“ಲೋಕಶಂಕರ” – ಕೃತಿಯ ವಾಚನ, ವ್ಯಾಖ್ಯಾನ

Share Button

ಹಿರಿಯ ಸಾಹಿತಿ, ʼರಸರಾಮಾಯಣʼದ ಕತೃ ಶ್ರೀ ಗಜಾನನ ಈಶ್ವರ ಹೆಗಡೆಯವರ ಕೃಷ್ಣಮೂರ್ತಿಪುರಂನ ʼಚಂಚಲʼ ಮನೆಯಲ್ಲಿ 21 ನೇ ಶುಕ್ರವಾರ ಸಂಜೆ, ಅವರ ತಾಯಿಯವರ ಸಂಸ್ಮರಣಾರ್ಥವಾಗಿ ಅವರ ಮತ್ತೊಂದು ಮೇರು ಕೃತಿ ʼಲೋಕಶಂಕರʼದ ʼಮಾತೆಯ ಮಡಿಲುʼ ಕಾಂಡದ ಆಯ್ದ ಭಾಗಗಳ ವಾಚನ, ವ್ಯಾಖ್ಯಾನ, ಲೇಖಕರಾದ ಓದುಗರು ಅರ್ಥೈಸಿದಂತೆ ಕಾವ್ಯಾನುಭೂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಕರ್ಣಾಟಕ ಕಲಾಶ್ರೀ ಗಮಕ ವಿದ್ವಾನ್‌ ಕೃ ರಾಮಚಂದ್ರ ಅವರು ಮನಮುಟ್ಟುವಂತೆ ವಾಚನ ಮಾಡಿದರೆ, ಶ್ರೀಯುತ ಬಿ ಪಿ ಅಶ್ವತ್ಥನಾರಾಯಣ ಅವರು ಒಳಾರ್ಥಗಳನ್ನು ವಿವರಿಸುತ್ತಾ ವಾಖ್ಯಾನ ಮಾಡಿದರು.

ಆಗಮಿಸಿದ್ದ  ಕವಿಗಳು, ಕವಯಿತ್ರಿಯರಲ್ಲನ್ನೇಕರು ʼಲೋಕಶಂಕರʼ ಕಾವ್ಯದ ಆಯ್ದ ಒಂದೊಂದು ಪದ್ಯವನ್ನು ʼಓದುಗರು ಅರ್ಥೈಸುವಂತೆʼ ಎಂಬ ಶೀರ್ಷಿಕೆಯಡಿ ತಾವು ರಸಾಸ್ವಾದನೆಯನ್ನು ಮಾಡಿದ ಪರಿಯನ್ನು ವೈವಿದ್ಯಮಯವಾಗಿ ವಿವರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಕಾಶವಾಣಿ ನಿಲಯದ ನಿವೃತ್ತ ಸಹಾಯಕ ನಿರ್ದೇಶಕರಾದ ಶ್ರೀ.ಶ್ರೀನಿವಾಸ್‌ ಅವರು ಜಗದ್ಗುರು ಶ್ರೀ ಶಂಕರಾಚಾರ್ಯರು ಮತ್ತು ʼಲೋಕಶಂಕರʼ ಕೃತಿಯ ಕುರಿತು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ದಿವಾಕರ ಹೆಗಡೆಯವರು ಮಾತನಾಡಿ ವಿದ್ವತ್ಪೂರ್ಣ ಕಾರ್ಯಕ್ರಮದ ಪಕ್ಷಿನೋಟವನ್ನು ನೀಡಿ, ಸನಾತನ ಹಿಂದೂ ಧರ್ಮ ಇತರ ಧರ್ಮಗಳ ಪ್ರಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಮಯದಲ್ಲಿ ಅವತರಿಸಿದ ಆದಿಗುರು ಶ್ರೀ ಶಂಕರಾಚಾರ್ಯರು ಸನಾತನ ಹಿಂದೂ ಧರ್ಮವನ್ನು ಪುನರುದ್ಧಾರ ಮಾಡಿದ್ದನ್ನು ಸ್ಮರಿಸುತ್ತಾ, ಚರಿತ್ರೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಕಾಲಾನುಕ್ರಮಕ್ಕೆ ಸಮನಾಗಿ ಮತ್ತೆ ಮತ್ತೆ  ಬರೆಯುತ್ತಿರಬೇಕು, ಹಾಗಾದಾಗ ಮಾತ್ರ ನವಪೀಳಿಗೆಗೂ ಅದು ಮುಟ್ಟುತ್ತದೆ.  ಈ ನಿಟ್ಟಿನಲ್ಲಿ ʼಲೋಕಶಂಕರʼ ಕಾವ್ಯದ ರಚನೆ ಅಭಿನಂದನೀಯ ಎನ್ನುತ್ತಾ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮವನ್ನು ಕೊಂಡಾಡಿದರು. 

ಡಾ.ಯಶಸ್ವಿನಿ ಹೆಗಡೆಯವರ ಪ್ರಾರ್ಥನೆಯೊಂದಿಗೆ ಸಮಯಕ್ಕೆ ಸರಿಯಾಗಿ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಪ್ರೊ.ಪದ್ಮಿನಿ ಹೆಗಡೆಯವರು ನಿರೂಪಿಸಿ ವಂದಿಸಿದರು.  ತಮ್ಮ  ಕೃತಿಯ ಕುರಿತಾಗಿ ಹಿರಿಯ ವಿದ್ವಾಂಸರ ವಾಚನ, ವ್ಯಾಖ್ಯಾನ, ಹಾಗೂ ಕವಿಗಳು ಮತ್ತು ಕವಿಯತ್ರಿರಿಂದ ಆಯ್ದ ಪದ್ಯಗಳ ವಿವರಣೆಯನ್ನು ರಸಾಸ್ವಾದಿಸಿದ ಕವಿ ಗಜಾನನ ಈಶ್ವರ ಹೆಗಡೆಯವರ ಮೊಗದಲ್ಲಿ ಸಂತೃಪ್ತಿ ಮನೆಮಾಡಿತ್ತು. ಲಘು ಉಪಹಾರದ ಆತಿಥ್ಯದೊಂದಿಗೆ ವಿದ್ವತ್‌ ಸಭೆ ಸುಸಂಪನ್ನಗೊಂಡಿತು.  

————————

ಕಾರ್ಯಕ್ರಮದಲ್ಲಿ  ಆಯ್ದ ಪದ್ಯಗಳ ಕುರಿತಾಗಿ ತಮ್ಮ ಭಾವಗಳನ್ನು ಹಂಚಿಕೊಂಡ ಕವಿಗಳು ಮತ್ತು ಕವಯಿತ್ರಿಯರು:

1. ಶ್ರೀ ವಿ.ನಾರಾಯಣರಾವ್‌
2. ಶ್ರೀಮತಿ ಪದ್ಮಾ ಆನಂದ್‌
3. ಶ್ರೀಮತಿ ಬಿ.‌ ಆರ್.  ನಾಗರತ್ನ
4. ಶ್ರೀಮತಿ ಕೆ. ಟಿ. ಶ್ರೀಮತಿ
5. ಡಾ. ಸುಧಾ ರಮೇಶ್‌
6. ಶ್ರೀ. ಎಂ. ಆರ್.‌ ಆನಂದ
7. ಶ್ರೀಮತಿ ಬಿ. ಕೆ. ಮೀನಾಕ್ಷಿ
8. ಶ್ರೀಮತಿ ಮಂಜುಳಾ ಸಿಂಹ
9. ಶ್ರೀಮತಿ  ಮ. ನ. ಲತಾ ಮೋಹನ್‌
10. ಶ್ರೀಮತಿ ಉಷಾ ನರಸಿಂಹನ್‌
11. ಶ್ರೀಮತಿ ಸುಮತಿ ಸುಬ್ರಹ್ಮಣ್ಯ
12.ಶ್ರೀಮತಿ ಕೆರೋಡಿ ಎಂ ಲೋಲಾಕ್ಷಿ

ಪದ್ಮಾ ಆನಂದ್, ಮೈಸೂರು

9 Responses

 1. MANJURAJ H N says:

  ಮನೆಮನೆಯ ಪ್ರತಿ ಮನವೂ ವಿದ್ವತ್ಪೂರ್ಣ. ಖುಷಿಯಾಯಿತು.

  ದೂರದೂರಿನ ಕೆಲಸ. ಹಾಗಾಗಿ ಹಾಜರಾಗಲಿಲ್ಲ. ಈ ವರದಿಯ ಬರೆಹದಿಂದ
  ಆ ಕೊರತೆ ಕಡಮೆಯಾಯಿತು. ಧನ್ಯವಾದಗಳು ಮೇಡಂ

 2. Padma Anand says:

  ಪ್ರಕಟಿಸಿದ್ದಕ್ಕಾಗಿ ಸುರಹೊನ್ನೆಗೆ ಧನ್ಯವಾದಗಳು.

 3. Anonymous says:

  ವರದಿ…ಇದು ಸುರಹೊನ್ನೆಯಲ್ಲಿ ಏಕೆ ಅದು ವಯಕ್ತಿಕ…ಸ್ಥಳೀಯಪತ್ರಿಕೆಯಲ್ಲಿ ಬರುವಂತಹದು..ಒಬ್ಬ ವ್ಯಕ್ತಿಯದೇ ಸಂಗತಿ ಎರಡು ಸಾರಿಬಂದಿದೆ..ಸಂಪಾದಕರು ಗಮನಿಸ ಬೇಕಾದ ಅಂಶ..ನನ್ನ ಅಭಿಪ್ರಾಯ..

  • Padma Anand says:

   ಓದುಗರಿಗೆ ಕಸಿವಿಸಿ ಎನ್ನಿಸಿದ್ದರೆ ಕ್ಷಮೆಯಿರಲಿ

 4. ನಯನ ಬಜಕೂಡ್ಲು says:

  ಚೆನ್ನಾಗಿದೆ ಕಾರ್ಯಕ್ರಮದ ವಿವರ.

 5. ಶಂಕರಿ ಶರ್ಮ says:

  ಕಾರ್ಯಕ್ರಮದ ವರದಿಯು ಅಚ್ಚುಕಟ್ಟಾಗಿ ಮೂಡಿಬಂದಿದೆ. ಧನ್ಯವಾದಗಳು ಪದ್ಮಾ ಮೇಡಂ.

  • Padma Anand says:

   ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ವಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: