ದೀಪಾವಳಿಯ ದೀಪೋತ್ಸವ
ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/
ಆನಂದ ಪರಮಾನಂದದಲಿ ಭೂಲೋಕವು ಸಂಭ್ರಮಿಸುತಿದೆ/
ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/
ಉಲ್ಲಾಸದಲ್ಲಿ ಪ್ರಪಂಚವು ಆಶಾವಾದಿತ್ವದಲ್ಲಿ ಸಡಗರಿಸುತಿದೆ
ದೀಪಾವಳಿಯ ದೀಪೋತ್ಸವ ಎಲ್ಲೆಲ್ಲೂ ದೀಪಾವಳಿಯ ದೀಪೋತ್ಸವ
ಕತ್ತಲೆ ಕರಗಿಸಿ ಬೆಳಕನು ಬೆಳಗಿಸಿ ಆಚರಿಸುವ ಹರಿದಿನ/
ಆಶಾವಾದದಲಿ ಶುಭ ಹಾರೈಸುವ ಪಾವನ ಪವಿತ್ರ ದಿನ/
ಸತ್ಯವ ಪೂಜಿಸಿ ಮಿಥ್ಯವ ಧ್ವಂಸಿಸಿ ಬಾಳುವ ಶುಭದಿನ/
ನಲ್ನಂಬಿಕೆಯಲಿ ಬಾಗ್ಯವ ಬಯಸುವ ಪುಣ್ಯ ಪೂಜ್ಯದಿನ
ದೀಪಾವಳಿಯ ದೀಪೋತ್ಸವ ಎಲ್ಲೆಲ್ಲೂ ದೀಪಾವಳಿಯ ದೀಪೋತ್ಸವ
ನರಕನ ವಧಿಸಿದ ಶ್ರೀಕೃಷ್ಣನ ನೆನೆಯುವ ಸಮಯವು/
ಧನಲಕ್ಷ್ಮಿಯ ಪೂಜಿಸಿ ತ್ರಿವಿಕ್ರಮನ ಸ್ಮರಿಸುವ ಕ್ಷಣವು/
ಹಣತೆಗಳ ಜ್ಯೋತಿಯಲಿ ಹರಿದು ಬರುವ ಉತ್ಸವವು/
ನವನೂತನ ಬದುಕನು ಬಯಸುವ ಅನಂದ ದಿನವು /
ದೀಪಾವಳಿಯ ದೀಪೋತ್ಸವ ಎಲ್ಲೆಲ್ಲೂ ದೀಪಾವಳಿಯ ದೀಪೋತ್ಸವ
– ಮಿತ್ತೂರು ಎನ್. ರಾಮಪ್ರಸಾದ್
ಕವಿತೆ… ಚೆನ್ನಾಗಿದೆ… ಧನ್ಯವಾದಗಳು.. ಸಾರ್.
ದೀಪಾವಳಿಯ ದೀಪೋತ್ಸವದ ವರ್ಣನೆ ಸುಂದರ ಪದಗಳಲ್ಲಿ ಚೆಂದದಿ ಮೂಡಿ ಬಂದಿದೆ ಅಭಿನಂದನೆಗಳು.
ಸೊಗಸಾದ ಸಕಾಲಿಕ ಕವನ