ಬೆಳಕಿನ ಹಣತೆ

Share Button

ಮನದ ದುಗುಡ ಕಳೆಯೋಣ
ಬಾಳ ಕತ್ತಲ  ಗೆದ್ದು ನಿಲ್ಲೋಣ
ಎಣಿಕೆಗೆ  ಸಿಗದ ದೀಪಾವಳಿಯ
ಹಣತೆಯಲಿ ಎಣ್ಣೆಯೊಡನೆ
ಬತ್ತಿಯಾಗುತ  ಲೀನವಾಗೋಣ |

ಕಗ್ಗತ್ತಲಿನಿಂದ ಬೆಳಕಿನೆಡೆಗೆ
ಸಾಗುವ ಆಸೆಯ ಹೊತ್ತು
ಕಷ್ಟಗಳ ನಡುವೆ ಒಂದಷ್ಟು
ಬೆಳಕನರಸುವ ಭರವಸೆ ಹೊತ್ತು
ದೀಪದಿಂದ ದೀಪ ಹಚ್ಚೋಣ |

*ತಮಸೋಮಾ ಜ್ಯೋತಿರ್ಗಮಯಾ*
ಎನುತ ಸ್ನೇಹಮಮತೆಯ ಹಂಚುತ
ಒಲುಮೆಯ ಗೆಳೆಯರ ಕುಾಡುತ
ಬಂಧುಗಳ ಬಂಧನ ಬೆಸೆಯುತ
ಪ್ರೀತಿಯ ಹಣತೆ ಹಚ್ಚೋಣ |

ಹಣತೆಯಾರಿದ ಮೇಲೆ ಕತ್ತಲಲಿ
ಕೈ ಚಾಚಿ ತಡಕಾಡುವ ಮುನ್ನ
ಇರುವಷ್ಟು ಹೊತ್ತು ನಗುತ
ಕಾಲಕಳೆಯುವ ಮನಸ ಹೊತ್ತು
ಪ್ರೀತಿಯ ಸುಧೆಯ ಹಂಚೋಣ ||

– ಡಾ ಸುಧಾ ಜೋಶಿ
ಚಿತ್ರಕೃಪೆ:-ಲೀನಾಸಂದೇಶ್

8 Responses

 1. Vijayasubrahmanya says:

  ಬೆಳಕಿನ ಹಣತೆ ಹಾಸ್ಯವನ್ನೂ ಬೆಳಗಿದೆ.

 2. ಬದುಕಿಗೆ…ಭರವಸೆಯನ್ನು..ಬೆಳಕಿನ.. ಹಣತೆಯ…ಕವನದಲ್ಲಿ..
  ಕಟ್ಟಿ ಕೊಟ್ಟಿರುವ…ನಿಮಗೆ… ಅಭಿನಂದನೆಗಳು.. ಮೇಡಂ…

  • Dr. Sudha Joshi says:

   ಧನ್ಯವಾದಗಳು,
   ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು

 3. Padma Anand says:

  ಸದಾಶಯದ ಸುಂದರ ಕವಿತೆ. ಅಭಿನಂದನೆಗಳು.

  • ಡಾ. ಸುಧಾ ಜೋಶಿ. says:

   ಧನ್ಯವಾದಗಳು
   ಹಬ್ಬದ ಹಾರ್ದಿಕ ಶುಭಾಶಯಗಳು

  • ಡಾ. ಸುಧಾ ಜೋಶಿ. says:

   ಧನ್ಯವಾದಗಳು
   ಹಬ್ಬದ ಶುಭಾಶಯಗಳು

   • ಶಂಕರಿ ಶರ್ಮ says:

    ಉತ್ತಮ ಸಂದೇಶ ಹೊತ್ತ ಕವನ ಪ್ರಣತಿಯು ಬೆಳಕು ಬೀರಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: