ಅಕ್ಷರದಕ್ಷರ ದೀವಟಿಗೆ

Share Button

ಜನ ಸಂಕಲ್ಪಕೆ ಅಮಿತ ಹರಕೆಯ ಬಲವು
ವರಣ ಕಳಚಿಳಿದು ಅಳಲು ನಗೆ ಹೊನಲಾಯ್ತು
ಲ್ಲಿಗೇತಕೆ ಬಂದೆ ಯಾವ ಪ್ರಾರಬ್ಧವೋ
ನೇನು ಕಾದಿಹುದೋ ಭೀತಿ ಕಂಪನವೇನು

ಘೋರ ಚಿಂತನೆಯೇ? ರೋಧನವು ಮುಗಿಲಾಯ್ತು
ಪ್ಪು ಸಾಸಿವೆ ಹಿಡಿದು ಹಿರಿಯಾಕೆ ಕಳವಳದಿ
ಫೆನುತ ನೀವಳಿಸಿ ದೃಷ್ಟಿಯನು‌ ತೆಗೆಯುತ್ತ
ಷಿಯ ವಂಶಜ ನೀನು ಋಷಿ ಸದೃಶ ಮನವಿರಲಿ
(ಎಲ್ಲರೂ ಯಾರಾದರೂ ಒಬ್ಬ ಪುರಾತನ ಋಷಿಯ ವಂಶದವರು. ಅದನ್ನೇ ಗೋತ್ರವೆನ್ನುವರು)

ಲ್ಲ ಸುಖ ಸಂಪದವು ನಿನ್ನದಾಗಲಿ ಮಗುವೆ
ನೇನ ಬಯಸುವೆಯೊ ಸಕಲವೂ ಕೈಗೂಡಿ
ಸಿರಿಯ ಜೊತೆಗಿರಲಿ ಆಯುರಾರೋಗ್ಯಗಳು
ನ್ದು ಮಾತಿದು ಕಂದಾ ಎಂದಿಗೂ ಮರೆಯದಿರು

ದು ಜ್ಞಾನದ ನಿಧಿಯು ಕಳುವಾಗದೈಸಿರಿಯು
ನ್ನತ್ಯ ಪಡೆದರೂ ಮಣ್ಣ ಮೀರಲು‌ ಬೇಡ
ಅಂದಿನಂತಿಲ್ಲ ಜಗ ಆಮಿಷವು ಸ್ವರ್ಣಮೃಗ
ಅಹ ಇವನ ಯೋಗ್ಯತೆಯೆ ಎಂದು ನಗೆಯಾಡದೊಲು

ಣ್ಮಣಿಯೆ ಜಗಕೆಲ್ಲ ಬೆಳಕಾಗಿ ದಿಶೆಯಾಗು
ಳರು ಇರುವರು ಜಗದಿ ಮೈಯೆಲ್ಲ ಕಣ್ಣಾಗು
ಳಿಸಿದಾ ಧನ ಮಾತ್ರ ಸಂಪದವು‌ ಭ್ರಮೆ‌ ಸಲ್ಲ
ನವದಕು ಔದಾರ್ಯ‌ ಮಾನವೀಯತೆ ಸಹನೆ

ತುರೋಪಾಯಗಳ ಮರ್ಮವರಿತರೆ ಲೇಸು
ತ್ರ ಚಾಮರ ಸೇವೆ ಅಹಮಿಕೆಗೆ ಗೊಬ್ಬರವು
ನರ ಮಧ್ಯೆಯೆ ಇರುತ ಸರಳತನದಲಿ ಬಾಳು
ರಿ ಕಾನು ನದಿ ಮಲೆಯು ತನ್ನ ಸೊತ್ತೆನ್ನದಿರು

ವಳಿತನವಿರದಿರಲಿ ವಾಙ್ಮನಸು‌ ಕಾಯದಲಿ
ಕ್ಕು ಮನವಿರದಿರಲು ಆತ್ಮರತಿಗದು ಮಾರ್ಗ
ಮರುಧರನನು ನಂಬು ನರನ ಮೀರಿದ ಶಕುತಿ
ಗೆಗೆ ಆಸ್ಪದವಿತ್ತು ತನ್ನಾತ್ಮ ಕುಸಿಯದೊಲು
ಮೋ ಎನುತಲಿ ಬಾಗು ದಿವ್ಯ ಚೇತನಗಳಿಗೆ
(ಟವಳಿತನ = ಮೋಸಗಾರಿಕೆ, ವಂಚಕತನ. ಢಗೆ =ಕಳವಳ, ತಳಮಳ.  ಣಮೋ = ನಮಸ್ಕಾರ, ವಂದನೆ)

ನಗಲ್ಲದುದನೆಂದು ಯಾರಿಗೂ ನೀಡದಿರು
ಳುಕು ಬಳುಕಿಗೆ ಮನವ ತೆತ್ತು ಪಥ ತಪ್ಪದಿರು
ಯೆಯು ಮಿತಿಯಲ್ಲಿರಲಿ ಅರಿವಿನಂಕೆಯಲಿರಲಿ
ರ್ಮಕ್ಕಿರುವಾ ನಿಜದ ವ್ಯಾಖ್ಯೆಯನು ಅರಿಯುತಿರು
ರನಾಗಿ ಬೆಳೆಯುತಿಹೆ ನಾರಾಯಣನಾಗಿಬಿಡು

ರಿವಾರ ಜಗವೆನಲು ಪರಿಸರವೆ‌ ಪರಮಾತ್ಮ
ಲ ಪುಷ್ಪ ಜಲ ವಾಯು ನೆಲವವನ ಕಾರುಣ್ಯ
ನ್ದಿಹೆವು  ಕೆಲಕಾಲ ಯಾರು ಸ್ಥಿರವಾಗಿಹರು
ವದ ಮಾಯೆಗೆ ಸಿಲುಕಿ ಭ್ರಷ್ಟನಾಗದೆ ಇರುತ
ಮತೆಯ ಹಾರೈಕೆ ಮರೆಯದಂತಿರು ಚಿನ್ನ

ಕ್ಷ ಪ್ರಶ್ನೆಗೆ ಧರ್ಮ ಉತ್ತರಿಸಿ ಗೆಲ್ದ ಕತೆ
ಕ್ಷಕನು ಇಹನೆಂಬ ನಂಬಿಕೆಗೆ ಅದುವೆ ಬಲ
ವದಷ್ಟೆ ನಮ್ಮಾಯು ಬ್ರಹ್ಮಾಂಡದಿದಿರಿನಲಿ
ನ್ಚಿಸುತ ಅಂತಕನ ಉಳಿದು ಬೀಗಿದರಿಹರೆ
ಮೆ ದಮೆಯ ಬಾಳುವೆಯು ವಿತತವಾದುದು ಮಗುವೆ
ಡಕ್ಷರವಷ್ಟಾಕ್ಷರವೊ ಉಸಿರಾಗಿ ಧಮನಿಗಿರೆ

ವಾಲೆಸೆವ ಬೆಟ್ಟಗಳ ಮೆಟ್ಟುವ ಧೃತಿಗಿಂಬು
ಸುಳೆತನದಿಂ ಬಳೆದು ಪೂರ್ಣತೆಯ‌ ಕಡೆಗಿರುವೆ
ಳವಳಿಕೆ ಕಳೆ ಕಂದಾ ಬಾಳು ಮೌಲ್ಯದ ಬಾಳು
ಹಾದಿಗಿದು ಬುತ್ತಿಯೆನು ಕೈಮರವು ದೀವಿಗೆಯು
ಹಿರಿಯರಾಶೀರ್ವಾದ‌ ಹಡೆದವರ ಹರಕೆಗಳ
ಹೀರುತಿರು ಸಂಭ್ರಮದಿ ಬಾಳ ಸಂತಸ ಸುಖವ
ಹುರಿಗೊಂಡು ಕ್ಷಣಕ್ಷಣವು ವ್ಯರ್ಥವಾಗದೆ ಬಾಳು
ಹೂಟವಿದೆ ಕೂಟವಿದೆ ಹಾಲು ಹಾಲಾಹಲವು
ಹೃದ್ಯವಿದೆ ವಧ್ಯವಿದೆ ತಂತಿಯಲಿ‌ ಕಸರತ್ತು
ಹೆದರಿದರೆ ಏನುಂಟು ಇಳಿದು ಬಂದಾಗಿಹುದು
ಹೇಳಿಕೆಗೆ ಮನ ತೆರದೆ ಅರಿವ ಕೈಗಿಡು‌ ಚಿತ್ತ
ಹೈರಾಣಗೊಳ್ಳದಿರು ಜಗವನೆದುರಿಸಬೇಕು
ಹೊಸದಲ್ಲ‌ ಹೋರಾಟ ಗೆದ್ದವಗೆ ಜಯಪೀಠ
ಹೌಹಾರಬೇಕಿಲ್ಲ ಕೈಮರವ ನೆಟ್ಟಿಹರು
ಹಂದರವು ಸನಿಹವಿದೆ‌ ಬಾಳು‌ ಮಗು ಕೈ‌ವಿಡಿದು.

(ಷಡಕ್ಷರೀ ಮಂತ್ರ :- ಓಂ ನಮಃ ಶಿವಾಯ.
ಅಷ್ಟಾಕ್ಷರೀ ಮಂತ್ರ :- ಓಂ ನಮೋ ನಾರಾಯಣಾಯ.
ಹೇಳಿಕೆ :- ಅವರಿವರ ಮಾತು)

– ರತ್ನಾ ಮೂರ್ತಿ

9 Responses

 1. Anonymous says:

  ಅಕಾರಾದಿ ಕವನ ಚಂದವಿದೆ

 2. ಕನ್ನಡದ ಅಕ್ಷರಗಳಿಂದ ರಚಿಸಲ್ಪಟ್ಟ ಕವನ ತುಂಬಾ ಚೆನ್ನಾಗಿದೆ

 3. ಅಕ್ಷರಗಳನ್ನು ಬಳಸಿ ರಚಿಸಿರುವ ಕವನ ತುಂಬಾ ಚೆನ್ನಾಗಿದೆ.. ಮೇಡಂ

 4. Padmini Hegde says:

  ಬದುಕಿನ ವಿಶ್ಲೇಷಣೆ, ಮಾರ್ಗದರ್ಶನದ ರೀತಿಗೆ ಅಕ್ಷರ ಜೋಡಣೆ ಚೆನ್ನಾಗಿದೆ

 5. ವಿದ್ಯಾ says:

  ಅಮೋಘ

 6. ನಯನ ಬಜಕೂಡ್ಲು says:

  ತುಂಬಾ ಚೆನ್ನಾಗಿದೆ ಕವನ

 7. ಶಂಕರಿ ಶರ್ಮ says:

  ಅತ್ಯುತ್ತಮ ಸಂದೇಶಯುಕ್ತ ಅಕ್ಷರಮಾಲೆಯ ಕವನ ಸೂಪರ್

 8. Hema Mala says:

  ಅಕ್ಷರ ದೀವಟಿಗೆ ಕವನದಲ್ಲಿ ಬೀರಿದ ‘ಬೆಳಕು’ ಇಷ್ಟವಾಯಿತು.

 9. ಎಚ್. ಆನಂದರಾಮ ಶಾಸ್ತ್ರೀ says:

  ಅಕ್ಷರಕ್ಷರದ ದೀವಟಿಗೆ
  ಲೋಕಸತ್ಯದ
  ಸಾಕ್ಷಾತ್ ದರ್ಶನ ಮಗುವಿಗೆ,
  ಮನಸೆಂಬ ಮಗುವಿಗೆ.
  ಅಕಾರಾದಿ ಅಕ್ಷರ ಕಾವ್ಯಮಾಲೆ
  ಚಕ್ಷು ಉನ್ಮೀಲನಗೊಳಿಪ
  ಅ-ಕ್ಷರ ಮಾರ್ಗದರ್ಶಿ
  ಜೀವನಪಥಿಕ ಮಾನವಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: