಮಲಗುವ ಮುನ್ನ’ ‘ವಾಟ್ಸಾಪ್ ಕಥಾಮಾಲಿಕೆ’ ಹಾಗೂ ‘ಪುಸ್ತಕಾವಲೋಕನ’ ಈ ಮೂರು ಪುಸ್ತಕಗಳನ್ನು ಓದಿದೆ. ಬಹಳ ಸಂತಸವಾಯಿತು.
ನಾನು ಕೇವಲ ಓದುಗಳು ಮಾತ್ರ. ನನ್ನ ವಿದ್ಯಾಭ್ಯಾಸವೂ ಕಡಿಮೆ,. ಪುಸ್ತಕ ವಿಮರ್ಶೆ ಮಾಡಲು ನನಗೆ ತಿಳಿಯದು. ನಿಮ್ಮ ಪುಸ್ತಕಗಳನ್ನು ಓದಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಭಾವನಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನವಿದು. ನಿಮ್ಮ ಪುಸ್ತಕಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.
‘ಮರೆತು ಮಲಗುವ ಮುನ್ನ’ – ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ನಡದ ಘಟನೆಗಳನ್ನು ಕಥೆಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದೀರಿ. ಆ ಲೇಖನಗಳನ್ನು ಓದುವಾಗ ಲೇಖಕಿ ಬಿ.ಆರ್ ನಾಗರತ್ನ ಅವರು ಬಹುಮುಖ ಪ್ರತಿಭೆಯುಳ್ಳ ಉತ್ಸಾಹಿ ಮಹಿಳೆಯೆಂದು ತಿಳಿಯುತ್ತದೆ.
ವಾಟ್ಸಾಪ್ ಕಥೆಗಳ ಶಿರೋನಾಮೆ ಮತ್ತು ಚಿತ್ರಗಳು ಚೆನ್ನಾಗಿವೆ. ಪ್ರತಿರ್ಯೊಂದು ಕಥೆಯಲ್ಲಿಯೂ ಯಾವುದಾದರೂ ಉತ್ತಮ ನೀತಿ ಇರುವಂತೆ ಕಥೆ ಹೆಣೆದುದರಿಂದ, ಸಣ್ಣ ಮಕ್ಕಳಿಗೆ ಕಥೆ ಹೇಳಲಿ ಈ ಪುಸ್ತಕವು ಬಹಳ ಉಪ್ಯುಕ್ತವಾಗಿದೆ. ನನಗೆ ತುಂಬಾ ಹಿಡಿಸಿತು. ಈ ರೀತಿ ಇನ್ನಷ್ಟು ಬರೆಯುತ್ತಿರಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಹೆಚ್ಚುತ್ತಿರಲಿ ಎಂದು ಹಾರೈಸುತ್ತೇನೆ.
ನಮಸ್ಕಾರಗಳು.
-ಚಂದ್ರಾವತಿ.ಬಿ, ಬೆಂಗಳೂರು
ಹೃತ್ಪರ್ವಕ ಧನ್ಯವಾದಗಳು… ಮೇಡಂ
ಆತ್ಮೀಯವೆನಿಸುವ ಸುಂದರ ಪುಸ್ತಕ ಪರಿಚಯ ಅಕ್ಕಾ..ಖುಷಿಯಾಯ್ತು.
ಚಿಕ್ಕ, ಚೊಕ್ಕ ಪುಸ್ತಕ ಪರಿಚಯ. ಅಭಿನಂದನೆಗಳು, ಇಬ್ಬರಿಗೂ.