ಕಾವ್ಯ ಭಾಗವತ : ಸೃಷ್ಟಿ ರಹಸ್ಯ- 1
8.ದ್ವಿತೀಯ ಸ್ಕಂದ
ಅಧ್ಯಾಯ -3
ಸೃಷ್ಟಿ ರಹಸ್ಯ-1
ಈ ಜಗದೆಲ್ಲ ಸೃಷ್ಟಿ
ನಾರಾಯಣ ಸೃಷ್ಟಿ
ಅದೊಂದು ಶಕ್ತಿ
ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳು
ಆ ಶಕ್ತಿಯ
ಸತ್ವ ರಜೋ ತಮೋ
ಗುಣಗಳ ಲೀಲಾವಿನೋದಗಳು
ಎಲ್ಲವನು
ನಿಯಮಿಸುತ್ತಿರುವನು
ನಿಯಂತ್ರಿಸುತ್ತಿರುವನು
ಅವನೇ
ಮಾಯೆಯ ನಿರ್ಮಿಸಿ
ಎಲ್ಲವ ಕರ್ಮದಿಂದ ಬಂಧಿಸಿ
ಕಾಲ, ಕರ್ಮ, ಸ್ವಭಾವಗಳ
ಸೃಷ್ಟಿ ಕಾರ್ಯದಲಿ ಸ್ವೀಕರಿಸಿ
ಪ್ರಕೃತಿಯ
ಮಹತ್ತತ್ವದಿಂ
ದಶ ದಿಕ್ಕುಗಳ
ವಾಯು ಸೂರ್ಯ ವರ್ಣ ಜಲ
ಚಂದ್ರ ಆಕಾಶ
ಗಳನ್ನೆಲ್ಲ ನಿರ್ಮಿಸಿ
ಈ ಪೃಥ್ವಿಯ ಸೃಷ್ಟಿಸಿ
ಇವೆಲ್ಲವನು
ಜೀವಿಗಳಾತ್ಮದೊಂದಿಗೆ
ಸಂಯೋಗಗೊಳಿಸಿದ
ಆ ಪರಮಾತ್ಮನ ಸೃಷ್ಟಿ
ಈ ಬ್ರಹ್ಮಾಂಡ
ಈ ಬ್ರಹ್ಮಾಂಡದ
ಎಲ್ಲ ನಾವು ನೀವುಗಳು
ಜಲ ಭೂಮಿ ಆಕಾಶಗಳು
ದೇವತೆಗಳು ದಾನವರು
ಪರ್ವತಗಳೂ
ಪಶು ಪಕ್ಷಿ ಜ್ವಾಲೆಗಳೂ
ವೃಕ್ಷಗಳೂ
ಮಿಂಚು ಮೇಘವೆಲ್ಲವೂ
ಅವನಂಗಗಳ,
ಆ ಅಖಂಡ ಶಕ್ತಿಯ
ಸ್ವರೂಪಗಳೇ .
ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=40959
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತವನ್ನು ಕಾವ್ಯರೂಪದಲ್ಲಿ.. ಪಡಿಮೂಡಿಸುತ್ತಿರುವ ನಿಮ್ಮ ಪ್ರಯತ್ನ ಕ್ಕೆ ನನ್ನ ನಮನ ಸಾರ್..
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು
Nice
Thank you very much
ಪ್ರಕಟಿಸಿದ ಸುರಹೊನ್ನೆ,ಗೆ ಧಾನ್ಯವಾದಗಳು
ಭಾಗವತವನ್ನು ಸರಳ ರೂಪದಲ್ಲಿ ಕಾವ್ಯವಾಗಿಸುವ ತಮ್ಮ ಪ್ರಯತ್ನ ಶ್ಲಾಘನೀಯ ಸರ್.