ಕಳಚಿಡದ ಮುಖವಾಡ
ಎಲ್ಲರ ನೋವಿನಲಿ
ಇವರದೆ ಮುತುವರ್ಜಿ.
ಅಯ್ಯಯ್ಯೋ …
ಅನ್ಯಾಯ …
ಎಂದು
ಬೊಬ್ಬಿಡುವ ಮೋಡಿ.
ಹೋರಾಟದ
ನೆಪದಲ್ಲಿ
ಮಾತ್ರ ಇವರದು
ಬೆಕ್ಕಿನಾಟದ ನೋಟ
ಉತ್ತರನ ಪ್ರಲಾಪ
ಸತ್ಯವನ್ನು ಮರೆಮಾಚಿ
ಅಸತ್ಯವನ್ನೇ ಬಂಡವಾಳವಾಗಿಸುವ
ಇವರದು
ಸಂಚಕಾರದ ಪ್ರವೃತ್ತಿ
ಒಳಿತು ಮಾಡುವವರಲ್ಲ
ಒಳಿತು ಬಯಸುವವರೂ ಅಲ್ಲ
ಒಳಿತಾಗದಂತೆ ತಡೆಯಲು
ಸದಾ ಕಸರತ್ತಲ್ಲೇ ಇರುವ
ಇವರು ಕಸರತ್ತುಗಾರರು
ಮತ್ಸರದಲಿ ಇವರದು
ಕಿಚ್ಚು ಹಚ್ಚಿಸುವ
ಕಾಯಕ
ಕಿಚ್ಚಿನಲಿ ಅವರಿವರು
ಕುದಿವಾಗ
ಒಳಗೊಳಗೆ
ಅದೇನೋ ಮಂದಹಾಸ ಇವರದು
ಸಂಚಿಗೆ ಇನ್ನಷ್ಟು
ಕನಸು ಕಾಣುವ
ಇವರದು
ಕಳಚಿಡದ ಮುಖವಾಡ.
-ಉಮೇಶ ಮುಂಡಳ್ಳಿ ಭಟ್ಕಳ.
ವಾವ್ ಸತ್ಯಸ್ಥ ಸತ್ಯವಾದ ಅನುಭವವನ್ನು ಕವನದಲ್ಲಿ ಪಡಿಮೂಡಿಸಿರುವ ನಿಮಗೆ ವಂದನೆಗಳು ಸಾರ್
ಕಳಚಿಡದ ಮುಖವಾಡ ಹೊತ್ತ ಮನುಜರ ಮುಖವಾಡವನ್ನು ಕಳಚುವ ಪ್ರಯತ್ನ ಮಾಡಿದ ಸೊಗಸಾದ ಕವಿತೆ.
ಚೆನ್ನಾಗಿದೆ ಕವನ
ಆಷಾಢಭೂತಿಗಳ ಮುಖವಾಡ ಕಳಚುವರಾರು
ಈ ಮುಖವಾಡವೇ ಅವರ ನಿಜವಾದ ಮುಖವಾಗಿಬಿಟ್ಟಿದೆ
ಅರ್ಥಪೂರ್ಣವಾದ ಕವನ
ಹಿತ ಶತ್ರುಗಳು ಎಂದು ಕರೆಯಬಹುದಾದ ಇಂತಹವರಿಂದ ಸಮಾಜದ ಸ್ವಾಸ್ಥ್ಯಕ್ಕೆ ಭಂಗ ಉಂಟಾಗುವುದು ಅಷ್ಡೆ.
ಕಟು ಸತ್ಯದ ಅನಾವರಣದ ಕವನ.