ಹಳ್ಳಿ ಸೊಬಗು
ಹಳ್ಳಿ ಊರ ಸೊಬಗಲ್ಲಿ
ಅಂದ ಚೆಂದ ಚಿತ್ತಾರ
ನೋವು ನಲಿವ ಉಳಿವಲ್ಲಿ
ಬದುಕು ಹಾಡು ವಿಸ್ತಾರ
ಹಸಿರು ಗದ್ದೆ ಹಾಡೋ ತೋಟ
ಹಕ್ಕಿ ಬಳಗಕ್ಕೆ ಆಡಲು
ಗುಡ್ಡ ಬೆಟ್ಟ ಹೇಳೋ ಹಾಡ
ಚುಕ್ಕಿ ತಾರೆ ಕೇಳಲು
ದುಡಿವ ನಗು ಬೆವರ ಹನಿ
ಅನ್ನದುಸಿರು ಚೇತನ
ಮಣ್ಣ ಸಾರ ಮರದ ತಂಪು
ಹಳ್ಳಿ ದಾರಿಯ ಚಂದನ
ಹಾರೋ ಮೋಡ ತೇಲೋ ಗಾಳಿ
ಹಳ್ಳಿ ಸೊಗಡು ನೋಡಲು
ಚೆಂದ ಭಾಷೆ ಕವಿತೆಯೊಡಲು
ಊರ ಹಕ್ಕಿ ಹಾಡಲು
ಬಯಲು ನೆರಳು ಹಳ್ಳಿ ತೇರು
ತರು ಲತೆ ಇದರ ಸೂರು
ನಾಳೆ ಉಳಿವ ದಿನ ಮೂರು
ಸಗ್ಗ ನೆಲ ಹೊನ್ನ ಊರು
-ನಾಗರಾಜ ಬಿ.ನಾಯ್ಕ, ಕುಮಟಾ.
ಹಳ್ಳಿಗಳೆಲ್ಲಾ,,,ಪಟ್ಟಣವಾಗುವ ಭರದಲ್ಲಿ ಸಹಜ ಸೌಂದರ್ಯ ಮಾಸದಿರಲಿ,,
ಓದಿಗೆ ಧನ್ಯವಾದಗಳು
ಚಂದದ ಕವನ
ಓದಿಗೆ ಧನ್ಯವಾದಗಳು
ಹಳ್ಳಿಯ ಸೊಗಡನ್ನು ಕಟ್ಟಿಕೊಟ್ಟ ಸುಂದರವಾದ ಕಾವ್ಯ
ತಮ್ಮ ಓದಿಗೆ ಧನ್ಯವಾದಗಳು
ಪ್ರಕೃತಿಯ ಮಡಿಲಿನಲ್ಲಿರುವ ಹಳ್ಳಿಯ ಸೌಂದರ್ಯ ಯಥಾವತ್ತಾಗಿ ಮೂಡಿಬಂದ ಕವನ.
ತಮ್ಮ ಓದಿಗೆ ಧನ್ಯವಾದಗಳು