ಬಹುಕೋಶದೊಳಗೆ ನೀ ಬಂದಾಗ

Share Button


ಏಕಾಂಗಿಯ ಸರಳತೆಯಲ್ಲಿ
ಏಕಕೋಶವಾಗಿ
ಕಾಮನ ಬಿಲ್ಲ ಬಣ್ಣಗಳ
ರಂಗೇರಿಸಿ
ಬಹುಮುಖವಾಗಿ
ಛಾಪನ್ನು ಮೂಡಿಸಿದ
ನಿನ್ನ ಅವತಾರ ಮೆಚ್ಚಲೇಬೇಕು…

ಕೊಳೆಯದ ಕಸವಾಗಿ
ಹಾರಾಡಿ,  ತೂರಾಡಿ
ಚೂರಾಗಿ ಜಠರದಲ್ಲಿ
ನೋವಿಗೂ ಕಾರಣವಾಗಿ
ಮಾರಣಾಂತಿಕ ರೋಗಗಳ
ತವರಾದರೂ ಬಿಡದ
ನಿನ್ನ ಅವತಾರ ಮೆಚ್ಚಲೇಬೇಕು…..

ಗೃಹದೊಳಗೆಲ್ಲಾ ನಿನ್ನದೇ
ಕಾರಾಬಾರು
ದವಾಖಾನೆಯೊಳಗೂ
ನಿಲ್ಲದ ದರ್ಬಾರು
ನಗರೀಕರಣದಲೂ
ಪಾತ್ರದಳಗಿನ ಪ್ರಮುಖ
ಬೇಡೆಂದರೂ ನುಗ್ಗುವ
ನಿನ್ನ ಅವತಾರ ಮೆಚ್ಚಲೇಬೇಕು….

ಹೋರಾಟ ನಿನ್ನ ತಡೆಗಾಗಿ
ಅಲ್ಲೂ ಬಿಂಬಿಸುವೆ
ನೀರ ಹಿಡಿಕೆಯಾಗಿ
ಜೀವ ಗುಟುಕಿನ ಕುರುಹಾಗಿ
ಸುಟ್ಟರೂ ಬೂದಿಯಾಗದೆ
ಮರುಬಳಕೆಯಾಗುವ
ನಿನ್ನ ಅವತಾರ ಮೆಚ್ಚಲೇಬೇಕು….

ಆಧುನೀಕರಣದ ಸೋಗು
ಅಲಂಕಾರದಲಿ ಬೀಗಿ
ಅಳಿದಷ್ಟು ಎದ್ದು ನಿಲ್ಲುವ
ಮರೆತಷ್ಟು ಕಣ್ಣಿಗೆ ಸುಳಿವ
ಆಕರ್ಷಣೆಯ ರೂಪಕ್ಕಿಳಿವ
ನಾನಾವತಾರಿಯ ವಿಶ್ವ ಜಾತ
ನಿನ್ನ ಅವತಾರ ಮೆಚ್ಚಲೇಬೇಕು……

-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ 

8 Responses

 1. Anonymous says:

  ಧನ್ಯವಾದಗಳು

 2. ಅದರ ಅವತಾರವನ್ನು ಧರೆಗೆ ಇಳಿಸಿದವರ್ಯಾರು…ಗೆಳತಿ ಕವನ ಚೆನ್ನಾಗಿದೆ.

 3. Padmini Hegde says:

  ಪದ್ಯ ಚೆನ್ನಾಗಿ ಮೂಡಿಬಂದಿದೆ!,

 4. ನಾನಾವತಾರಿ ಪ್ಲಾಸ್ಟಿಕ್ ಮಹಿಮೆಯನ್ನು ವಿಡಂಬನಾತ್ಮಕ ವಾಗಿ ಬಣ್ಣಿಸಿರುವ ಕವನ ಸೊಗಸಾಗಿದೆ

 5. ನಯನ ಬಜಕೂಡ್ಲು says:

  ಚೆನ್ನಾಗಿದೆ ಕವನ

 6. S.sudha says:

  ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡುವುದೊಂದೇ ದಾರಿ.

 7. ಶಂಕರಿ ಶರ್ಮ says:

  ರಾಕ್ಷಸಾವತಾರಿ ಪ್ಲಾಸ್ಟಿಕ್ ಹಾವಳಿ ಭೂಮಿಯನ್ನೇ ಧ್ವಂಸ ಮಾಡುವಂತಿದೆ! ಇನ್ನು ಇದನ್ನು ಧ್ವಂಸ ಮಾಡಲು ದೇವರೇ ಅವತಾರ ಎತ್ತಿ ಬರ್ಬೇಕೇನೋ!! ಕವನ ಚೆನ್ನಾಗಿದೆ.

 8. Padma Anand says:

  ಸುಂದರ ಕವಿತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: