ಮುಕ್ತಕಗಳು

Share Button

1

ಮೊದಲಾಗಿ ಗಣಪನಿಗೆ ಬಾಗಿಹೆನು ಪೊಡಮಡುತ
ಮುದಮನದಿ ನೆನೆಯುತಲಿ ಬಹು ಭಕುತಿಯಿಂದ
ಪದತಲವ ಸುಮಗಳಲಿ ಪೂಜಿಸುತ ವಂದಿಸುವೆ
ವರನೀಡಿ ಸಲಹೆಮ್ಮ ಬನಶಂಕರಿ

2

ಮನದೊಳಗೆ  ಸುಳ್ಳುಗಳ ಕಂತೆಯನು ಹೆಣೆಯುತಿರೆ
ಮನದಲ್ಲಿ ಮುಳ್ಳಿನಾ ಬಾಣವದು ನಾಟಿ
ನನಸಿನಲಿ ನೆಮ್ಮದಿಯ ಬಾಗಿಲದು ತೆರೆಯುವುದು
ಅನುದಿನವು ನಿಜ ನುಡಿಯೆ ಬನಶಂಕರಿ

3

ಬಿಳಿಯಿರುವ ಸಕಲವೂ ಹಾಲೆಂದು ನಂಬದಿರು
ಒಳಿತು ಕೆಡುಕುಗಳೆಡೆಗೆ ನಿಗವಿಡಲು ಬೇಕು
ಮಲಿನವಾಗಿಹ ಮನವ ತಿಳಿಗೊಳಿಸುತಿರುವಂತೆ
ಬಲ ನೀಡಿ ಹರಸು ನೀ ಬನಶಂಕರಿ 

4

ಅಡೆತಡೆಗಳಾಗದೆಯೆ ಕೆಲಸಗಳು ತಾ ನಡೆದು
ಕಡಿಮೆ ಸಮಯದ ಒಳಗೆ ಜಯಭೇರಿ ಹೊಡೆದು
ಒಡನಾಡಿಗಳು ನಾವು ಹರುಷದಲಿ ಮಿಂದೆದ್ದು
ಕರಮುಗಿದು ವಂದಿಪೆವು ಬನಶಂಕರಿ

5

ಗರಗರನೆ ತಿರುಗುತಿವೆ ಬುಗರಿಗಳು ಎಡೆಬಿಡದೆ
ತರತರದ ಪಥಗಳಲಿ ಬ್ರಹ್ಮಾಂಡದಲ್ಲಿ
ಸರಿಯಾಗಿ ಮಾಡುತಲಿ ನಿತ್ಯ ಕಾಯಕಗಳನು
ವಿರಮಿಸದೆ ಸಾಗುತಿರು ಬನಶಂಕರಿ

ಶಂಕರಿ ಶರ್ಮ, ಪುತ್ತೂರು.

7 Responses

 1. ಚಿಂತನೆ ಗೆ ಹಚ್ಚುವಂತಿದೆ ಮುಕ್ತಕಗಳು ಶಂಕರಿ ಮೇಡಂ …ಚೆನ್ನಾಗಿ ವೆ…

 2. Hema Mala says:

  ಅರ್ಥಪೂರ್ಣವಾದ ಮುಕ್ತಕಗಳು, ಚೆನ್ನಾಗಿವೆ.

  • ಶಂಕರಿ ಶರ್ಮ says:

   ಸುಂದರ, ಸೂಕ್ತ ಚಿತ್ರದೊಂದಿಗೆ ಪ್ರಕಟಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಸಂಪಾದಕಿ ಹೇಮಮಾಲಾ ಅವರಿಗೆ ಹೃತ್ಪೂರ್ವಕ ನಮನಗಳು.

 3. ನಯನ ಬಜಕೂಡ್ಲು says:

  ಚೆನ್ನಾಗಿದೆ

 4. ಅರ್ಥಪೂರ್ಣ ಮುಕ್ತಕಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: