ನುಡಿದಂತೆ ನಡೆದ ದೈವ……..

Share Button
ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ

ಕಂಡುಕೊಂಡ ಜ್ಞಾನವ ಹಂಚುವುದೇ ಪರಮ ಧರ್ಮ ಎಂದು ನಂಬಿದ ಯೋಗಿ
ತಾನು ಸ್ವತಃ ಪಾಲಿಸುತ್ತಾ ಉಪದೇಶ ನೀಡಿದ ಆಧ್ಯಾತ್ಮ ಜ್ಯೋತಿ

ಆಡಂಬರದ ಜೀವನ ತೊರೆದು ಸಂಚಾರಿ ಬದುಕ ಅಪ್ಪಿಕೊಂಡ ನಿಜ ವಿರಾಗಿ
ಮೆಲುಧ್ವನಿಯಲ್ಲಿ ಬಾಳಿನ  ತತ್ವ ಸಾರಿದ ಸರಳ ಜೀವಿ

ಪದವಿ ಪಟ್ಟ ಬಯಸದೆ ಜನ ಮಾನಸದಲಿ ನೆಲೆಯೂರಿದ ಸ್ವಾಮೀಜಿ
ಬಹು ಎಕರೆಗಳ ಹೊಲ ಹಲವು ಅಂಕಣದ ಮನೆ ಬಿಟ್ಟು ಮಠ ಸೇರಿದ ಮಾನವತಾವಾದಿ

ನಿಸರ್ಗದ ಚೆಲುವನ್ನು ಮನದುಂಬಿಕೊಂಡು ಮಗುವಿನಂತೆ ಸಂಭ್ರಮಪಡುತ್ತಿದ್ದ ಮುಗ್ಧ ಮನಸ್ವಿ
ಬದುಕಿದ ಪ್ರತಿ ಕ್ಷಣವನ್ನು ಸಾರ್ಥಕತೆಗೆ ಮುಡಿಪಾಗಿಟ್ಟ ಸಾತ್ವಿಕ ಶಿರೋಮಣಿ

ಮೌಢ್ಯತೆ ಕಳೆದು ಮೌಲ್ಯಗಳ ಬಿತ್ತಲು ಶ್ರಮಿಸಿದ  ಸಂತ
ಉದ್ವೇಗ ಆವೇಗವಿಲ್ಲದ ಸಕಲವ ತ್ಯಜಿಸಿದ ಸನ್ಯಾಸಿ

ದೂರವಾದ ಚೇತನವ ನೆನೆದು ಕಣ್ಣು ತುಂಬಿ ಬರುತಿದೆ
ಭಾರವಾದ ಮನದಲಿ  ಅವರದೇ ಅಮೃತವಾಣಿಯು ರಿಂಗಣಿಸಿದೆ

ನಿಧಾನಗತಿಯಲಿ ಹೆಜ್ಜೆ ಹಾಕುತ ಬರುವ ಶ್ವೇತ ವಸ್ತ್ರಧಾರಿ ಇನ್ನಿಲ್ಲ
ಉಪಮೆ ಹೋಲಿಕೆಗಳ ನೀಡುತಾ ಮಂತ್ರ ಮುಗ್ದವಾಗಿಸುವ ಮಾತುಗಾರ ಇನ್ನು ಬರುವುದಿಲ್ಲ

ಸ್ಮಾರಕ ಸ್ಥಾವರಗಳ ಬೇಡವೆಂದ ಜೀವಕೆ ಮನದಲ್ಲೇ ಗುಡಿ ಕಟ್ಟೋಣ
ಯಾರನ್ನು ದೂರದ ದ್ವೇಷಿಸಿಸದ ದೈವ ಮಾನವನ ಸನ್ನಡತೆಯ ಪುಷ್ಪದಿಂದ ಪೂಜಿಸೋಣ

ಜಗದ ಜಂಗಮನ ಆದರ್ಶಗಳನ್ನು ನಮ್ಮ ಉಸಿರಾಗಿಸೋಣ

ಕೆ.ಎಂ ಶರಣಬಸವೇಶ.

7 Responses

 1. ಇತ್ತೀಚಿಗೆ ಅಗಲಿದ ಸಂತರ ಬಗ್ಗೆ ಬರೆದಿರುವ ಕವನ ಅರ್ಥಪೂರ್ಣ ವಾಗಿದೆ ಸಮಯೋಚಿತ ವಾಗಿದೆ..ಧನ್ಯವಾದಗಳು ಸಾರ್

 2. ನಯನ ಬಜಕೂಡ್ಲು says:

  ಚೆನ್ನಾಗಿದೆ

 3. SHARANABASAVEHA K M says:

  ಪ್ರಕಟಿಸಿದ ಹೇಮಾ ಮೇಡಂ ಗೆ ಹಾಗೂ ಪ್ರತಿಕ್ರಿಯೆ ನೀಡಿದ ನಾಗರತ್ನ ಮೇಡಂ ಹಾಗೂ ನಯನ ಮೇಡಂ ಅವರಿಗೆ ಧನ್ಯವಾದಗಳು

 4. ಜಗದ ಜಂಗಮನ ಆದರ್ಶಗಳನ್ನು ಬಣ್ಣಿಸಿರುವ ಕವನ ಹೃದಯಸ್ಪರ್ಶಿಯಾಗಿದೆ

 5. Padma Anand says:

  ಕವಿತೆ ಭಾವಪೂರ್ಣ ಶ್ರದ್ಧಾಂಜಲಿಯ ದ್ಯೋತಕವಾಗಿದೆ.

 6. SHARANABASAVEHA K M says:

  ಗಾಯತ್ರಿ ದೇವಿ ಸಜ್ಜನ್ ಮೇಡಂ ಹಾಗೂ ಪದ್ಮಾ ಆನಂದ ಮೇಡಂ ಅವರಿಗೆ ಧನ್ಯವಾದಗಳು

 7. ಶಂಕರಿ ಶರ್ಮ says:

  ಪವಿತ್ರಾತ್ಮನಿಗೆ ಅರ್ಥಪೂರ್ಣ ನುಡಿ ನಮನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: