ತೊರೆದು ಜೀವಿಸಬಹುದೇ…. ಡೀಸೆಲ್

Share Button

ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು. ನಾವು ನಡೆದಾಡುವ ರಸ್ತೆಯಲ್ಲಿ ಡರ್ ಬುರ್ ಎಂದು ಸದ್ದು ಮಾಡುವ ವಾಹನಗಳು ಇಲ್ಲದ ರಸ್ತೆಯ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.  ಹಾಗಾದರೆ ಆ ಜಗತ್ತಿಗೆ ಲಗ್ಗೆಯಿಟ್ಟ ಪೆಟ್ರೋಲ್,ಡೀಸಲ್ ಇಲ್ಲದ ಜಗತ್ತನ್ನೂ  ಊಹಿಸಲೂ ಸಾಧ್ಯವಿಲ್ಲ ಅಲ್ಲವೇ… ಅದಕ್ಕೆ ಪೂರಕವಾಗಿ ವಿದ್ಯುತ್ ಬ್ಯಾಟರಿಗಳು ಬಂದಿದ್ದರೂ ಸಹಾ ಹೆಚ್ಚು ಪ್ರಚಲಿತದಲ್ಲಿರುವುದು ಡೀಸಲ್, ಪೆಟ್ರೋಲ್ ಗಳಂತಹ ಭಾರ ತೈಲಗಳೇ.

ಕಾರು,ಬಸ್,ವ್ಯಾನ್,ಎಂಜಿನ್, ಟ್ರ್ಯಾಕ್ಟರ್ ಗಳು ಡೀಸೆಲ್ ಕುಡಿದು ಜೀವಿಸಿದರೆ ಉಳಿದ ವಾಹನಗಳು ಪೆಟ್ರೋಲ್ ಕುಡಿದು ಜೀವಿಸುತ್ತವೆ.  ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿರುವ ಈ ಡೀಸಲ್ ನ್ನು ಜಗತ್ತಿಗೆ ಕೊಟ್ಟವರು ಯಾರು ಗೊತ್ತಾ?   ಅವರೇ ರುಡಾಲ್ಫ್ ಡೀಸಲ್.  ಇವರ ಹೆಸರಿನಲ್ಲೇ ಇದೆ ಡೀಸೆಲ್. ಡೀಸೆಲ್ ಇದು ಒಬ್ಬರ ನಾಮಧೇಯ.  ಇವರು ಭಾರತೈಲ ಉಪಯೋಗಿಸಿ ಯಂತ್ರವೊಂದನ್ನು ಕಂಡುಹಿಡಿಯುತ್ತಾರೆ.  ಆ ಭಾರ ತೈಲಕ್ಕೆ ತಮ್ಮ ಹೆಸರನ್ನೇ ಇಟ್ಟು ಕೊಳ್ಳುತ್ತಾರೆ.  ಈ ಭಾರತೈಲ ಅಳವಡಿಸಿಕೊಂಡಿರುವ ಯಂತ್ರಗಳಿಗೆ ಅಥವಾ ಉಪಕರಣಗಳಿಗೆ ‘ಡೀಸೆಲ್’ ಎಂದು ಹೆಸರಾಯಿತು. 

ಡೀಸೆಲ್ ಬೆಳೆದುಬಂದ ದಾರಿಗೆ ಮರಳುವುದಾದರೆ, ಯೂರೋಪ್ ನಲ್ಲಿ ಪ್ರಪಂಚದ ಮೊದಲ ಮಹಾಯುದ್ಧ ಪ್ರಾರಂಭವಾಗುವ ಮೊದಲು ಡ್ರೆಸ್ಟನ್ ಎಂಬ ಉಗಿದೋಣಿಯು ಆಂಟ್ ವರ್ಷನಿಂದ ಲಂಡನ್ಗೆ ಬ್ರಿಟೀಷ್ ಕಡಲುಗಾಲುವೆಯಲ್ಲಿ ಬರುತ್ತಿತ್ತು.  ಈ ದೋಣಿಯಲ್ಲಿ ಇದ್ದ ರುಡಾಲ್ಫ್ ಡೀಸಲ್ ಕಾಣೆಯಾಗುತ್ತಾನೆ.  ಅವನೊಂದಿಗೆ  ಅವನ ಬಳಿ ಇದ್ದ ಡೀಸಲ್ ನ ಶಕ್ತಿ ಬಳಕೆಮಾಡುವ ಕುರಿತು ಬ್ರೀಟೀಷ್ ಸರ್ಕಾರದೊಡನೆ ಮಾತನಾಡಬೇಕಾದ ರಹಸ್ಯ ಪತ್ರಗಳೂ ಸಹಾ ಅವರೊಡನೆ ಕಣೆಯಾಗುತ್ತವೆ.ಆದರೆ ಒಬ್ಬ ಇಂಜಿನಿಯರ್ ಗೆ ಮಾತ್ರ ಇವನು ಕಳುವಾದದ್ದು ಗೊತ್ತಿತ್ತು.  ಆದರೆ ಡೀಸೆಲ್ ಮುಂದೊಂದು ದಿನ ಪ್ರಖ್ಯಾತಿ ಹೊಂದುವುದನ್ನು ತಮ್ಮ ಪತ್ರಿಕೆಯಲ್ಲಿ ಬರೆದುಕೊಂಡಿದ್ದರು.

1858 ನೇ ಡಿಸೆಂಬರ್ 8 ರಲ್ಲಿ ಜನಿಸಿದ ಡೀಸೆಲ್ ,  ಆನ್ಸಬರ್ಗ ಮತ್ತು ನ್ಯೂರೆಂಬರ್ಗ್ ದಂಪತಿಗಳಿಗೆ ಮಗನಾಗಿ ಜನ್ಮತಾಳುತ್ತಾರೆ.  ಮೂರುನಾಲ್ಕು ಭಾಷೆಗಳು ತಂದೆತಾಯಿಯ ಬಳುವಳಿಯಾಗಿ ಬಂದವು.  ಚಿಕ್ಕಂದಿನಿಂದಲೂ ಯಂತ್ರ ಸಾಧನ ಸಲಕರಣೆಗಳ ಬಗ್ಗೆ ಇದ್ದ ಆಸಕ್ತಿ ಕಂಡು ತಂದೆತಾಯಿ ಅವನಿಗೆ ಅದೇ ಕೆಲಸಕ್ಕೆ ಪ್ರೋತ್ಸಾಹ ನೀಡಿದರು.  ನೋಡಿ ಚಿಕ್ಕ ಮಕ್ಕಳು ಯಾವುದರ ಬಗ್ಗೆ ಆಸಕ್ತಿ ವಹಿಸುವರೋ ಅದರ ಬಗ್ಗೆ ಪೋಷಕರು ಪ್ರೋತ್ಸಾಹ ನೀಡಿ ನೀರೆರದರೆ ಏನಾದ್ರೂ ಸಾಧನೆ ಮಾಡುವರೆಂಬುದಕ್ಕೆ ಎಲ್ಲಾ ಸಾಧಕರೇ ಸಾಕ್ಷಿ. 

ಹತ್ತು ಹಲವಾರು ಸಮಸ್ಯೆಗಳ ನಡುವೆ ಅತೀ ಕಿರಿಯವಯಸ್ಸಿನಲ್ಲೇ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ವಿದ್ಯಾರ್ಥಿ ವೇತನವನ್ನು ಸಂಪಾದಿಸಿದ ಕೀರ್ತಿ ಇವನದು.  ಕಾಲೇಜು ಉಪನ್ಯಾಸಕರೊಬ್ಬರು ಒಂದು ದಿನ ತರಗತಿಯಲ್ಲಿ ಹಬೆ ಮತ್ತು  ಅನಿಲ ಎಂಜಿನ್ ಗಳ ನ್ಯೂನತೆಗಳನ್ನು ಕುರಿತು ಪ್ರಸ್ತಾಪಿಸುತ್ತಿದ್ದರು.  ಇದರ ಮೇಲಿನ ಚರ್ಚೆಯೇ ಡೀಸೆಲ್ ಜೀವನದಲ್ಲಿ ಒಂದು ತಿರುವನ್ನು ತರಲು ಕಾರಣವಾಯಿತು. ಡೀಸೆಲ್ ಪದವಿ ಮುಗಿಸಿ ವಾನ್ ಲಿಂಡ್ ರವರ ಶೀತಕರ ಯಂತ್ರ ತಯಾರಿಕೆಯ ಸಂಸ್ಥೆಯಲ್ಲಿ ನೌಕರಿಗೆ ಸೇರಿ ಸಾಕಷ್ಟು ಅನುಭವವನ್ನು ಪಡೆಯುತ್ತಾರೆ.  ಸಂಕೋಚನೆ ಮತ್ತು ಸಂಕುಚನಗಳ ಮೇಲೆ ಅಪಾರ ಜ್ಞಾನ ಸಂಪಾದಿಸುತ್ತಾರೆ.  ಇದರ ಫಲವಾಗಿ “ಅಮೋನಿಯಾ ಧೂಮದ ಮೋಟಾರು” ಇದರ ಮೇಲೆ ಪ್ರೆಂಚ್ ಭಾಷೆಯಲ್ಲಿ ಮಂಡಿಸುತ್ತಾರೆ.  ನಾಲ್ಕು ಸ್ಟ್ರೋಕ್ ಸೈಕಲ್ ಅಭಿವೃದ್ಧಿ ಪಡಿಸಿದರು.

ಹಲವು ಅನುಭವಗಳನ್ನು ನಾನಾಕಡೆಯಿಂದ ಸಂಪಾದಿಸಿದ ನಂತರ “ಅಂತರ್ದಹನ ಎಂಜಿನ್ನುಗಳ ಕಾರ್ಯವಿಧಾನ” (working processes for internal combustion) ಕುರಿತು ಪೇಟೆಂಟ್ ಪಡೆಯುವರು.  ಈ ವಿಚಾರದಲ್ಲಿ ಮುಖ್ಯವಾದ ಅಂಶವೆಂದರೆ ನೈಸರ್ಗಿಕ ಇಂಧನದ ಶಾಖವನ್ನು ವರ್ತುಲನಾಳಿಯೊಳಗಂತೆ ಕೆಲಸವಾಗಿ ಪರಿವರ್ತಿಸುವುದೇ ಆಧಾರ. ಇಂಧನ ಸಿಡಿಯುವುದರ ಬದಲು ಸಂಕೋಚನ ಕ್ರಿಯೆಗೊಳಗಾದ ಗಾಳಿಯನ್ನು ವರ್ತುಲನಾಳಿಯೊಳಗೆ ನುಗ್ಗಿಸಿದ್ದು.  ಆಕ್ಷಣದಲ್ಲಿ ಆದ ಬದಲಾವಣೆಯೆಂದರೆ ಇಂಧನವನ್ನು ದಹನ ಮಾಡುವುದಕ್ಕೆ ಬೇಕಾದ ಉಷ್ಣಾಂಶ ಮಟ್ಟವನ್ನು ಗಾಳಿಯು ಮುಟ್ಟುವುದು.  ಹೀಗೆ ಶಾಖ ದಹನ ಕ್ರಿಯೆ ಫಲವಾಗಿ ಅಗ್ಗದ ಭಾರವಾದ ತೈಲವನ್ನು ಇಂಧನವನ್ನಾಗಿ ಬಳಸಬಹುದು ಎಂಬುದನ್ನು ಸತತ ಪ್ರಯತ್ನದಿಂದ ಅತ್ಯುತ್ತಮವಾದ “ಹೀಟ್ ಎಂಜಿನ್” ಅತೀ ಹತ್ತಿರ ಎಂದು ಭಾವಿಸಿದ.

PC: Internetಈ ಸಿದ್ಧಾಂತವನ್ನು ಇಟ್ಟುಕೊಂಡು ಮಿಷನ್ ತಯಾರಿಸಲು ಕೆಲವು ಸಂಸ್ಥೆಗಳಿಗೆ ಭೇಟಿ ನೀಡಿದಾಗ ನಿರಾಕರಣೆಯ ಅವಮಾನವನ್ನು ಎದುರಿಸಬೇಕಾಗುತ್ತದೆ. ಯಾರೇ ಸಂಶೋಧಕರಾಗಿ, ಯಾವುದೇ ತರಹದ ಸಾಧಕರಾಗಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದು ಕಡಿಮೆಯೇ. ಎಲ್ಲಾ ತರಹದ ಸೋಲು ಅವಮಾನವನ್ನು ಎದುರಿಸಿ ಆನಂತರ ಗೆಲುವಿನ ಹೊಸ್ತಿಲಲ್ಲಿ ನಿಲ್ಲುತ್ತಾರೆ.   ಇದು ಸರ್ವೇಸಾಮಾನ್ಯ.  ಇಂತಹ ಒಂದು ಗೆಲುವಿನ ಮೆಟ್ಟಿಲು ಹತ್ತಲು ರುಡಾಲ್ಫ್ ಮಾಡಿದ್ದೇನೆಂದರೆ  ತನ್ನ ಸಂಶೋಧನೆಯ ಸಿದ್ಧಾಂತವನ್ನು ಪುಸ್ತಕವಾಗಿ ಪ್ರಕಟಿಸಿದ್ದು.  ಆ ಪುಸ್ತಕವನ್ನು ಓದಿದ ಅದೇ ನಿರಾಕರಣೆಯ ಸಂಸ್ಥೆಯವರು ಎಂಜಿನ್ ನಿರ್ಮಾಣ ಮಾಡಲು ಒಪ್ಪಿದರಂತೆ.  ನೋಡಿ ಗೆಲುವು ಪುಸ್ತಕ ರೂಪದಲ್ಲಿ ಒಲಿದು ಬಂದಿತ್ತು. 

1839 ರಲ್ಲಿ ತನ್ನ ಮೊದಲ ಎಂಜಿನನ್ನು ತಯಾರಿಸಿ ಚಾಲೂ ಮಾಡಿದ. ಆದರೆ ಅದು ಸಿಡಿದು ಜೀವಕ್ಕೆ ಸಂಚಕಾರ ತಂದಿತು. ಆದರೆ ತನ್ನ ಸಿದ್ಧಾಂತವು ಗೆಲುವು ತಂದಿತಲ್ಲ ಎಂದು ಖುಷಿಪಟ್ಟ. ಆದರೆ ಬೆಂಬಿಡದೆ ಮತ್ತೆ 1895 ರಲ್ಲಿ ಮತ್ತೆ ಹೊಸದನ್ನು ತಯಾರಿಸಿದ.  ಅದಕ್ಕೊಂದು ಹೆಸರುಕೊಡುವಲ್ಲಿ ತಲೆಕೆಡಿಸಿಕೊಂಡವನಿಗೆ ಅವನ ಹೆಂಡತಿ ಸೂಚಿಸಿದ್ದು ಅವನ ಸಂಶೋಧನೆಗೆ ಅವನ ಹೆಸರನ್ನೇ ಇಡುವಂತೆ ಸೂಚಿಸಿದಳು.   ಅಂದಿನಿಂದ ಆ ಇಂಧನ “ಡೀಸಲ್” ಎಂದು ಹೆಸರಾಯಿತು.

ಸಾಧಕರು ಮೇಲೆ ಬಂದಾಗ ಕಾಲೆಳೆಯುವವರು ಸಹಜವಲ್ಲವೇ.  ಜನ ಯಾವುದೇ ಗೆಲುವನ್ನು ಸಹಿಸುವುದಿಲ್ಲ.  ಡೀಸೆಲ್ ಗೂ ಕೂಡಾ ನಾನಾ ಮಾನಸಿಕ ಹಿಂಸೆ, ಟೀಕೆಗೆ ಗುರಿಯಾಗಿದ್ದೂ ಉಂಟು.  ಇಂತಹ ಒತ್ತಡದಲ್ಲಿ ಕೋರ್ಟ್, ಕಛೇರಿ, ಬೆದರಿಕೆ ಇವುಗಳನ್ನು ಎದುರಿಸಿದ್ದರೂ ಸಹಾ “ಡೀಸೆಲ್” ಇಂದಿಗೂ ಎಲ್ಲಾ ರಸ್ತೆಯಲ್ಲಿ ಓಡಾಡುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಮಾತ್ರ ಸುಳ್ಳಲ್ಲ.   

ಅಂದು ರುಡಾಲ್ಫ್ ತನ್ನ ಸಿದ್ಧಾಂತವನ್ನು ಬರೆಹರೂಪದಲ್ಲಿ ತರಲಿಲ್ಲವೆಂದರೆ ಡೀಸೆಲ್ ನ ಸಾಧನೆ ಬಹುಶಃ ಯಾರಿಗೂ ತಿಳಿಯುತ್ತಿರಲಿಲ್ಲ.   ಈಗಲೂ ಕೂಡಾ ಅಷ್ಟೇ ಬರೆಹಕ್ಕೆ ಇರುವ ಶಕ್ತಿ,  ಬರೆಹದಿಂದ ಹೊರ ಬಂದ ಪುಸ್ತಕಕ್ಕೆ , ಪತ್ರಿಕೆಗೆ ಅಥವಾ ಬರೆಹವನ್ನು ವರ್ಗಾಯಿಸುವ ಹಾಳೆಗೆ ಇರುವ ಶಕ್ತಿ ಯಾವುದಕ್ಕೂ ಇಲ್ಲವೆಂದೇ ನನ್ನ ಭಾವನೆ.   ಇಂದು ಯೋಚಿಸಿದ ಆಲೋಚನೆಗಳು ಸದಾ ನಮ್ಮಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ.  ಏಕೆಂದರೆ ಇಂದಿನ ನೆನಪು ಮತ್ತು ಜೀವ ಎರಡೂ ಶಾಶ್ವತವಲ್ಲ. 

-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ 

5 Responses

 1. ಸಮತಾ ಆರ್ says:

  ಮಾಹಿತಿ ಪೂರ್ಣ ಉತ್ತಮ ಲೇಖನ

 2. ನಯನ ಬಜಕೂಡ್ಲು says:

  ಮಾಹಿತಿಪೂರ್ಣ ಲೇಖನ

 3. ಉತ್ತಮ ಮಾಹಿತಿಯುಳ್ಳ ಲೇಖನ..ಚಿಕ್ಕದಾದರೂ ಚೊಕ್ಕ ವಾಗಿದೆ…ಸೋದರಿ..

 4. ಶಂಕರಿ ಶರ್ಮ says:

  ಡೀಸೆಲ್ ನ ಹುಟ್ಟು, ಬೆಳವಣಿಗೆಯ ಕುರಿತ ಲೇಖನ ಸಂಗ್ರಹಯೋಗ್ಯವಾಗಿದೆ.

 5. Padma Anand says:

  ಡೀಸಲ್ಲಿನ ಜೀವನ ಪಯಣದ ವೃತ್ತಾಂತದ ಜೊತೆಗೆ ಪುಸ್ತಕ ರೂಪದಲ್ಲಿ ಸಂಗ್ರಹಿಸಿ ಪ್ರಕಟಿಸುವುದರಿಂದಾಗುವ ಉಪಯೋಗವನ್ನೂ ಲೇಖನ ತಿಳಿಸಿಕೊಟ್ಟಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: